BOB: ಬ್ಯಾಂಕ್ ಆಫ್ ಬರೋಡ ಗ್ರಾಹಕರು ಬೇಗ ಈ ಕೆಲಸ ಮಾಡಿ, ಇಲ್ಲವಾದರೆ ಬ್ಲಾಕ್ ಆಗಲಿದೆ ಖಾತೆ.
ಬ್ಯಾಂಕ್ ಆಫ್ ಬರೋಡಾದಲ್ಲಿ KYC ಅಪ್ಡೇಟ್ ಮಾಡದೆ ಇದ್ದರೆ ಖಾತೆ ಬ್ಲಾಕ್ ಆಗಲಿದೆ.
Bank Of Baroda KYC Update: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿವೆ. ನಿಯಮಗಳ ಬದಲಾವಣೆಯ ಜೊತೆಗೆ ಗ್ರಾಹಕರಿಗೆ ಅನುಕೂಲವಾಗುವ ಕಾರಣದಿಂದ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ.
ಇದೀಗ ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank Of Baroda) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. ನೀವು ಬ್ಯಾಂಕ್ ಆಫ್ ಬರೋಡ ಗ್ರಾಹಕರಾಗಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ.
ಗ್ರಾಹಕರಿಗೆ ಮಹತ್ವದ ಸೂಚನೆ ಹೊರಡಿಸಿದ ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ KYC ದಾಖಲೆಯ ಕುರಿತು ಮಹತ್ವದ ಬದಲಾವಣೆಯನ್ನು ತಂದಿದೆ. “ಆರ್ ಬಿಐ ಮಾರ್ಗಸೂಚಿ ಪ್ರಕಾರ, ಖಾತೆ ತೆರೆಯುವ ಸಮಯದಲ್ಲಿ ಸಲ್ಲಿಸಿದ KYC ದಾಖಲೆಗಳು ಅವುಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ನವೀಕರಣದ 30 ದಿನಗಳಲ್ಲಿ ಬ್ಯಾಂಕ್ ಗೆ ಮಾಹಿತಿಯನ್ನು ನೀಡಬೇಕು. ಇದರಿಂದಾಗಿ ಬ್ಯಾಂಕ್ ತನ್ನ ದಾಖಲೆಗಳನ್ನಿ ಇಟ್ಟುಕೊಂಡು ಅದನ್ನು ನವೀಕರಿಸಬಹುದು”.
ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ ಬ್ಯಾಂಕ್ ಆಫ್ ಬರೋಡ ಶಾಖೆಯನ್ನು ಸಂಪರ್ಕಿಸುವಂತೆ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ ಟ್ವೀಟ್ ಮಾಡುವ ಮೂಲಕ ಸೂಚನೆ ನೀಡಿದೆ.
KYC ಎಂದರೆ ಬ್ಯಾಂಕ್ ಗಳು ಅಥವಾ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಗುರುತನ್ನು ಪರಿಶೀಲಿಸುವ ಪ್ರಕ್ರಿಯೆ. ಹೀಗಾಗಿ KYC ದಾಖಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿದ್ದರೆ ಬ್ಯಾಂಕ್ ಗೆ ಈ ಬಗ್ಗೆ ಮಾಹಿತಿ ನೀಡಬೇಕು.
ಬದಲಾಯಿಸಿದ KYC ದಾಖಲೆಯನ್ನು ನವೀಕರಿಸಿದ 30 ದಿನಗಳ ವಳಗೆ ಬ್ಯಾಂಕ್ ಗೆ ಮಾಹಿತಿ ನೀಡಬೇಕು. ಇನ್ನು ಗ್ರಾಹಕರು ಮರು ಕೆವೈಸಿ ಮಾಡಬೇಕಾದರೆ ಸ್ವಯಂ ಘೋಷಣೆಯೊಂದಿಗೆ rekyc@bankofbaroda.com ಗೆ ಇಮೈಲ್ ಮಾಡಬಹುದು.