Ads By Google

Saving Account: SBI, HDFC ಮತ್ತು ICICI ಬ್ಯಾಂಕ್ ಸೇವಿಂಗ್ ಅಕೌಂಟ್ ಇದ್ದವರಿಗೆ ಹೊಸ ನಿಯಮ, ಇಷ್ಟು ಶುಲ್ಕ ಕಡ್ಡಾಯ.

Bank account close fee

Image Credit: Original Source

Ads By Google

Bank Saving Account Close Fee: ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಖಾತೆ ತೆರೆಯಲು ಆಯ್ಕೆಯನ್ನು ನೀಡುತ್ತವೆ. ಗ್ರಾಹಕರು ಅವರ ಇಚ್ಛೆಗೆ ಅನುಗುಣವಾಗಿ ಖಾತೆಯನ್ನು ತೆರೆಯುತ್ತಾರೆ. ಸಾಮಾನ್ಯವಾಗಿ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ.

ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಕೂಡ ಕೆಲವರು ಹೊಂದಿರುವ ಉದಾಹರಣೆಗಳಿವೆ. ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯಾವುದೇ ವ್ಯಕ್ತಿಯು ಆದಾಯವನ್ನು ಗಳಿಸುತ್ತಿದ್ದರೆ ಬಹು ಉಳಿತಾಯ ಖಾತೆಯನ್ನು ಹೊಂದಿರುವುದಕ್ಕಿಂತ ಒಂದೇ ಉಳಿತಾಯ ಖಾತೆಯನ್ನು ಹೊಂದಿದರೆ ಯಾವುದೇ ರೀತಿಯ ನಷ್ಟ ಎದುರಾಗುವುದಿಲ್ಲ.

Image Credit: Hridayindia

ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆ ಹೊಂದಿರುವವರಿಗೆ ಮಹತ್ವದ ಮಾಹಿತಿ
ಒಂದು ಉಳಿತಾಯ ಖಾತೆಯ ನಿರ್ವಹಣೆಯು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಹೆಚ್ಚಿನ ಉಳಿತಾಯ ಖಾತೆ ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಕಷ್ಟವಾಗುತ್ತದೆ. ಇನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ಹೆಚ್ಚಿನ ಉಳಿತಾಯ ಖಾತೆಯನ್ನು ಮುಚ್ಚಲು ಇಷ್ಟಪಡುತ್ತಾರೆ. ಆದಷ್ಟೇ ಖಾತೆಯನ್ನು Close ಮಾಡಲು ವಿವಿಧ ಬ್ಯಾಂಕುಗಳು ಶುಲ್ಕವನ್ನು ವಿಧಿಸುತ್ತದೆ. ಇದೀಗ Bank account Close ಮಾಡಲು ಯಾವ ಯಾವ ಬ್ಯಾಂಕ್ ಗಳು ಎಷ್ಟು ಎಷ್ಟು ದಂಡವನ್ನು ವಿಧಿಸುತ್ತದೆ ಎನ್ನುವ ಬಗ್ಗೆ ವಿವರ ತಿಳಿಯೋಣ.

SBI, HDFC ಮತ್ತು ICICI ಬ್ಯಾಂಕಿನಲ್ಲಿ ಸೇವಿಂಗ್ ಅಕೌಂಟ್ Close ಮಾಡಲು ಇಷ್ಟು ಶುಲ್ಕ ಕಡ್ಡಾಯ
*HDFC Bank Saving Account Close Fee
ನೀವು HDFC ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದ 14 ದಿನಗಳಲ್ಲಿ ನೀವು ಅದನ್ನು ಮುಚ್ಚಿದರೆ, ಬ್ಯಾಂಕ್ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ನೀವು 15 ನೇ ದಿನದಿಂದ 12 ತಿಂಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಿದರೆ ನೀವು 500 ರೂ. ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಈ ಶುಲ್ಕ 300 ರೂ. ಆಗಿದೆ. ಇನ್ನು ಒಂದು ವರ್ಷದ ನಂತರ ಬ್ಯಾಂಕ್ ಖಾತೆ ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

Image Credit: NDTV

*SBI Bank Saving Account Close Fee
SBI Bank ನಲ್ಲಿ ಗ್ರಾಹಕರು ಒಂದು ವರ್ಷದ ನಂತರ ಬ್ಯಾಂಕ್ ಖಾತೆ ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ನೀವು 15 ದಿನಗಳಿಂದ 12 ತಿಂಗಳವರೆಗೆ ಖಾತೆಯನ್ನು ಮುಚ್ಚಿದರೆ, ನಂತರ ನೀವು GST ಜೊತೆಗೆ 500 ರೂ. ಪಾವತಿಸಬೇಕಾಗುತ್ತದೆ.

*ICICI Bank Saving Account Close Fee
ನೀವು ICICI ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದ 30 ದಿನಗಳಲ್ಲಿ ನೀವು ಅದನ್ನು ಮುಚ್ಚಿದರೆ, ಬ್ಯಾಂಕ್ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ನೀವು 31 ನೇ ದಿನದಿಂದ 12 ತಿಂಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಿದರೆ ನೀವು 500 ರೂ. ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Image Credit: Hridayindia

*Canara Bank Saving Account Close Fee
ನೀವು Canara ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದ 14 ದಿನಗಳಲ್ಲಿ ನೀವು ಅದನ್ನು ಮುಚ್ಚಿದರೆ ಬ್ಯಾಂಕ್ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ನೀವು 15 ನೇ ದಿನದಿಂದ 12 ತಿಂಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಿದರೆ ನೀವು 200 ರೂ. ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಒಂದು ವರ್ಷದ ನಂತರ ಬ್ಯಾಂಕ್ ಖಾತೆ ಮುಚ್ಚಿದರೆ ಇನ್ನೂ ರೂ 100 ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

*Yes Bank Saving Account Close Fee
ನೀವು Yes ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದ 30 ದಿನಗಳು ಹಾಗೂ ಒಂದು ವರ್ಷದ ನಂತರ ನೀವು ಅದನ್ನು ಮುಚ್ಚಿದರೆ, ಬ್ಯಾಂಕ್ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ನೀವು 31 ನೇ ದಿನದಿಂದ 12 ತಿಂಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಿದರೆ ನೀವು 500 ರೂ. ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.