Recruitment: ಪದವಿ ಮಾಡಿದವರಿಗೆ ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗದ ಜೊತೆಗೆ 50 ಸಾವಿರ ಸಂಬಳ, ಇಂದೇ ಅರ್ಜಿ ಹಾಕಿ.
ಪದವೀಧರರಿಗೆ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಇಂದೇ ಅರ್ಜಿ ಸಲ್ಲಿಸಿ.
Bank Recruitment 2023: ಸದ್ಯ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ. ಲಕ್ಷಾಂತರ ವಿದ್ಯಾವಂತರು ಇನ್ನು ಕೂಡ ಉದ್ಯೋಗವಿಲ್ಲದೆ ಖಾಲಿ ಕೂತಿದ್ದಾರೆ. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಇನ್ನು ದೊರಕದೆ ಇರುವ ಕಾರಣ ಇನ್ನು ಕೂಡ ಉದೋಗದ ಹುಡುಕಾಟದಲ್ಲಿರುವವರು ಸಾಕಷ್ಟು ಮಂದಿ ಇದ್ದಾರೆ.
ಇನ್ನು ಭಾರತ ಸರ್ಕಾರ ಆಗಾಗ ಖಾಲಿ ಇರುವ ಹುದ್ದೆಗಳಿಗೆ ಆಗಾಗ ಅರ್ಜಿ ಅಹ್ವಾನ ಮಾಡುತ್ತಲೇ ಇರುತ್ತದೆ. ನೀರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪದವಿ ಮಾಡಿದವರಿಗೆ ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗ
ಕೆಲವೊಮ್ಮೆ ಸರ್ಕಾರ ವಿವಿಧ ಉದ್ಯೋಗಕ್ಕೆ ಅರ್ಜಿ ಅಹ್ವಾನ ಮಾಡಿದರು ಕೂಡ ಅದೆಷ್ಟೋ ಅರ್ಹಿ ಆಹ್ವಾನದ ವಿಷಯ ಗಮನಕ್ಕೆ ಬರುವದಿಲ್ಲ. ಇದೀಗ ಪದವಿ ಮಾಡಿದವರಿಗೆ ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗವೊಂದು ಕಾದಿದೆ. ಬ್ಯಾಂಕ್ ಅರ್ಹರಿಗೆ ಅರ್ಜಿ ಆಹ್ವಾನಿಸಿದೆ. ಅಸಕತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಭರ್ತಿಮಾಡಿ ಸಲ್ಲಿಸಬಹುದಾಗಿದೆ. ಪದವೀಧರರಿಗೆ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶ ಎನ್ನಬಹುದು.
ಈ ದಿನಾಂಕದೊಳಗೆ ಅರ್ಜಿ ಸಲ್ಲಿಕೆ ಅಗತ್ಯ
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಲಿಮಿಟೆಡ್ ಟ್ರೈನಿ ಕ್ಲರ್ಕ್ ಮತ್ತು ಇತರ ಹಲವು ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದೆ. ಇದಕ್ಕಾಗಿ ಅಧಿಕೃತ ವೆಬ್ ಸೈಟ್ ನಲ್ಲಿ ಅಭ್ಯರ್ಥಿಗಳಿಂದ ಆನ್ ಲೈನ್ ಫಾರ್ಮ್ ಗಳನ್ನು ಆಹ್ವಾನಿಸಲಾಗುತ್ತಿದೆ. ಫಾರ್ಮ್ ಅನ್ನು ಭರ್ತಿಮಾಡುವ ಆನ್ ಲೈನ್ ಪ್ರಕ್ರಿಯೆಯು ಅಕ್ಟೋಬರ್ 10 ರಿಂದ ಪ್ರಾರಂಭವಾಗಿದೆ. ಇನ್ನು ಉದ್ಯೋಗದ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಕೂಡ ನಿಗದಿಯಾಗಿದ್ದು, ಅಕ್ಟೋಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಖಾಲಿ ಇರುವ ಹುದ್ದೆಯ ವಿವರ ಹಾಗೂ ಅಭ್ಯರ್ಥಿಯ ಅರ್ಹತೆ
ನೇಮಕಾತಿ ಅಡಿಯಲ್ಲಿ ಒಟ್ಟು 153 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 45 ಟ್ರೈನಿ ಜೂನಿಯರ್ ಆಫೀಸರ್, 107 ಟ್ರೈನಿ ಕ್ಲರ್ಕ್ ಮತ್ತು 1 ಸ್ಟೆನೋ ಟೈಪಿಸ್ಟ್ ಹುದ್ದೆಗಳು ಸೇರಿವೆ. ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ಸ್ಟ್ರೀಮ್ ನಿಂದ ಪದವಿ ಪಡೆದ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸಬಹುದು ಆದರೆ ಮರಾಠಿಯನ್ನು ಮೆಟ್ರಿಕ್ಯುಲೇಷನ್ ನಲ್ಲಿ ಒಂದು ವಿಷಯವಾಗಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಕೆಯ ಶುಲ್ಕದ ವಿವರ
ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸುವಾಗ ನೀವು ಕೆಲವು ಶುಲ್ಕಗಳನ್ನು ಸಹ ಠೇವಣಿ ಮಾಡಬೇಕಾಗುತ್ತದೆ. ಈ ಶುಲ್ಕವನ್ನು ಆನ್ ಲೈನ್ ಮೋಡ್ ನಲ್ಲಿ ಮಾತ್ರ ಠೇವಣಿ ಮಾಡಬೇಕು. ಈ ಶುಲ್ಕವನ್ನು 1770 ರೂ. ಗೆ ನಿಗದಿಪಡಿಸಲಾಗಿದೆ. ಟ್ರೈನಿ ಕ್ಲರ್ಕ್ ಹುದ್ದೆಗಳಿಗೆ 1180 ರೂ. ಆಗಿದೆ. ಉದ್ಯೋಗವನ್ನು ಪಡೆಯಲು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಭರ್ಜರಿ 50 ಸಾವಿರ ಸಂಬಳ
ಟ್ರೈನಿ ಜೂನಿಯರ್ ಆಫೀಸರ್ ಹುದ್ದೆಗಳಿಗೆ ನೀವು ಆಯ್ಕೆಯಾದರೆ, ನಿಮಗೆ 30,000 ರೂ. ಪಡೆಯಬಹುದು. ತರಬೇತಿ ಅವಧಿ ಮುಗಿದ ನಂತರ ತಿಂಗಳಿಗೆ 49,000 ರೂ. ಪಡೆಯುವ ಅವಕಾಶವಿದೆ. ಇನ್ನು ಟ್ರೈನಿ ಕ್ಲರ್ಕ್ ಗೆ ಇದು ರೂ 25,000 ಮತ್ತು ತರಬೇತಿ ಅವಧಿ ಮುಗಿದ ನಂತರ ತಿಂಗಳಿ 32,000 ಆಗಿದೆ. ಸ್ಟೆನೋ ಟೈಪಿಸ್ಟ್ ತಿಂಗಳಿಗೆ ರೂ. 50,415 ವೇತನವನ್ನು ಪಡೆಯಬಹುದಾಗಿದೆ.