Bank Time Schedule: ಬದಲಾಗಲಿದೆ ಬ್ಯಾಂಕ್ ತೆರೆಯುವ ಮತ್ತು ಮುಚ್ಚುವ ಸಮಯ, ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿ.

Change In Bank Open And Close Timings: ಇದೀಗ ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.

ಇನ್ನು ಮುಂದೆ ಬ್ಯಾಕ್ ತೆರೆಯುವ ಮತ್ತು ಕ್ಲೋಸ್ ಆಗುವ ಸಮಯದಲ್ಲಿ ಬದಲಾವಣೆಯಾಗಲಿದೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಈ ವಿಚಾರವನ್ನು ಸರಿಯಾಗಿ ತಿಳಿದುಕೊಂಡು ಬ್ಯಾಂಕ್ ಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು.

Change In Bank Open And Close Timings
Image Source: Zee News

ಬ್ಯಾಂಕ್ ಕಾರ್ಯನಿರ್ವಹಿಸುವ ಸಮಯದ ವಿವರ
ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 9:45 ರಿಂದ ಸಂಜೆ 5 ರ ವರೆಗೆ ಬ್ಯಾಂಕ್ ಕೆಲಸ ನಿರ್ವಹಿಸಲಿದೆ. ಆದರೆ ಬ್ಯಾಂಕ್ ನೌಕರರು ಇನ್ನು ಮುಂದೆ 40 ನಿಮಿಷಗಳ ಕಾಲ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

ಇದಕ್ಕೆ ಬದಲಾಗಿ ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನಗಳ ರಜೆ ಸಿಗಲಿದೆ. ಅಂದರೆ ಇನ್ನು ಮುಂದೆ ಪ್ರತಿ ಭಾನುವಾರದಂತೆ ಶನಿವಾರ ಕೂಡ ಬ್ಯಾಂಕ್ ರಜೆ ಇರಲಿದೆ. ಈ ವಿಚಾರದ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

Change In Bank Open And Close Timings
Image Source: India Today

 

Join Nadunudi News WhatsApp Group

ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ

ಬ್ಯಾಂಕ್ ನೌಕರರಿಗೆ ಬಹುದಿನಗಳ ಬೇಡಿಕೆ ಈಗ ಈಡೇರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರದ ಐದು ದಿನಗಳ ಸೌಲಭ್ಯ ಶೀಘ್ರದಲ್ಲೇ ಜಾರಿಯಾಗಬಹುದು. ಈ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಯುನೈಟೆಡ್ ಫೋರಂ ಆಫ್ ಇಂಡಿಯನ್ ಬ್ಯಾಂಕ್ಸ್ ಎಂಪ್ಲಾಯಿಸ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ತಿಂಗಳಿಗೆ ಎರಡು ರಜೆ ಹೆಚ್ಚಿರುವುದರಿಂದ ಬ್ಯಾಂಕ್ ನೌಕರರ ಅವಧಿ ಕೂಡ ಹೆಚ್ಚಾಗಲಿದೆ. ಹೊಸ ಒಪ್ಪಂದದ ಪ್ರಕಾರ ಬ್ಯಾಂಕ್ ಉದ್ಯೋಗಿಗಳು ಪ್ರತಿದಿನ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

Change In Bank Open And Close Timings
Image Source: The Economic Times

ಪ್ರಸ್ತುತ ಭಾನುವಾರದ ಹೊರತಾಗಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ ಗಳಿಗೆ ರಜೆ ಇರುತ್ತದೆ. ಆದರೆ ಮುಂಬರುವ ದಿನಗಳಲ್ಲಿ, ಪ್ರತಿ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ಬಗ್ಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಪ್ರಾರಂಭವಾಗಬಹುದು.

Join Nadunudi News WhatsApp Group