Privatization: ಖಾಸಗಿಯಾಗಲಿದೆ ಈ 2 ಸರ್ಕಾರೀ ಬ್ಯಾಂಕುಗಳು, ಖಾತೆ ಇದ್ದವರೇ ಬೇಗ ಎಚ್ಛೆತ್ತುಕೊಳ್ಳಿ.
ಖಾಸಗಿಯಾಗಲಿದೆ ದೇಶದ ಎರಡು ಪ್ರತಿಷ್ಠಿತ ಸರ್ಕಾರೀ ಬ್ಯಾಂಕುಗಳು.
Bank Privatization Latest Update: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. RBI ಇತ್ತೀಚಿಗೆ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಕೂಡ ರದ್ದುಪಡಿಸಿದೆ. September ಹಾಗೂ October ನಲ್ಲಿಯೇ ಬರೋಬ್ಬರಿ 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸಿ ಬ್ಯಾಂಕ್ ನ ಎಲ್ಲ ರೀತಿಯ ವಹಿವಾಟುಗಳನ್ನು ನಿಲ್ಲಿಸಲು RBI ಆದೇಶ ಹೊರಡಿಸಿದೆ.
ಇನ್ನು RBI ಪರವಾನಗಿ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಬ್ಯಾಂಕುಗಳಿಗೆ ಮತ್ತೊಂದು ಶಾಕ್ ಎದುರಾಗಿದೆ. ಬ್ಯಾಂಕುಗಳ ಖಾಸಗೀಕರಣದ ಸುದ್ದಿಗಳು ದಿನೇ ದಿನೇ ವೈರಲ್ ಆಗುತ್ತಿದೆ. ದೇಶದ ಈ ಎರಡು ಜನಪ್ರಿಯ ಬ್ಯಾಂಕ್ ಗಳು ಖಾಸಗೀಕರಣ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಚಿಂತಿಸುವಂತಾಗಿದೆ.
ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬಿಗ್ ಅಪ್ಡೇಟ್
ಕೇಂದ್ರ ಸರ್ಕಾರವು ಅನೇಕ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಸರ್ಕಾರೀ ಬ್ಯಾಂಕ್ ಗಳ ಖಾಸಗೀಕರಣದ ವಿಷಯವಾಗಿ ಈಗಾಗಲೇ ಸಾಕಷ್ಟು ಸುದ್ದಿಗಳು ಹರಡಿವೆ. ದೇಶದಲ್ಲಿ ಅನೇಕ ಬ್ಯಾಂಕ್ ಗಳು ಸರ್ಕಾರಿ ಬ್ಯಾಂಕ್ ಗಳಾಗಿವೆ. ಕೇಂದ್ರ ಸರ್ಕಾರವು ಅನೇಕ ಬ್ಯಾಂಕ್ ಗಳ ಖಾಸಗೀಕರಣ ಮಾಡಿದೆ ಎನ್ನಲಾಗುತ್ತಿದೆ. ಬ್ಯಾಂಕ್ ಗಳನ್ನೂ ಖಾಸಗೀಕರಣಗೊಳಿಸುವಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದೆ. ಅನೇಕ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಯೋಜನೆ ಹೂಡುತ್ತಿದೆ.
ಖಾಸಗಿಯಾಗಲಿದೆ ಈ 2 ಸರ್ಕಾರೀ ಬ್ಯಾಂಕುಗಳು
*Central Bank of India
*Indian Overseas Bank
ಬ್ಯಾಂಕ್ ಖಾಸಗೀಕರಣದ ಕುರಿತು ಸಚಿವರ ಪ್ರತಿಕ್ರಿಯೆ ಏನು..?
ಬ್ಯಾಂಕ್ ಗಳ ಖಾಸಗೀಕರಣದ ಸುದ್ದಿ ವೈರಲ್ ಆಗುತ್ತಿದ್ದಂತೆ ಸರ್ಕಾರಿ ನೌಕರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್ ಖಾಸಗೀಕರಣದ ಕುರಿತು ಹಣಕಾಸು ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಖಾಸಗೀಕರಣದ ದಿನಾಂಕಗಳನ್ನು ಶಾಸಕಾಂಗ ಪ್ರಕ್ರಿಯೆಯ ನಂತರ ಮಾತ್ರ ನಿರ್ಧರಿಸಲಾಗುತ್ತದೆ. ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ, 1970 ಮತ್ತು ಬ್ಯಾಂಕಿಂಗ್ ಕಂಪನಿಗಳ ಕಾಯಿದೆ, 1980 ತಿದ್ದುಪಡಿಗಳನ್ನು ಒಳಗೊಂಡಂತೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತದೆ.