Bank New Rules: ಶೀಘ್ರದಲ್ಲೇ ಎಲ್ಲಾ ಬ್ಯಾಂಕ್ ಕೆಲಸಗಾರರಿಗೆ ಹೊಸ ನಿಯಮ, ಧಿಡೀರ್ ಬದಲಾವಣೆ

ಸರಕಾರಿ ಮತ್ತು ಖಾಸಗಿ ಬ್ಯಾಂಕ್ ಉದ್ಯೋಗಿಗಳಿಗೆ ಈಗ ಬಂಪರ್ ಸುದ್ದಿಯೊಂದು ಬರುತ್ತಿದೆ. ಇಲ್ಲಿದೆ ಮಾಹಿತಿ

Bank Employees Salary Hike: ಸರಕಾರಿ ಉದ್ಯೋಗ ಹೊರತಾಗಿ ಸೌಲಭ್ಯ ಸಿಗುವ ಮತ್ತು ಘನತೆ ಕೂಡ ಇರುವ ಒಂದು ಕೆಲಸ ಎಂದರೆ ಅದು ಬ್ಯಾಂಕ್ ಉದ್ಯೋಗ ಎನ್ನಬಹುದು. ಖಾಸಗಿ ಅಥವಾ ಸರಕಾರಿ ಬ್ಯಾಂಕ್(Bank) ಇರಲಿ ಸೌಲಭ್ಯ ಮಾತ್ರ ಉತ್ತಮಮಟ್ಟದ್ದು ಆಗಿರುತ್ತದೆ. ಎಲ್ಲ ಸಾರ್ವಜನಿಕ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಇದ್ದು ಕೂಡ ಪಿಂಚಣಿ ಭತ್ಯೆ ಇನ್ನು ಅನೇಕ ಸೌಲಭ್ಯ ಸಿಗುತ್ತಲಿದ್ದು ಇದೀಗ ಬ್ಯಾಂಕ್ ಉದ್ಯೋಗಿಗಳಿಗೆ ಹೊಸ ಒಂದು ಕೊಡುಗೆ ಸಹ ಸಿಗಲಿದೆ.

Bank new rules
Image Source: Vijaya Karnataka

ಯಾವುದು ಈ ಸೌಲಭ್ಯ

ಸರಕಾರಿ ಮತ್ತು ಖಾಸಗಿ ಬ್ಯಾಂಕ್ ಉದ್ಯೋಗಿಗಳಿಗೆ ಈಗ ಬಂಪರ್ ಸುದ್ದಿಯೊಂದು ಬರುತ್ತಿದೆ. ಬ್ಯಾಂಕುಗಳು ಐದು ದಿನ ಕಾರ್ಯ ನಿರ್ವಹಿಸಲಿದ್ದು 15% ವೇತನ ಹೆಚ್ಚಳ ಮಾಡಲು ಮಾತುಕತೆ ನಡೆಸುತ್ತಿದೆ. ವೇತನ ಹೆಚ್ಚಳಕ್ಕೆ ಈ ಹಿಂದಿನಿಂದಲೂ ಕೂಡ ಸೂಚನೆ ಬಂದಿದ್ದು ಭಾರತೀಯ ಬ್ಯಾಂಕ್ ಗಳ ಸಂಘವು ವೇತನ ಹೆಚ್ಚಿಸಲು ಸೂಚನೆ ನೀಡಿತ್ತು. ಗಣನೀಯವಾಗಿ ವೇತನ ಏರಿಕೆಗೆ ಒತ್ತಾಯಿಸುತ್ತಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳು 10% ದಷ್ಟು ವೇತನ ಹೆಚ್ಚಿಸಲು ಮೊದಲು ತೀರ್ಮಾನಿಸಲಾಗಿತ್ತು ಆದರೆ ಅದಕ್ಕಿಂತಲೂ 15% ಹೆಚ್ಚಿಸಲು ಎಲ್ಲರ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಅದೇ ಅಂತಿಮ ವಾಗುವ ಸಾಧ್ಯತೆ ಇದೆ. ಇತ್ತೀಚಿನ ಕೆಲ ವರ್ಷದಿಂದ ಬ್ಯಾಂಕ್ ವ್ಯವಹಾರ ತುಂಬಾ ಉತ್ತಮವಾಗಿದ್ದು ನೌಕರರಿಗೆ ವೇತನ ಹೆಚ್ಚಿಸುವುದು ನಷ್ಟವೇನಲ್ಲ ಎಂಬ ಅಭಿಪ್ರಾಯ ಸಹ ಹೊರಹೊಮ್ಮಿದೆ‌.

2015ರ ಪೂರ್ವದಲ್ಲಿ 6 ದಿನಗಳ ಕಾಲದವರೆಗೂ ಕೂಡ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಾ ಇದ್ದವು ಬಳಿಕ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಒಂದು ಶನಿವಾರ ರಜೆ ನೀಡುವ ಪದ್ಧತಿ ಜಾರಿಗೆ ತರಲಾಗಿದೆ. ಹೆಚ್ಚುವರಿ ವೇತನ ನೀಡುವ ಕಾರಣ ಬ್ಯಾಂಕ್ ಉದ್ಯೋಗಿಗಳಿಗೆ ಸಾಕಷ್ಟು ಉಪಯುಕ್ತಕಾರಿ ಆಗಲಿದೆ ಎಂದು ಈ ಮೂಲಕ ಹೇಳಬಹುದು.

Join Nadunudi News WhatsApp Group

Bank new rules
Image Source: Informal newz

ಯಾವಾಗ ಜಾರಿಯಾಗಬಹುದು?

2020ರಲ್ಲಿ ವೇತನ ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ. ಅದೇ ಪ್ರಕ್ರಿಯೇ ಮೂರು ವರ್ಷದ ಬಳಿಕ ಈಗ ಜಾರಿಯಾಗುತ್ತಿದೆ. ಬ್ಯಾಂಕ್ ಉದ್ಯೋಗಿಗಳ ವೇತನ ಯಾವಾಗ ಹೆಚ್ಚಾಗಬಹುದು ಎಂದು ಹಲವರಿಗೆ ಪ್ರಶ್ನೆ ಎದ್ದಿದ್ದು ಈ ಮೂಲಕ 2024ರಲ್ಲಿ ಲೋಕಸಭೆ ಚುನಾವಣೆಗೆ ಬಾಕಿ ಇದ್ದು ಅದಕ್ಕೂ ಮೊದಲೇ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಬಹುದು. ಭಾರತೀಯ ಬ್ಯಾಂಕಿಂಗ್ ಅಸೋಸಿಯೇಶನ್ RBI ಮತ್ತು ಹಣಕಾಸು ಸಚಿವಾಲಯದಿಂದ ಅನುಮೋದನೆಗೆ ಕಾಯುತ್ತಲಿದೆ ಎಂದು ಹೇಳಬಹುದು.

Join Nadunudi News WhatsApp Group