Bank Locker: ಬ್ಯಾಂಕ್ ಲಾಕರ್ ನಲ್ಲಿ ಹಣ ಮತ್ತು ಆಭರಣ ಇಟ್ಟವರಿಗೆ ಹೊಸ ನಿಯಮ, RBI ಆದೇಶ.

ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನ ಜಾರಿಗೆ ತಂದಿದೆ RBI.

Bank Locker Rules 2023: ದೇಶದ ಪ್ರತಿಷ್ಠಿತ ಬ್ಯಾಂಕ್ (Bank) ಗಳು ಗ್ರಾಹಕರಿಗೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇನ್ನು ಈ ಬಾರಿಯ ಹೊಸ ಹಣಕಾಸು ವರ್ಷದಿಂದ ಅನೇಕ ಬ್ಯಾಂಕ್ ಗಳ ನಿಯಮದಲ್ಲಿ ಬಾರಿ ಬದಲಾವಣೆ ಕಂಡುಬಂದಿದೆ. ಬ್ಯಾಂಕ್ ಗಳು ತನ್ನ ಗ್ರಾಹಕರ ಸುರಕ್ಷತೆಗಾಗಿ ವಿವಿಧ ರೀತಿಯ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇನ್ನು ಬ್ಯಾಂಕ್ ಗಳಲ್ಲಿ ಲಾಕರ್ (Bank Locker) ವ್ಯವಸ್ಥೆ ಇರುತ್ತದೆ. ಇದೀಗ ಆರ್ ಬಿಐ (RBI) ಬ್ಯಾಂಕ್ ಲಾಕರ್ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದಿದೆ. ಬ್ಯಾಂಕ್ ಲಾಕರ್ ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.

RBI new rules
Image Credit: businesstoday

ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ ತಂದ ಆರ್ ಬಿ ಐ
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಬ್ಯಾಂಕ್ ನಲ್ಲಿ ಖಾತೆದಾರರು ಬ್ಯಾಂಕ್ ವಿವಿಧ ಸೌಲಭ್ಯಗಳ ಲಾಭವನ್ನು ಪಡೆಯುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ಲಾಕರ್ ವ್ಯವಸ್ಥೆಗಳು ಇರುತ್ತದೆ.

ಗ್ರಾಹಕರು ತಮ್ಮ ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ಗಳಲ್ಲಿ ಸುರಕ್ಷಿತವಾಗಿರಿಸಲು ಇಟ್ಟಿರುತ್ತಾರೆ. ಇದೀಗ ಆರ್ ಬಿ ಐ (Reserve Bank Of India) ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ ತಂದಿದೆ.

RBI has implemented new rules regarding bank lockers
Image Credit: informalnewz

ಬ್ಯಾಂಕ್ ಲಾಕರ್ ನಿಯಮದಲ್ಲಿನ ಬದಲಾವಣೆ
ಬ್ಯಾಂಕ್ ಗ್ರಾಹಕರಿಗೆ ಲಾಕರ್ ವ್ಯವಸ್ಥೆಯನ್ನು ನೀಡುವ ಮುನ್ನ ಒಪ್ಪಂದವನ್ನು ಮಾಡಿಕೊಂಡಿರುತ್ತದೆ. ಇದೀಗ ಈ ನಿಯಮದಲ್ಲಿ ಬದಲಾವಣೆಯನ್ನು ತರಲಾಗಿದೆ. ಆರ್ ಬಿಐ ಬ್ಯಾಂಕ್ ಗಳೊಂದಿಗಿನ ಪರಿಷ್ಕ್ರತ ಒಪ್ಪಂದದ ಸಮಯವನ್ನು ಈ ವರ್ಷದ ಡಿಸೇಂಬರ್ ಅಂತ್ಯದ ವರೆಗೆ ವಿಸ್ತರಿಸುವ ಮೂಲಕ ಗ್ರಾಹಕರಿಗೆ ರಿಲೀಫ್ ನೀಡಿದೆ.

Join Nadunudi News WhatsApp Group

RBI changed the bank locker rules
Image Credit: informalnewz

ಕೇಂದ್ರೀಯ ಬ್ಯಾಂಕ್ ಬಿಡುಗಡೆ ಮಾಡಿದ ಬಿಡುಗಡೆಯಲ್ಲಿ ಹಂತ ಹಂತವಾಗಿ ಡಿಸೇಂಬರ್ 31 2023 ರ ವರೆಗೆ ಗಡುವನ್ನು ವಿಸ್ತರಿಸಲಾಗುವುದು ಎಂದು ಆರ್ ಬಿಐ ಸೂಚಿಸಿದೆ. ಬ್ಯಾಂಕ್ ಲಾಕರ್ ನ ಹೊಸ ನಿಯಮದ ಪ್ರಕಾರ, ಲಾಕರ್ ಒಪ್ಪಂದದಲ್ಲಿ ಯಾವುದೇ ಅನ್ಯಾಯದ ಸ್ಥಿತಿಯನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದರಿಂದಾಗಿ ಗ್ರಾಹಕರು ನಷ್ಟದಲ್ಲಿದ್ದರೆ ಬ್ಯಾಂಕ್ ಸುಲಭವಾಗಿ ಇದರಿಂದ ಹೊರನಡೆಯಬಹುದು. ಇನ್ನು ಲಾಕರ್ ಗಳಿರುವ ಆಭರಣಗಳ ಭದ್ರತೆಗೆ ಆರ್ ಬಿ ಐ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.

Join Nadunudi News WhatsApp Group