Bank Time: ಬ್ಯಾಂಕ್ ಕೆಲಸದ ಸಮಯದಲ್ಲಿ ಐತಿಹಾಸಿಕ ಬದಲಾವಣೆ, ಇಷ್ಟು ಸಮಯದ ಕೆಲಸ ಕಡ್ಡಾಯ.

ಇಂದಿನಿಂದ ಬ್ಯಾಂಕಿಂಗ್ ಅವಧಿಯಲ್ಲಿ ಹೊಸ ನಿಯಮ ನಿಯಮ ಜಾರಿ.

Bank Working Time Change: ಸದ್ಯ ದೇಶದಲ್ಲಿ Banking ನಿಯಮಗಳು ಸಾಕಷ್ಟು ಬದಲಾಗುತ್ತಿವೆ. RBI ಬ್ಯಾಂಕುಗಳಿಗೆ ದಿನಕ್ಕೊಂದು ನಿಯಮವನ್ನು ಜಾರಿಮಾಡುತ್ತಿದೆ. RBI ನಿಯಮಾನುಸಾರ ಬ್ಯಾಂಕುಗಳು ವಹಿವಾಟನ್ನು ನಡೆಸಬೇಕಿದೆ. ಇನ್ನು RBI ನಿಯಮ ಉಲ್ಲಘಿಸಿದ ಪ್ರತಿ ಬ್ಯಾಂಕ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಇನ್ನು ಸದ್ಯ ದೇಶದ ಎಲ್ಲಾ ಬ್ಯಾಂಕುಗಳು ಕೂಡ ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಆನ್ಲೈನ್ ಮೂಲಕ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಿದ್ದರೂ ಕೂಡ ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡುತ್ತಲೇ ಇರುತ್ತಾರೆ.

Bank Working Time Change
Image Credit: Economictimes

ಬ್ಯಾಂಕಿಂಗ್ ಕೆಲಸದ ಸಮಯದಲ್ಲಿ ಬದಲಾವಣೆ
ಇನ್ನು ಬ್ಯಾಂಕ್ ಉದ್ಯೋಗಿಗಳು ಭ್ರಹತ್ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಬ್ಯಾಂಕುಗಳಲ್ಲಿ ಕೆಲಸ ಹೆಚ್ಚಿದ್ದು ಸಿಬ್ಬಂದಿಗಳು ಇಲ್ಲದ ಕಾರಣ ಕೆಲಸ ಹೊರೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.

ಇನ್ನು ಬ್ಯಾಂಕ್ ನೌಕರರ ಮುಷ್ಕರ ಸುದ್ದಿ ಕೇಳುತ್ತಿದ್ದಂತೆ ಇದೀಗ ಬ್ಯಾಂಕಿಂಗ್ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲು ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳು ಮುಂದಾಗಿದ್ದಾರೆ. ಬ್ಯಾಂಕಿಂಗ್ ಉದ್ಯೋಗಿಗಳ ಸಂಘಟನೆಗಳು October 1 ರಿಂದ ಹೊಸ ನಿಯಮ ಜಾರಿ ಮಾಡುವಂತೆ ಮುಂದಾಗಿದ್ದಾರೆ.

Bank Employees
Image Credit: Livemint

ಬ್ಯಾಂಕ್ ಟೈಮಿಂಗ್ ಬದಲಾವಣೆ ಮಾಡುವಂತೆ ಉದ್ಯೋಗಿಗಳ ಆಕ್ರೋಶ
ಈ ಹಿಂದೆ ಬ್ಯಾಂಕ್ ನ ಕೆಲಸದ ಅವಧಿಯನ್ನು 40 ನಿಮಿಷಗಳು ಹೆಚ್ಚಿಗೆ ಮಾಡಲಾಗಿತ್ತು. ಇದೀಗ ಈ ಬ್ಯಾಂಕಿಂಗ್ ಸಮಯದ ಹೆಚ್ಚಳದ ಬಗ್ಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಸೊತ್ತೋಲೆ ಹೊರಡಿಸಿದೆ. “ಅನೇಕ ಬ್ಯಾಂಕ್ ಶಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಕಾರಣ ನೌಕರರು ಸಾಮಾನ್ಯವಾದ ಕಚೇರಿ ಸಮಯ ಮೀರಿ ಕೆಲಸ ಮಾಡಬೇಕಿದೆ.

Join Nadunudi News WhatsApp Group

ಈ ಹಿನ್ನಲೆ ಸೂಕ್ತವಾಗಿ ಖಾಲಿ ಹುದ್ದೆಗಳಿಗೆ ನೌಕರರನ್ನು ನೇಮಕ ಮಾಡಬೇಕಿದೆ. ಆದರೆ ಬ್ಯಾಂಕ್ ಆಡಳಿತ ಮಂಡಳಿಗಳು ಈ ಬಗ್ಗೆ ಇನ್ನು ಕ್ರಮ ಕೈಗೊಂಡಿಲ್ಲ. ಹೀಗಾಗಿ ಹೆಚ್ಚಿನ ಕೆಲಸದ ಸಮಯವೂ ಈಗ ಇರುವ ಉದ್ಯೋಗಿಗಳ ಮೇಲೆ ಬೀರುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

Bank Working Time latest update
Image Credit: Pinterest

October 1 ರಿಂದ ಬ್ಯಾಂಕಿಂಗ್ ಅವಧಿಯಲ್ಲಿ ಹೊಸ ನಿಯಮ ನಿಯಮ ಜಾರಿ
ಇನ್ನು ಬ್ಯಾಂಕ್ ನೌಕರರ ನೇಮಕಾತಿಗೆ ಒತ್ತಾಯಿಸಿದ್ದು, October 1 ರಿಂದ ಬ್ಯಾಂಕಿಂಗ್ ಉದ್ಯೋಗಿಗಳು ಕಚೇರಿಯ ಅವಧಿ ಮೀರಿ ಕೆಲಸ ಮಾಡದಂತೆ ಸೂಚನೆ ನೀಡಲಾಗಿದೆ. ಹೊಸ ನಿಯಮದ ಪ್ರಕಾರ, AIBEA ಎಲ್ಲಾ ಸದಸ್ಯರಿಗೆ ನಿಯಮಿತ ಕಚೇರಿ ಸಮಯ ಅಂದರೆ ಬೆಳಿಗ್ಗೆ 9:45 ರಿಂದ ಸಂಜೆ 4:45 ಮೀರಿ ಕೆಲಸದ ಮಾಡದಂತೆ ಸೂಚನೆ ನೀಡಲಾಗಿದೆ.ಇನ್ನುಮುಂದೆ ಬ್ಯಾಂಕ್ ನೌಕರರು ಹೆಚ್ಚಿನ ಸಮಯ ಕೆಲಸ ಮಾಡುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group