RBI Update: ಈ ಭಾನುವಾರ ಕೂಡ ದೇಶದ ಎಲ್ಲಾ ಬ್ಯಾಂಕುಗಳು ತೆರೆದಿರಲಿದೆ, RBI ನಿಂದ ಮಹತ್ವದ ಆದೇಶ

ಈ ಭಾನುವಾರ ಕೂಡ ದೇಶದ ಎಲ್ಲಾ ಬ್ಯಾಂಕುಗಳು ತೆರೆದಿರಲಿದೆ, ಬ್ಯಾಂಕ್ ಗ್ರಾಹಕರ ಗಮನಕ್ಕೆ

March 31st Sunday No Holiday For Bank: ಪ್ರಸ್ತುತ 2023 -24 ಹಣಕಾಸು ವರ್ಷ ಮುಗಿಯಲು ಇನ್ನೇನು ಕೆಲವು ದಿನಗಳು ಬಾಕಿ ಇವೆ. April 1 2024 ರಿಂದ ಹೊಸ ಹಣಕಾಸು ವರ್ಷ 2024 -25 ಆರಂಭಗೊಳ್ಳುತ್ತದೆ. ಇನ್ನು ಹೊಸ ಹಣಕಾಸು ವರ್ಷದ ಆರಂಭದ ಕಾರಣ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತವೆ ಹಾಗೆಯೆ ಅನೇಕ ಹೊಸ ಹೊಸ ನಿಯಮಗಳು ಕೂಡ ಜಾರಿಯಾಗುತ್ತದೆ.

ಹೊಸ ಹಣಕಾಸು ವರ್ಷದ ಆರಂಭದ ಹಿನ್ನಲ್ಲೆ ಹಣಕಾಸೇತರ ವಹಿವಾಟುಗಳು ಬದಲಾಗುವ ಸಾಧ್ಯತೆ ಇರುತ್ತದೆ. ಇನ್ನು ಹಣಕಾಸು ವರ್ಷದ ಅಂತ್ಯದೊಳಗೆ ಬ್ಯಾಂಕ್ ಹಾಗೂ ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಕೆಲಸ ಇರುತ್ತದೆ. ಏಕೆಂದರೆ ಪ್ರಸಕ್ತ ಹಣಕಾಸು ವರ್ಷ ಮುಗಿಯುದರೊಳಗೆ ಆ ಹಣಕಾಸು ವರ್ಷದ ಎಲ್ಲ ವಹಿವಾಟುಗಳು ಮುಗಿಯುವುದು ಅಗತ್ಯವಾಗಿದೆ. ಸದ್ಯ RBI ಹಣಕಾಸು ವರ್ಷದ ಮುಕ್ತಾಯದ ಹಂತದಲ್ಲಿ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

bank open in sunday
Image Credit: Original Source

ಮಾರ್ಚ್ 31 ರ ಭಾನುವಾರ ದೇಶದಾದ್ಯಂತ ಯಾವುದೇ ಬ್ಯಾಂಕ್ ಬಂದ್ ಆಗಿರುವುದಿಲ್ಲ
ಸಾಮಾನ್ಯವಾಗಿ ದೇಶದ ಎಲ್ಲ ಬ್ಯಾಂಕುಗಳಿಗೆ ವರದ ಪ್ರತಿ ಭಾನುವಾರ ರಜೆ ಇದ್ದೆ ಇರುತ್ತದೆ. ಪ್ರತಿ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗೆ ರಜೆ ಇರುತ್ತದೆ. ಸದ್ಯ RBI ದೇಶದ ಎಲ್ಲ ಬ್ಯಾಂಕ್ ಗಳಿಗೆ ಭಾನುವಾರದ ರಜೆ ಸಂಬಂಧಿತ ಮಹತ್ವದ ಆದೇಶವನ್ನು ಹೊರಡಿಸಿದೆ. March 31st 2024 ರ ಭಾನುವಾರ ದೇಶದ ಎಲ್ಲ ಬ್ಯಾಂಕುಗಳು ತೆರೆದಿಡಲು RBI ನಿರ್ಧರಿಸಿದೆ.

RBI ಮಹತ್ವದ ಘೋಷಣೆ
ಸಾಮಾಜಿಕ ಮಾಧ್ಯಮ X ನಲ್ಲಿ RBI ಭಾನುವಾರ ಬ್ಯಾಂಕ್ ತೆರೆದಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕ್‌ ಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ. ಇನ್ನು ಆದಾಯ ತೆರಿಗೆ ಕಚೇರಿಗಳು ಕೂಡ ಭಾನುವಾರದಂದು ತೆರೆದಿರಲಿದೆ.

Join Nadunudi News WhatsApp Group

this sunday is not holiday for all banks in india
Image Credit: Original Source

Join Nadunudi News WhatsApp Group