Bank Merging: ವಿಲೀನ ಆಗಲಿದೆ ದೇಶದ ಇನ್ನೆರಡು ಪ್ರತಿಷ್ಠಿತ ಬ್ಯಾಂಕ್, ಸಂಕಷ್ಟಕ್ಕೆ ಸಿಲುಕಿಕೊಂಡ ಖಾತೆದಾರರು.
ದೇಶದ ಇನ್ನೆರಡು ಪ್ರತಿಷ್ಠಿತ ಬ್ಯಾಂಕುಗಳು ವಿಲೀನ ಆಗಲಿದೆ.
AU Small Finance Bank And Fincare Small Finance Bank Merge: ದೇಶದಲ್ಲಿ ಬ್ಯಾಂಕುಗಳು ವಿಲೀನ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ. ಸದ್ಯ ಜುಲೈ ನಲ್ಲಿ ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಹಾಗೂ HDFC Ltd ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. HDFC ವಿಲೀನದ ಬಳಿಕ IDFC First Bank ಮತ್ತು IDFC Limited ಬ್ಯಾಂಕ್ ಗಳು ವಿಲೀನಗೊಳ್ಳಲಿದೆ.
ಸದ್ಯ ಈ ಮೂರು ಬ್ಯಾಂಕ್ ಗಳ ವಿಲೀನದ ನಂತರ ಇದೀಗ ಮತ್ತೆರಡು ಬ್ಯಾಂಕ್ ಗಳು ವಿಲೀನವಾಗಲು ಸಜ್ಜಾಗಿದೆ. ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ದೇಶದಲ್ಲಿ ವಿಲೀನಗೊಂಡಿರುವ ಬ್ಯಾಂಕ್ ಗಳ ಯಾವುವು? ಎನ್ನುವ ಬಗ್ಗೆ ವಿವರ ಇಲ್ಲಿದೆ.
ವಿಲೀನ ಆಗಲಿದೆ ದೇಶದ ಇನ್ನೆರಡು ಪ್ರತಿಷ್ಠಿತ ಬ್ಯಾಂಕ್
ಇದೀಗ ದೇಶದ ಎರಡು ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ ಗಳು ವಿಲೀನಗೊಂಡಿವೆ. ವಿಲೀನವನ್ನು AU Small Finance Bank (AU SFB) ಮತ್ತು Fincare Small Finance Bank (Fincare SFB) ನಿರ್ದೇಶಕರ ಮಂಡಳಿಗಳು ಅನುಮೋದಿಸಿವೆ. ವಿಲೀನದ ಘೋಷಣೆಯ ನಂತರ AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಷೇರುಗಳು ಇಂಟ್ರಾಡೇನಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಕುಸಿದವು. ವಿಲೀನಕ್ಕೆ ಎರಡೂ ಬ್ಯಾಂಕ್ಗಳ ಷೇರುದಾರರು, RBI ಮತ್ತು CCI ಅನುಮೋದನೆ ಅಗತ್ಯವಿರುತ್ತದೆ.
ಬ್ಯಾಂಕ್ ನ ಷೇರುಗಳಲ್ಲಿ ಕುಸಿತ
ಕಂಪನಿಯು Fincare Small Finance Bank ಅನ್ನು 4,411 ಕೋಟಿ ರೂಪಾಯಿ ಮೌಲ್ಯದ ಎಲ್ಲಾ ಸ್ಟಾಕ್ ವಹಿವಾಟಿನಲ್ಲಿ ಸ್ವಾಧೀನಪಡಿಸಿಕೊಳ್ಳಲಿದೆ. ಕಂಪನಿ ನೀಡಿರುವ ಮಾಹಿತಿಯಲ್ಲಿ ದಕ್ಷಿಣ ಭಾರತದಲ್ಲಿ ಕಿರು ಹಣಕಾಸು ಕ್ಷೇತ್ರಕ್ಕೆ ಕಾಲಿಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಇಂದು ಬ್ಯಾಂಕಿನ ಷೇರುಗಳು ಇಂಟ್ರಾಡೇ 8.5 ರಷ್ಟು ಕುಸಿದು 630.90 ಕ್ಕೆ ಕಡಿಮೆಯಾಗಿದೆ. ಇದು ಕಳೆದ 6 ತಿಂಗಳಲ್ಲೇ ಕನಿಷ್ಠ ಮಟ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 21 ಕ್ಕಿಂತ ಹೆಚ್ಚು ಸ್ಟಾಕ್ ಹೆಚ್ಚಾಗಿದೆ. ಇದರ 52 ವಾರದ ಗರಿಷ್ಠ ಮಟ್ಟವು ರೂ. 794.95 ಮತ್ತು ಕಡಿಮೆ ಮಟ್ಟವು ರೂ. 548.15 ಆಗಿದೆ.
ಇಂಟ್ರಾಡೇನಲ್ಲಿ 8 ಶೇಕಡಾಕ್ಕಿಂತ ಹೆಚ್ಚು ಕುಸಿದ ನಂತರ ಸ್ಟಾಕ್ ವಹಿವಾಟಿನ ಅಂತ್ಯದಲ್ಲಿ ಸ್ವಲ್ಪ ಏರಿಕೆಯನ್ನು ತೋರಿಸಿತ್ತು ಮತ್ತು 666.10 ಕ್ಕೆ ಮುಕ್ತಾಯವಾಗಿ ಸುಮಾರು 3.5 ಶೇಕಡಾ ಕುಸಿತ ಕಂಡಿದೆ. ಸದ್ಯ ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟಿರುವ ಜನರು ಆತಂಕಕ್ಕೆ ಒಳಗಾಗಿದ್ದು ಬ್ಯಾಂಕಿನ ಮುಂದಿನ ನಿರ್ಧಾರ ಏನು ಎಂದು ಕಾದು ನೋಡಬೇಕಿದೆ.