Withdrawing Limit: ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚಿನ ಹಣ ವಿಥ್ಡ್ರಾ ಮಾಡುವಂತಿಲ್ಲ, RBI ನಿಯಮ.
ಈ ಬ್ಯಾಂಕಿನಲ್ಲಿ 50,000 ರೂ. ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ಇಲ್ಲ ಎಂದು ಆರ್ ಬಿಐ ಆದೇಶ ಹೊರಡಿಸಿದೆ.
Bank Money Withdrawing Limit: ಭಾರತೀಯ ರಿಸರ್ವ್ ಬ್ಯಾಂಕ್ (RBI ) ಕಳೆದ ಜುಲೈನಲ್ಲಿ ಐದು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ರಿಸರ್ವ್ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಿಯಮವನ್ನು ಜಾರಿಗೊಳಿಸುತ್ತಿದೆ. ಬ್ಯಾಂಕ್ ಗಳಲ್ಲಿ ಕಡಿಮೆ ಹೂಡಿಕೆ ಮತ್ತು ಬಂಡವಾಳದ ಕೊರತೆಯಿಂದ ಆರ್ ಬಿಐ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಇದೀಗ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ. ಆರ್ ಬಿಐ ಈ ಬ್ಯಾಂಕ್ ನಲ್ಲಿ ನಗದು ಹಿಂಪಡೆಯುವಿಕೆಗೆ ಮಿತಿಯನ್ನು ಅಳವಡಿಸಿದೆ. ನೀವು ಈ ಸಹಕಾರಿ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಮಾಹಿತಿಯ ತಿಳಿದುಕೊಳ್ಳುವುದು ಉತ್ತಮ.
ಹಣ ಹಿಂಪಡೆಯುವಿಕೆಯಲ್ಲಿ ಆರ್ ಬಿಐ ಮಹತ್ವದ ನಿರ್ಧಾರ
ಇದೀಗ ಆರ್ ಬಿಐ ಬ್ಯಾಂಕಿನಿಂದ ಹಣ ತಗೆಯುವ ನಿಯಮದಲ್ಲಿ ಬದಲಾವಣೆ ತಂದಿದೆ. ಸಹಕಾರಿ ಬ್ಯಾಂಕ್ ನಿಂದ ಹಣವನ್ನು ಹಿಂಪಡೆಯಲು ಆರ್ ಬಿಐ ಮಿತಿಯನ್ನು ನಿಗದಿಪಡಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸಹಕಾರಿ ಬ್ಯಾಂಕ್ (National Cooperative Bank) ಗೆ ಸಂಬಂಧಿಸಿದಂತೆ ಆರ್ ಬಿಐ ಹಣ ತೆಗೆಯುವ ಮಿತಿಯನ್ನು ನಿಗದಿಪಡಿಸಿದೆ.
ಬ್ಯಾಂಕ್ ನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 13 ಶಾಖೆಗಳನ್ನು ಹೊಂದಿದೆ.
ಈ ಬ್ಯಾಂಕ್ ನ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚಿನ ಹಣ ವಿಥ್ಡ್ರಾ ಮಾಡುವಂತಿಲ್ಲ
ಯಾವುದೇ ಠೇವಣಿದಾರರು ಚಾಲ್ತಿ ಖಾತೆ, ಉಳಿತಾಯ ಖಾತೆ ಅಥವಾ ಇತರ ಯಾವುದೇ ಖಾತೆಯಲ್ಲಿನ ಒಟ್ಟು ಮೊತ್ತದಿಂದ 50,000 ರೂ. ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ಇಲ್ಲ ಎಂದು ಆರ್ ಬಿಐ ಆದೇಶ ಹೊರಡಿಸಿದೆ. ಬ್ಯಾಂಕಿನ ಠೇವಣಿದಾರರು ಠೇವಣಿ ವಿಮೆಯ ಅಡಿಯಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನಲ್ಲಿ 5 ಲಕ್ಷ ರೂ. ಗಳನ್ನೂ ಕ್ಲೈಮ್ ಮಾಡಬಹುದಾಗಿದೆ.
ಬ್ಯಾಂಕ್ ಇಂತಹ ಯಾವುದೇ ವ್ಯವಹಾರವನ್ನು ಮಾಡುವಂತಿಲ್ಲ
ಬ್ಯಾಂಕ್ ಯಾವುದೇ ಹಳೆಸಾಲ ನವೀಕರಣ, ಹೊಸ ಸಾಲ ವಿತರಣೆ ಅಥವಾ ಕೇಂದ್ರ ಬ್ಯಾಂಕಿನ ಅನುಮತಿಯಿಲ್ಲದೆ ತಾಜಾ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. ನಿಧಿಯ ಎರವಲು ಪಡೆಯುವಿಕೆ, ಭಾದ್ಯತೆಗಳ ಅಡಿಯಲ್ಲಿ ಯಾವುದೇ ಪಾವತಿಗಳ ವಿತರಿಸುವಿಕೆ, ಯಾವುದೇ ಒಪ್ಪಂದಕ್ಕೆ ಪ್ರವೇಶಿಸಲು ಮತ್ತು ಅದರ ಯಾವುದೇ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆರ್ ಬಿಐ 24 ಜುಲೈ 2023 ರಂದು ವ್ಯವಹಾರ ಮುಕ್ತಾಯದಿಂದ 6 ತಿಂಗಳ ಅವಧಿಗೆ ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ.