MCLR Hike: ICICI ಬ್ಯಾಂಕ್ ಸೇರಿ ಈ ಎಲ್ಲಾ ಬ್ಯಾಂಕ್ ಗಳಲ್ಲಿ ಖಾತೆ ಇದ್ದವರಿಗೆ ಕಹಿಸುದ್ದಿ, ಸಂಕಷ್ಟದಲ್ಲಿ ಸಾಲ ಮಾಡಿದವರು.
ಬ್ಯಾಂಕುಗಳಲ್ಲಿ ಯಾವುದೇ ಸಾಲ ಮಾಡಿರುವ ಜನರಿಗೆ ಬ್ಯಾಂಕ್ ಕಡೆಯಿಂದ ಬೇಸರದ ಸುದ್ದಿ.
Bank MCLR Rate Hike: ಇತ್ತೀಚಿಗೆ ತಿಳಿದಿರುವ ಮಾಹಿತಿಯ ಪ್ರಕಾರ ಭಾರತದ ಸಾಕಷ್ಟು ಪ್ರಮುಖ ಬ್ಯಾಂಕುಗಳು MCLR ನಲ್ಲಿ ಹೆಚ್ಚುವರಿ ಮಾಡಿವೆ ಎಂಬುದಾಗಿ ತಿಳಿದು ಬಂದಿದೆ. ಇದು ಕಂಡು ಬಂದಿರುವುದು ಐಸಿಐಸಿಐ ಬ್ಯಾಂಕ್(ICICI Bank) ಹಾಗೂ ಬ್ಯಾಂಕ್ ಆಫ್ ಇಂಡಿಯಾದಲ್ಲಿ. ಬಹುತೇಕ ಲೋನ್ ಗಳು MCLR ಜೊತೆಗೆ ಕನೆಕ್ಟ್ ಆಗಿರುತ್ತದೆ ಹಾಗೂ ಇದೇ ನವೆಂಬರ್ 1ರಿಂದ MCLR ಅನ್ನು ಹೆಚ್ಚಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ICICI Bank MCLR ಐಸಿಐಸಿಐ ಬ್ಯಾಂಕ್ ನಲ್ಲಿ ಎಲ್ಲಾ ಸಮಯಗಳಿಗಾಗಿ MCLR ಐದು ಆಧಾರ್ ಅಂಕಗಳ ಹೆಚ್ಚಳ ಕಂಡುಬಂದಿದೆ. ಐಸಿಐಸಿಐ ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿದು ಬಂದಿರುವ ಮಾಹಿತಿ ಪ್ರಕಾರ ಓವರ್ ನೈಟ್ MCLR 8.50 ಪ್ರತಿಶತ, ಒಂದು ತಿಂಗಳ MCLR 8.50%, ಮೂರು ತಿಂಗಳ MCLR 8.55 ಪ್ರತಿಶತ ಹಾಗೂ ಆರು ತಿಂಗಳಿಗೆ 8.90 ಹಾಗೂ ಒಂದು ವರ್ಷಗಳಿಗೆ ಒಂಬತ್ತು ಪ್ರತಿಶತ ನಿಗದಿಪಡಿಸಲಾಗಿದೆ.
Bank of India MCLR ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲವು ಸಮಯಗಳಿಗಾಗಿ MCLR ಅನ್ನು ಹೆಚ್ಚಿಸಲಾಗಿದೆ. ಓವರ್ ನೈಟ್ 7.95 ಒಂದು ತಿಂಗಳಿಗೆ 8.20 ಪ್ರತಿಶತ 3 ತಿಂಗಳಿಗೆ 8.35% 6 ತಿಂಗಳಿಗೆ 8.55 ಪ್ರತಿಶತ ಒಂದು ವರ್ಷಕ್ಕೆ 8.75 ಹಾಗೂ ಮೂರು ವರ್ಷಕ್ಕೆ 8.95 ಪ್ರತಿಶತವನ್ನು ನಿಗದಿಪಡಿಸಲಾಗಿದೆ.
MCLR ಅನ್ನು ಹೆಚ್ಚಿಸುವುದರಿಂದ ಲೋನ್ ಪಡೆದುಕೊಂಡಿರುವಂತಹ ವ್ಯಕ್ತಿಯ ಪ್ರತಿ ತಿಂಗಳ ಕಂತಿನ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಆತ ಅದನ್ನು ಹೆಚ್ಚಾಗಿ ಕಟ್ಟಬೇಕಾಗಿ ಬರುತ್ತದೆ. ಇನ್ನು ಎಂ ಸಿ ಎಲ್ ಆರ್ ಕಾರ್ ಲೋನ್ ಹೋಂ ಲೋನ್ ಪರ್ಸನಲ್ ಲೋನ್ಗಳ ಮೇಲೆ ಬೆಂಚ್ ಮಾರ್ಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಗೈಡ್ ಲೈನ್ ಆಧಾರದ ಮೇಲೆ ಗ್ರಾಹಕರಿಗೆ ಲೋನ್ ಗಳನ್ನು ನೀಡಲಾಗುತ್ತದೆ ಹೀಗಾಗಿ ಇದು ಲೋನ್ ವಿಚಾರದಲ್ಲಿ ಅತ್ಯಂತ ಪ್ರಮುಖವಾಗಿರುತ್ತದೆ.