Bank Locker Rules: ಬ್ಯಾಂಕ್ ಲಾಕರ್ ನಲ್ಲಿ ಇದ್ದ ಹಣವನ್ನ ಗೆದ್ದಲು ತಿಂದರೆ ಅದಕ್ಕೆ ಯಾರು ಹೊಣೆ…? RBI ಹೊಸ ನಿಯಮ.
ಬ್ಯಾಂಕ್ ಲಾಕರ್ ನಲ್ಲಿದ್ದ ಹಣ ಹಾನಿಗೊಳಗಾದರೆ ಯಾರು ಹೊಣೆ....?
Bank Locker Latest Update: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ Locker ವ್ಯವಸ್ಥೆ ಇದ್ದೆ ಇರುತ್ತದೆ. ಬ್ಯಾಂಕ್ ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಳ್ಳುವುದುರ ಮೂಲಕ ಹೆಚ್ಚಿನ ಸುರಕ್ಷತೆಯನ್ನು ಪಡೆಯಬಹುದು. ಇನ್ನು ಇತ್ತೀಚೆಗಷ್ಟೇ RBI Bank Locker ನಿಯಮವನ್ನು ಜಾರಿಗೊಳಿಸಿತ್ತು.
ಬ್ಯಾಂಕ್ ಲಾಕರ ಬಳಸುವ ಗ್ರಾಹಕರು ಕಡ್ಡಾಯವಾಗಿ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ನಿಯಮ ರೂಪಿಸಿತ್ತು. ಸದ್ಯ ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ಬ್ಯಾಂಕ್ ಲಾಕರ್ ನಲ್ಲಿ ಹಣವನ್ನು ಇರಿಸಿದ್ದಾರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ಬ್ಯಾಂಕ್ ಲಾಕರ್ ನಲ್ಲಿದ್ದ ಹಣ ಹಾನಿಗೊಳಗಾದರೆ ಯಾರು ಹೊಣೆ..?
ದೇಶದ ಲಕ್ಷಾಂತರ ಜನರು ತಮ್ಮ ಅಮೂಲ್ಯ ಆಸ್ತಿಗಳಾದ ಚಿನ್ನ, ಬೆಳ್ಳಿ ಮತ್ತು ನಗದನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ಅನ್ನು ಬಳಸುತ್ತಾರೆ. ಕೆಲವೊಮ್ಮೆ ಕಳ್ಳತನ, ಬೆಂಕಿ, ಭಯೋತ್ಪಾದಕರ ದಾಳಿ, ಗ್ರಾಹಕರ ನಿರ್ಲಕ್ಷ್ಯ, ಪ್ರವಾಹ ಅಥವಾ ನೈಸರ್ಗಿಕ ವಿಕೋಪಗಳಿಂದ ಬ್ಯಾಂಕ್ ಲಾಕರ್ ನಲ್ಲಿರುವ ಬೆಲೆಬಾಳುವ ವಸ್ತುಗಳು ಕಳವಾದರೆ ಅಥವಾ ಹಾನಿಗೊಳಗಾದರೆ ಅದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀರುತ್ತದೆ.
ಈ ನಷ್ಟವನ್ನು ಬ್ಯಾಂಕ್ ಸರಿದೂಗಿಸುತ್ತದೆ ಎಂದು ಗ್ರಾಹಕರು ನಿರೀಕ್ಷಿಸುತ್ತಾರೆ. ಇನ್ನು ನೀವು ಬ್ಯಾಂಕ್ ಲಾಕರ್ ನಲ್ಲಿ ಇರಿಸಿದ ಹಣವನ್ನು ಗೆದ್ದಲು ಹುಳುಗಳು ಹಾನಿಮಾಡಿದರೆ ನಿಮಗೆ ಬ್ಯಾಂಕ್ ನಷ್ಟ ತುಂಬುತ್ತದೆಯೇ…? ಎನ್ನುವ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿರಬಹುದು. ಇದೀಗ ಗೆದ್ದಲು ಹುಳುಗಳು ಲಾಕರ್ ನಲ್ಲಿ ಇರಿಸಿದ ನಗದನ್ನು ಹಾಳು ಮಾಡಿದರೆ ಅದಕ್ಕೆ RBI ಯಾವ ನಿಯಮವನ್ನು ಪರಿಚಯಿಸಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಲಾಕರ್ ನಲ್ಲಿದ್ದ ನಗದನ್ನು ಗೆದ್ದಲು ತಿಂದರೆ ಬ್ಯಾಂಕ್ ನಿಮಗೆ ಪರಿಹಾರ ನೀಡುತ್ತದೆಯೇ..?
ಇತ್ತೀಚೆಗಷ್ಟೇ RBI ಬ್ಯಾಂಕ್ ಲಾಕರ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಯಲ್ಲಿ ಹಿಂದೆ ಅಳವಡಿಸಲಾಗಿದ್ದ ಬ್ಯಾಂಕ್ ಲಾಕರ್ ನಲ್ಲಿನ ನಷ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ತೆರವುಗೊಳಿಸಲಾಗಿದೆ.
RBI ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮಾತ್ರ ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಲಾಕರ್‌ನಲ್ಲಿ ಇರಿಸಲಾಗಿರುವ ವಸ್ತುಗಳು ಹಾನಿಗೊಳಗಾದರೆ ಅಥವಾ ಕಳ್ಳತನವಾದರೆ, ಬ್ಯಾಂಕ್ ಗ್ರಾಹಕರಿಗೆ ಲಾಕರ್ ಗೆ ವಿಧಿಸುವ ವಾರ್ಷಿಕ ಶುಲ್ಕದ 100 ಪಟ್ಟು ಪರಿಹಾರವನ್ನು ನೀಡುತ್ತದೆ. ಇನ್ನು ಪ್ರಾಕೃತಿಕ ವಿಕೋಪದಿಂದ ಲಾಕರ್ ಹಾನಿಯಾದರೆ ಬ್ಯಾಂಕ್ ಜವಾಬ್ದಾರರಲ್ಲ ಎಂದು RBI ಖಚಿತಪಡಿಸಿದೆ.