Locker Theft: ಬ್ಯಾಂಕ್ ಲಾಕರ್ ನಲ್ಲಿರುವ ಬೆಲೆಬಾಳುವ ವಸ್ತು ಕಳವಾದರೆ ಬ್ಯಾಂಕ್ ಎಷ್ಟು ಪರಿಹಾರ ಕೊಡುತ್ತದೆ, RBI ನಿಯಮ.

ಬ್ಯಾಂಕ್ ಲಾಕರ ನಲ್ಲಿ ಇರುವ ವಸ್ತು ಕಳವಾದರೆ ಬ್ಯಾಂಕ್ ಎಷ್ಟು ಪರಿಹಾರ ಕೊಡುತ್ತದೆ.

Bank Locker Compensation: ದೇಶದ ಲಕ್ಷಾಂತರ ಜನರು ತಮ್ಮ ಅಮೂಲ್ಯ ಆಸ್ತಿಗಳಾದ ಚಿನ್ನ, ಬೆಳ್ಳಿ ಮತ್ತು ನಗದನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್‌ ಅನ್ನು ಬಳಸುತ್ತಾರೆ. ಗ್ರಾಹಕರ ಅಮೂಲ್ಯ ವಸ್ತುಗಳ ಸುರಕ್ಷತೆಗಾಗಿ ದೇಶದ ಅನೇಕ ಬ್ಯಾಂಕ್ ಗಳು Locker ಸೌಲಭ್ಯವನ್ನು ನೀಡಿತ್ತವೆ.

ಇತ್ತೀಚಿಗೆ ದೇಶದಲ್ಲಿ RBI ಲಾಕರ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಇನ್ನು ಪರಿಷ್ಕೃತ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಈಗಾಗಲೇ ಎಚ್ಚರಿಕೆ ನೀಡಿದೆ. ಸದ್ಯ RBI ಬ್ಯಾಂಕ್ ಲಾಕರ್ ನಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.

Bank Locker Compensation
Image Credit: Economictimes

ಬ್ಯಾಂಕ್ ಲಾಕರ್ ನಲ್ಲಿ ಇರುವ ಚಿನ್ನ ಕಳವಾದರೆ ಯಾರು ಹೊಣೆ
ಗ್ರಾಹಕರು ಮತ್ತು ಬ್ಯಾಂಕ್ ನ ನಡುವೆ ಮೆಮೊರೆಂಡಮ್ ಆಫ್ ಲೇಟಿಂಗ್ ಒಪ್ಪಂದವನ್ನು ಮಾಡಲಾಗುತ್ತದೆ. ಈ ಒಪ್ಪಂದದ ಪ್ರಕಾರ, ಮಳೆ ಪ್ರವಾಹ ಭೂಕಂಪ ಸಿಡಿಲು, ಸಾರ್ವಜನಿಕ ಗಲಭೆ, ಹಿಂಸಾಚಾರ, ಭಯೋತ್ಪಾದನೆ ದಾಳಿ ಇತ್ಯಾದಿ ಕಾರಣಗಳಿಂದ ಬ್ಯಾಂಕ್ ಲಾಕರ್ ಹಾಳಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ.

ಬ್ಯಾಂಕ್ ಲಾಕರ್ ನಲ್ಲಿರುವ ಬೆಲೆಬಾಳುವ ವಸ್ತು ಕಳವಾದರೆ ಬ್ಯಾಂಕ್ ಎಷ್ಟು ಪರಿಹಾರ ಕೊಡುತ್ತದೆ
ಕಳ್ಳತನ, ದರೋಡೆ, ಕಟ್ಟಡ ಕುಸಿತ, ಸಿಬ್ಬಂದಿ ವಂಚನೆ ಇತ್ಯಾದಿ ಕಾರಣಕ್ಕೆ ಲಾಕರ್ ಹಾಳಾದರೆ ಗ್ರಾಹಕರಿಗೆ ಪರಿಹಾರ ನೀಡಬೇಕಾಗುತ್ತದೆ. ಲಾಕರ್ ನ ವಾರ್ಷಿಕ ಬಾಡಿಗೆಯ 100 ಪಟ್ಟು ಮೊತ್ತವನ್ನು ಗ್ರಾಹಕರಿಗೆ ಕೊಡಬೇಕಾಗುತ್ತದೆ. ಇನ್ನು ಬ್ಯಾಂಕ್ ಲಾಕರ್ ಮಾಡಿಸಿದ ಜನರು ಯಾವ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿರುತ್ತಾರೋ ಅದರ ಪ್ರಕಾರವಾಗಿ ಪರಿಹಾರವನ್ನ ನಿಗದಿ ಮಾಡಲಾಗುತ್ತದೆ.

Bank Locker Compensation
Image Credit: Informalnewz

ಲಾಕರ್ ನಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟವು ಬ್ಯಾಂಕ್ ಸಿಬ್ಬಂದಿಯ ಸಹಕಾರದಿಂದ ಅಥವಾ ಭದ್ರತಾ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದಿಂದ ಸಂಭವಿಸಿದರೆ ಈ ನಷ್ಟಕ್ಕೆ ಬ್ಯಾಂಕ್ ಹೊಣೆಯಾಗುತ್ತದೆ ಮತ್ತು ಬ್ಯಾಂಕ್ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಲಾಕರ್ ವ್ಯವಸ್ಥೆಯನ್ನು ಆಯ್ದುಕೊಳ್ಳುವ ಮುನ್ನ ಸುರಕ್ಷಿತ ಬ್ಯಾಂಕ್ ಗಳನ್ನೂ ಆರಿಸುವುದು ಉತ್ತಮ.

Join Nadunudi News WhatsApp Group

ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು
RBI ಹೊಸ ಬ್ಯಾಂಕ್ ಲಾಕರ್ ನಿಯಮದ ಪ್ರಕಾರ, ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳಂತಹ ಕಾನೂನು ಬದ್ದವಾಗಿ ಮಾನ್ಯವಾದ ವಸ್ತುಗಳನ್ನು ಮಾತ್ರ ಇಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಬ್ಯಾಂಕ್ ಲಾಕರ್ ಅನ್ನು ಅವರ ವೈಯಕ್ತಿಕ ಬಳಕೆಗಾಗಿ ಮಾತ್ರ ನೀಡಲಾಗುತ್ತದೆ. ಗ್ರಾಹಕರು ತಮ್ಮ ಲಾಕರ್ ಗಳಲ್ಲಿ ನಗದು ಅಥವಾ ವಿದೇಶಿ ಕರೆನ್ಸಿಗಳನ್ನುಇಡಲು ಸಾಧ್ಯವಾಗುವುದಿಲ್ಲ. ಶಸ್ತ್ರಾಸ್ತ್ರ, ಔಷಧ ಅಥವಾ ಇನ್ನಿತರ ವಿಷಕಾರಿ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸುವುದನ್ನು RBI ನಿಷೇಧಿಸಿದೆ.

Join Nadunudi News WhatsApp Group