Locker Fine: ಬ್ಯಾಂಕ್ ಲಾಕರ್ ಹೊಂದಿರುವವರಿಗೆ ರಾತ್ರೋರಾತ್ರಿ ದೊಡ್ಡ ಘೋಷಣೆ, ಈ ತಪ್ಪಿಗೆ ಕಟ್ಟಬೇಕು ದಂಡ.
ಬ್ಯಾಂಕ್ ಲಾಕರ್ ಬಳಸುವವರಿಗೆ ಹೊಸ ನಿಯಮ, ಈ ತಪ್ಪುಗಳಿಗೆ ದಂಡ ಕಟ್ಟಬೇಕು.
Bank Locker Rules: ಹೊಸ ವರ್ಷದ ಆರಂಭದಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತರಲಾಗಿದೆ. ದೇಶದ ಲಕ್ಷಾಂತರ ಜನರು ಬ್ಯಾಂಕ್ ಲಾಕರ್ ಗಳಲ್ಲಿ ದುಬಾರಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳನ್ನು ಇಡಲು ಬ್ಯಾಂಕ್ ಲಾಕರ್ ಗಳನ್ನೂ ಬಳಸುತ್ತಾರೆ. ಹೆಚ್ಚಿನ ಎಲ್ಲಾ ಬ್ಯಾಂಕುಗಳು ಲಾಕರ್ ಸೇವೆಯನ್ನು ನೀಡುತ್ತದೆ.
ಬ್ಯಾಂಕ್ ಲಾಕರ್ ಬಳಸುವ ಗ್ರಾಹಕರಿಗೆ ಹೊಸ ಸುದ್ದಿ
ಬ್ಯಾಂಕ್ ಲಾಕರ್ ಅನ್ನು ಬಳಸಲು ಬ್ಯಾಂಕುಗಳು ವಾರ್ಷಿಕ ಶುಲ್ಕವನ್ನು ವಿಧಿಸತ್ತವೆ. ಈ ಶುಲ್ಕವನ್ನು ವರ್ಷಕ್ಕೊಮ್ಮೆ ತೆಗೆದುಕೊಳ್ಳಲಾಗುತ್ತದೆ. ಈ ಶುಲ್ಕವು ಬ್ಯಾಂಕ್ ಲಾಕರ್ ನ ಗಾತ್ರ ಮತ್ತು ಶಾಖೆಯ ಸ್ಥಳವನ್ನು ಅವಲಂಬಿಸಿರುತ್ತದೆ. ಬ್ಯಾಂಕ್ ಗ್ರಾಹಕರಿಗೆ ಲಾಕರ್ ಜೊತೆಗೆ ಒಂದು ಕೀಲಿಯನ್ನು ನೀಡುತ್ತದೆ ಮತ್ತು ಅವರ ಬಳಿ ಒಂದು ಕೀಲಿಯನ್ನು ಇರಿಸುತ್ತದೆ.
ಬ್ಯಾಂಕ್ ಲಾಕರ್ ತೆಗೆಯಲು 2 ಕೀಗಳು ಇವೆ. ಒಂದು ಕೀಯನ್ನು ಬ್ಯಾಂಕ್ ಇಟ್ಟುಕೊಂಡು ಇನ್ನೊಂದು ಕೀಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಬ್ಯಾಂಕ್ ಲಾಕರ್ ತೆರೆಯಲು ಬ್ಯಾಂಕ್ ಮೊದಲು ತನ್ನ ಕೀಲಿಯನ್ನು ಲಾಕರ್ ನಲ್ಲಿ ಇರಿಸುತ್ತದೆ ಮತ್ತು ಗ್ರಾಹಕನು ತನ್ನ ಕೀಲಿಯನ್ನು ಲಾಕರ್ ನಲ್ಲಿ ಇರಿಸುತ್ತಾನೆ. ಎರಡು ಕೀಗಳನ್ನು ಸೇರಿಸಿದಾಗ ಮಾತ್ರ ಬ್ಯಾಂಕ್ ಲಾಕರ್ ತೆರೆಯುತ್ತದೆ. ಎರಡು ಕೀಗಳಿಲ್ಲದೆ ಲಾಕರ್ ತೆರೆಯಲು ಸಾಧ್ಯವಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕ್ ಲಾಕರ್ ನಲ್ಲಿ ದುಬಾರಿ ಚಿನ್ನಾಭರಣ ಅಥವಾ ದಾಖಲೆ ಪತ್ರಗಳನ್ನು ಇಡುತ್ತಾರೆ. ಅದಕ್ಕಾಗಿಯೇ ಕೀ ಕಳೆದುಕೊಂಡರೆ ಮೊದಲು ಪೊಲೀಸರಿಗೆ ದೂರು ನೀಡಬೇಕು. ಉದಾಹರಣೆಗೆ ನಿಮ್ಮ ಸಿಮ್ ಕಾರ್ಡ್ ಕಳೆದುಕೊಂಡರೆ ಮೊದಲು ನೀವು ಪೊಲೀಸರಿಗೆ ದೂರು ನೀಡಬೇಕು, ಅದೇ ರೀತಿ ಬ್ಯಾಂಕ್ ಲಾಕರ್ ನ ಕೀ ಕಳೆದು ಕಳೆದುಹೋದರೆ ಬ್ಯಾಂಕ್ ನಲ್ಲಿ ದೂರು ನೀಡಬೇಕು.
ಬ್ಯಾಂಕ್ ಗ್ರಾಹಕರು ಮೊದಲು ಲಾಕರ್ ಅನ್ನು ಮುರಿದು ಎಲ್ಲಾ ಸರಕುಗಳನ್ನು ಮತ್ತೊಂದು ಬ್ಯಾಂಕ್ ಲಾಕರ್ ಗೆ ವರ್ಗಾಯಿಸಬಹುದು. ಆದರೆ ಗ್ರಾಹಕರು ಇದರ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಲಾಕರ್ ಒಡೆಯಲು ಮತ್ತು ಕೀ ಬದಲಾಯಿಸಲು 1000 ರೂಪಾಯಿ ಶುಲ್ಕ ಮತ್ತು ಜಿ ಎಸ್ ಟಿ ಪಾವತಿಸಬೇಕಾಗುತ್ತದೆ.
ಕೀ ಕಳೆದು ಹೋದರೆ ಹೊಸದನ್ನು ಪಡೆಯುವುದು ದುಬಾರಿಯಾಗಿದೆ. ಆದ್ದರಿಂದ ನಿಮ್ಮ ಬ್ಯಾಂಕ್ ಲಾಕರ್ ಕೀಗಳನ್ನು ನೀವು ಕಾಳಜಿ ವಹಿಸುವುದು ಮುಖ್ಯವಾಗಿದೆ. ಕೀ ಕಳೆದುಕೊಂಡರೆ ಹೊಸ ಲಾಕರ್ ಮತ್ತು ಹಳೆಯ ಲಾಕರ್ ಒಡೆಯುವ ಸಲುವಾಗಿ ನೀವು ದೊಡ್ಡ ದಂಡವನ್ನೇ ಕಟ್ಟಬೇಕಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.