Bank Rules: ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ, ಬ್ಯಾಂಕಿಗೆ ಹೋಗುವ ಮುನ್ನ RBI ನಿಯಮ ತಿಳಿದುಕೊಳ್ಳಿ.
ಬ್ಯಾಂಕುಗಳು ಕೆಲಸ ನಿರ್ವಹಿಸುವ ಬಗ್ಗೆ ಈಗ RBI ಬದಲಾವಣೆ ಮಾಡಲು ಮುಂದಾಗಿದ್ದು ಇದು ಜನರ ನೇರ ಪರಿಣಾಮವನ್ನ ಬೀರಲಿದೆ.
Bank Working Hour Rules Changes: ಸಾಮಾನ್ಯವಾಗಿ ಹಣಕಾಸಿನ ವ್ಯವಹಾರಗಳಿಗೆ ಜನರು ಬ್ಯಾಂಕುಗಳನ್ನ ಅವಲಂಭಿಸಿದ್ದಾರೆ. ಹೌದು ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಕೋಟಿ ಬ್ಯಾಂಕ್ ವ್ಯವಹಾರ ನಡೆಯುತ್ತದೆ. ಸದ್ಯ 2023 ರ ವರ್ಷದಲ್ಲಿ ಬ್ಯಾಂಕುಗಳ ಹಲವು ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕುಗಳ ನಿಯಮದಲ್ಲಿ ಇನ್ನಷ್ಟು ಬದಲಾವಣೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಈಗಾಗಲೇ ಏಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಚೆಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ RBI ಬದಲಾಯಿಸಿದ್ದು ಈಗ ಇನ್ನೊಂದು ಮಹತ್ವದ ಬದಲಾವಣೆ ಮಾಡಲು ಈಗ RBI ಮುಂದಾಗಿದೆ ಎಂದು ಹೇಳಬಹುದು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ
ಹೌದು ದೇಶದಲ್ಲಿ ಈಗ RBI ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದು ಇದು ಜನರ ಮೇಲೆ ನೆರವರ ಪರಿಣಾಮವನ್ನ ಬೀರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬ್ಯಾಂಕುಗಳ ಕೆಲಸದ ಅವಧಿಯ ಮೇಲೆ ಈಗ RBI ದೊಡ್ಡ ಮಟ್ಟದ ಬದಲಾವಣೆ ಮಾಡಲು ಮುಂದಾಗಿದೆ. ಹೌದು ಬ್ಯಾಂಕುಗಳು ಕೆಲಸ ನಿರ್ವಹಿಸುವ ಬಗ್ಗೆ ಈಗ RBI ಬದಲಾವಣೆ ಮಾಡಲು ಮುಂದಾಗಿದ್ದು ಇದು ಜನರ ನೇರ ಪರಿಣಾಮವನ್ನ ಬೀರಲಿದೆ.
ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ದಿನ ರಜೆ
ಸದ್ಯ ದೇಶದಲ್ಲಿ ಎರಡನೆಯ ಶನಿವಾರ ಮತ್ತು ನಾಲ್ಕನೆಯ ಶನಿವಾರ ಎಲ್ಲಾ ಬ್ಯಾಂಕುಗಳು ರಜೆ ಇರುತ್ತದೆ. ಸದ್ಯ ಈ ನಿಯಮದಲ್ಲಿ ಬದಲಾವಣೆ ಮಾಡಲು ಈಗ RBI ಮುಂದಾಗಿದ್ದು ಇನ್ನುಮುಂದೆ ಎಲ್ಲಾ ಶನಿವಾರ ಬ್ಯಾಂಕುಗಳಿಗೆ ರಜೆ ನೀಡಲು ತೀರ್ಮಾನವನ್ನ ಮಾಡಿದೆ.
ಎಲ್ಲಾ ಶನಿವಾರ ಮತ್ತು ಭಾನುವಾರ ಬ್ಯಾಂಕ್ ನೌಕರರಿಗೆ ರಜೆ ನೀಡಲು ಮುಂದಾಗಿರುವ RBI ಅದರ ಬದಲುಲಿ ಕೆಲಸದ ಸಮಯದಲ್ಲಿ ಹೆಚ್ಚಳವನ್ನ ಮಾಡಲು ತೀರ್ಮಾನವನ್ನ ಮಾಡಿದೆ.
ಅವಧಿಗಿಂತ ಹೆಚ್ಚು ಸಮಯ ಕೆಲಸ
ಹೌದು ಎಲ್ಲಾ ಶನಿವಾರ ನೌಕರರಿಗೆ ರಜೆ ಕೊಡಬೇಕು ಅಂದರೆ ನೌಕರರು ಪ್ರತಿನಿತ್ಯ ಹೆಚ್ಚು ಸಮಯವನ್ನ ಬ್ಯಾಂಕಿನಲ್ಲಿ ಕಳೆಯಬೇಕು, ಅಂದರೆ ಪ್ರತಿನಿತ್ಯ ಹೆಚ್ಚು ಸಮಯ ಕೆಲಸವನ್ನ ಮಾಡಬೇಕು. ಇನ್ನುಮುಂದೆ ಬ್ಯಾಂಕ್ ನೌಕರರು ಪ್ರತಿನಿತ್ಯ ಮಾಡುವ ಕೆಲಸಕ್ಕಿಂತ 40 ನಿಮಿಷ ಹೆಚ್ಚು ಕೆಲಸವನ್ನ ಮಾಡಬೇಕು ಎಂದು RBI ತಿಳಿಸಿದೆ. ಸದ್ಯ ಈ ನಿಯಮ ಸದ್ಯದಲ್ಲೇ ಜಾರಿಗೆ ಬರುವ ಸಾಧ್ಯತೆ ಇದ್ದು ಜನರು ಸೋಮವಾರದಿಂದ ಶುಕ್ರವಾರದ ಸಮಯದಲ್ಲಿ ತಮ್ಮ ಎಲ್ಲಾ ಬ್ಯಾಂಕಿಂಗ್ ಕೆಲಸವನ್ನ ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ.
ಜನರ ಮೇಲೆ ನೇರ ಪರಿಣಾಮ
ಈ ನಿಯಮ ದೇಶದಲ್ಲಿ ಜಾರಿಗೆ ಬಂದಾರೆ ಇದು ಜನರ ಮೇಲೆ ನೇರವಾದ ಪರಿಣಾಮವನ್ನ ಬೀರಲಿದೆ. ಹೌದು ಜನರು ಸೋಮವಾರದಿಂದ ಶುಕ್ರವಾರದ ವರೆಗೆ ತನ್ನ ಬ್ಯಾಂಕಿಂಗ್ ವ್ಯವಹಾರವನ್ನ ಮಾಡಬೇಕು ಇಲ್ಲವಾದರೆ ಅವರು ಮತ್ತೆ ಸೋಮವಾರ ಬರುವ ತನಕ ಕಾಯಬೇಕು. ಕೆಲಸದ ಅವಧಿ ಹೆಚ್ಚಾದ ಕಾರಣ ಜನರು ಪ್ರತಿನಿತ್ಯ 40 ನಿಮಿಷ ಹೆಚ್ಚು ಬ್ಯಾಂಕಿನಲ್ಲಿ ವಹಿವಾಟು ಮಾಡಬಹುದು. ಸದ್ಯ ಈ ನಿಯಮ ಕೆಲವೇ ದಿನಗಳಲ್ಲಿ ದೇಶದಲ್ಲಿ ಜಾರಿಗೆ ಬರಲಿದೆ.