BOB E-Auction: ಆಸ್ತಿ ಖರೀದಿಸುವವರಿಗೆ ಬಂಪರ್ ಆಫರ್ ನೀಡಿದ BOB, ಕಡಿಮೆ ಮೊತ್ತಕ್ಕೆ ಖರೀದಿಸಿ ಭೂಮಿ.

ಅಗ್ಗದ ಬೆಲೆಯ ಆಸ್ತಿ ಖರೀದಿಗೆ ಬ್ಯಾಂಕ್ ಆಫ್ ಬರೋಡಾ ಆಫರ್.

Bank Of Baroda E-Auction 2023: ಸಾಮಾನ್ಯವಾಗಿ ಎಲ್ಲರು ಸಾವಂತ ಆಸ್ತಿಯನ್ನು ಖರೀದಿಸಬೇಕೆನ್ನುವ ಆಸೆಯನ್ನು ಹೊಂದುತ್ತಾರೆ. ಸದ್ಯ ದೇಶದಲ್ಲಿ ಆಸ್ತಿಗೆ ಬಾರಿ ಪ್ರಮಾಣದಲ್ಲಿ ಬೇಡಿಕೆ ಇದೆ ಎನ್ನಬಹುದು. ಒಂದು ಅಡಿ ಜಾಗ ಪಡೆಯಲು ಕೂಡ ದುಬಾರಿ ಹಣವನ್ನೇ ನೀಡಬೇಕಾಗುತ್ತದೆ.

ನೀವು ಆಸ್ತಿ ಖರೀದಿಸಲು ಹ್ಯಾಂಡ್ ಬಗ್ಗೆ ಚಿಂತಿಸುತ್ತಿದ್ದಾರೆ ನಿಮಗೆ ಆಸ್ತಿ ಖರೀದಿಗೆ ಉತ್ತಮ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ. ಅದೇನು ಎಂದು ಯೋಚಿಸುತ್ತೀರಾ? ಸಣ್ಣ ಮೊತ್ತಕ್ಕೆ ಆಸ್ತಿ ಖರೀದಿಸಲು ಕೆಲವೊಮ್ಮೆ ಸರ್ಕಾರೀ ಬ್ಯಾಂಕ್ ಗಳು ಅವಕಾಶ ನೀಡುತ್ತದೆ. ಇದೀಗ ದೇಶದ ಜನಪ್ರಿಯ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ Bank Of Baroda (BOB) ಇದೀಗ ನಿಮ್ಮ ಆಸ್ತಿ ಖರೀದಿಯ ಕನಸಿಗೆ ಸಹಾಯವಾಗಲು ಉತ್ತಮ ಅವಕಾಶವನ್ನು ನೀಡುತ್ತಿದೆ.

Bank Of Baroda E-Auction
Image Credit: Abplive

ಸಣ್ಣ ಮೊತ್ತಕ್ಕೆ ಆಸ್ತಿ ಖರೀದಿಸುವ ಆಸೆ ಇದ್ದವರಿಗೆ ಬಂಪರ್ ಆಫರ್ ನೀಡಿದ BOB
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಲ ಪಡೆಯುವುವ ಸಮಯದಲ್ಲಿ ಬ್ಯಾಂಕ್ ನಲ್ಲಿ ಆಸ್ತಿ ಪತ್ರಗಳನ್ನು ಅಡವಿಡಿಸಲಾಗುತ್ತದೆ. ಬ್ಯಾಂಕ್ ನಲ್ಲಿ ಸಾಲಪಡೆದವರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಗಳು ಅಡಮಾನವಿರಿಸಿದ ಆಸ್ತಿ ಪತ್ರಗಳನ್ನು ಮುಟ್ಟುಗೋಲು ಹಾಕುತ್ತವೆ.

ಆಸ್ತಿಯನ್ನು ಮಾರಾಟ ಮಾಡುವ ಮೊದಲು ಬ್ಯಾಂಕ್, ಮಾಲೀಕರಿಗೆ ನೋಟಿಸ್ ನೀಡುತ್ತದೆ. ನೋಟಿಸ್ ನೀಡಿದ ಬಳಿಕವೂ ಅವರು ಹಣವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ ತನ್ನ ಹಣವನ್ನು ಹಿಂಪಡೆಯುತ್ತದೆ. ಈ ಇ- ಹರಾಜಿನಲ್ಲಿ, ಮಾಲೀಕರು ಬ್ಯಾಂಕ್‌ ನಲ್ಲಿ ಹಣಕ್ಕಾಗಿ ಠೇವಣಿ ಮಾಡಿದ ಆಸ್ತಿಗಳನ್ನು ಬ್ಯಾಂಕ್ ಮಾರಾಟ ಮಾಡುತ್ತದೆ.

Join Nadunudi News WhatsApp Group

ಬ್ಯಾಂಕ್ ಆಫ್ ಬರೋಡಾ ಇ-ಹರಾಜು
ದೇಶದ ಹಲವು ಸರ್ಕಾರಿ ಬ್ಯಾಂಕ್‌ ಗಳು ಹಲವು ರೀತಿಯ ಆಸ್ತಿಗಳನ್ನು ಹರಾಜು ಹಾಕುತ್ತಲೇ ಇರುತ್ತವೆ. ಬ್ಯಾಂಕ್ ಆಫ್ ಬರೋಡಾ ಈ ಇ- ಹರಾಜನ್ನು 30 ಅಕ್ಟೋಬರ್ 2023 ರಂದು ಕರ್ವಾ ಚೌತ್ ಮೊದಲು ಆಯೋಜಿಸಲಿದೆ. “ಭಾರತದಾದ್ಯಂತ ಆಸ್ತಿಯನ್ನು ಪಡೆಯಲು ಅವಕಾಶವನ್ನು ಪಡೆಯಿರಿ! ನ ಮೆಗಾ-ಇ-ಹರಾಜಿನಲ್ಲಿ ಸೇರಿಕೊಳ್ಳಿ” ಎಂದು BOB ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇನ್ನು ಅಧಿಕೃತ www.bankofbaroda.in/e-auction/e-auction-notices ಗೆ ಭೇಟಿ ನೀಡುವ ಮೂಲಕ BOB ಹರಾಜಿನ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯಬಹುದು.

ಅಗ್ಗದ ಬೆಲೆಯ ಆಸ್ತಿ ಖರೀದಿಗೆ BOB ಆಫರ್
ಅಗ್ಗದ ಆಸ್ತಿಯನ್ನು ಖರೀದಿಸಲು ಬ್ಯಾಂಕ್ ಆಫ್ ಬರೋಡಾ ನಿಮಗೆ ವಿಶೇಷ ಅವಕಾಶವನ್ನು ತಂದಿದೆ. ನೀವು ಹಬ್ಬದ ಸಮಯದಲ್ಲಿ ಮನೆ ಖರೀದಿಸಲು ಯೋಜಿಸುತ್ತಿದ್ದರೆ BOB ಈ ಆಫರ್ ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಈ ಹರಾಜಿನಲ್ಲಿ ಭಾಗವಹಿಸುವ ಮೂಲಕ ದೇಶದ ದೊಡ್ಡ ನಗರಗಳಲ್ಲಿ ಅತಿ ಕಡಿಮೆ ಬೆಲೆಗೆ ಆಸ್ತಿ ಖರೀದಿಸಬಹುದು. ಈ ಇ-ಹರಾಜಿನಲ್ಲಿ ಗ್ರಾಹಕರಿಗೆ ವಾಣಿಜ್ಯ, ಕೈಗಾರಿಕೆ, ಕೃಷಿ, ಫ್ಲಾಟ್, ಭೂಮಿ ಮತ್ತು ಮನೆ ಖರೀದಿಸಲು ಬ್ಯಾಂಕ್ ಅವಕಾಶ ನೀಡುತ್ತಿದೆ.

Join Nadunudi News WhatsApp Group