Ads By Google

Financial Year End: ಶನಿವಾರವೂ ತೆರೆದಿರಲಿದೆ ದೇಶದ ಎಲ್ಲಾ ಬ್ಯಾಂಕುಗಳು, RBI ನಿಂದ ಬಹುದೊಡ್ಡ ಘೋಷಣೆ.

bank will open in saturday

Image Credit: Original Source

Ads By Google

Bank Open On Saturday And Sunday: April 1 2024 ರಿಂದ ಹೊಸ ಹಣಕಾಸು ವರ್ಷ 2024 -25 ಆರಂಭಗೊಳ್ಳುತ್ತದೆ. ಪ್ರಸ್ತುತ 2023 -24 ಹಣಕಾಸು ವರ್ಷ ಮುಗಿಯಲು ಇನ್ನು 5 ದಿನಗಳು ಬಾಕಿ ಇವೆ. ಇನ್ನು ಹೊಸ ಹಣಕಾಸು ವರ್ಷದ ಆರಂಭದ ಕಾರಣ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತವೆ ಹಾಗೆಯೆ ಅನೇಕ ಹೊಸ ಹೊಸ ನಿಯಮಗಳು ಕೂಡ ಜಾರಿಯಾಗುತ್ತದೆ.

ಹೊಸ ಹಣಕಾಸು ವರ್ಷದ ಆರಂಭದ ಹಿನ್ನಲ್ಲೆ ಹಣಕಾಸೇತರ ವಹಿವಾಟುಗಳು ಬದಲಾಗುವ ಸಾಧ್ಯತೆ ಇರುತ್ತದೆ. ಇನ್ನು ಹಣಕಾಸು ವರ್ಷದ ಅಂತ್ಯದೊಳಗೆ ಬ್ಯಾಂಕ್ ಹಾಗೂ ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಕೆಲಸ ಇರುತ್ತದೆ. ಏಕೆಂದರೆ ಪ್ರಸಕ್ತ ಹಣಕಾಸು ವರ್ಷ ಮುಗಿಯುದರೊಳಗೆ ಆ ಹಣಕಾಸು ವರ್ಷದ ಎಲ್ಲ ವಹಿವಾಟುಗಳು ಮುಗಿಯುವುದು ಅಗತ್ಯವಾಗಿದೆ. ಸದ್ಯ RBI ಹಣಕಾಸು ವರ್ಷದ ಮುಕ್ತಾಯದ ಹಂತದಲ್ಲಿ ಇದೀಗ ಬ್ಯಾಂಕ್ ಕೆಲಸದ ವಿಷಯವಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Image Credit: Live Mint

ಶನಿವಾರವೂ ತೆರೆದಿರಲಿದೆ ದೇಶದ ಎಲ್ಲಾ ಬ್ಯಾಂಕುಗಳು
ಸಾಮಾನ್ಯವಾಗಿ ದೇಶದ ಎಲ್ಲ ಬ್ಯಾಂಕುಗಳಿಗೆ ವಾರದ ಪ್ರತಿ ಭಾನುವಾರ ರಜೆ ಇದ್ದೆ ಇರುತ್ತದೆ. ಪ್ರತಿ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗೆ ರಜೆ ಇರುತ್ತದೆ. ಆದರೆ ಪ್ರಸಕ್ತ ಹಣಕಾಸು ವರ್ಷದ ಮುಕ್ತಾಯದ ಕಾರಣ RBI ಬ್ಯಾಂಕ್ ರಜಾ ದಿನದ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಮಾರ್ಚ್ 30 ಮತ್ತು 31 ಅಂದರೆ ಶನಿವಾರ ಮತ್ತು ಭಾನುವಾರ ಬ್ಯಾಂಕ್ ತೆರೆದಿಡಲು RBI ಸೂಚಿಸಿದೆ. ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ RBI ಈ ನಿರ್ಧಾರವಾನನು ಕೈಗೊಂಡಿದೆ.

RBI ನಿಂದ ಬಹುದೊಡ್ಡ ಘೋಷಣೆ
ಮಾರ್ಚ್ 30 ಮತ್ತು 31 ರಂದು ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಎಲ್ಲಾ ಕಚೇರಿಗಳನ್ನು ತೆರೆಯಲು ಆರ್‌ಬಿಐ ಸೂಚನೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವಾಗಿರುವುದರಿಂದ ಶನಿವಾರ-ಭಾನುವಾರದಂದು ಬ್ಯಾಂಕ್‌ ಗಳು ತೆರೆದಿರಲು ಸೂಚನೆ ನೀಡಲಾಗಿದೆ. ಆರ್‌ಬಿಐ ಆದೇಶದ ಪ್ರಕಾರ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಮಾರ್ಚ್ 30 ಮತ್ತು 31 ರಂದು ದೇಶಾದ್ಯಂತ ಬ್ಯಾಂಕ್‌ ಗಳು ಸಾಮಾನ್ಯ ಕೆಲಸದ ಸಮಯದ ಪ್ರಕಾರ ತೆರೆದಿರುತ್ತವೆ. March 30th ಹಾಗೂ 31st 2024 ರ ಶನಿವಾರ ಮತ್ತು ಭಾನುವಾರ ದೇಶದ ಎಲ್ಲ ಬ್ಯಾಂಕುಗಳು ತೆರೆದಿಡಲು RBI ನಿರ್ಧರಿಸಿದೆ.

Image Credit: Theprint
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in