Ads By Google

Rishab Shetty: ರಿಷಬ್ ಶೆಟ್ಟಿ ಬಿಜೆಪಿ ಸೇರುವುದರ ಬಗ್ಗೆ ಸ್ಪಷ್ಟನೆ ನೀಡಿದ ಬಸವರಾಜ್ ಬೊಮ್ಮಾಯಿ.

Chief Minister Basavaraj Bommai has clarified that Rishabh Shetty is not joining our party
Ads By Google

CM Basavaraj Bommai In Kolluru: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ರಿಷಬ್ ಶೆಟ್ಟಿ (Rishab Shetty) ಸಹ ಕಾಣಿಸಿಕೊಂಡಿದ್ದಾರೆ.

ಇದರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಸಿಎಂ ಜೊತೆ ರಿಷಬ್ ಶೆಟ್ಟಿ ಇರುವುದನ್ನು ನೋಡಿ ರಿಷಬ್ ಬಿಜೆಪಿಗೆ ಬರಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.

Image Credit: news9live

ಕೊಲ್ಲೂರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಟ ರಿಷಬ್ ಶೆಟ್ಟಿ ಮತ್ತು ಸಿಎಂ ಬೊಮ್ಮಾಯಿ
ಕೊಲ್ಲೂರಿನಲ್ಲಿ ನಟ ರಿಷಬ್ ಶೆಟ್ಟಿ ಮತ್ತು ಮತ್ತು ಸಿಎಂ ಬೊಮ್ಮಾಯಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದು ಹಲವು ಜನರ ಚರ್ಚೆಗೆ ಕಾರಣವಾಗಿದೆ. ರಿಷಬ್ ಈ ಭಾರಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಆದರೆ ನಟ ರಿಷಬ್ ಶೆಟ್ಟಿ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಇದೀಗ ಇವರಿಬ್ಬರನ್ನು ಜೊತೆಯಾಗಿ ನೋಡಿದ ಜನರು ರಿಷಬ್ ಬಿಜೆಪಿಗೆ ಪ್ರವೇಶ ಮಾಡಲಿದ್ದಾರೆ ಅಂದುಕೊಂಡಿದ್ದಾರೆ.

Image Credit: freepressjournal

ಬಿಜೆಪಿಗೆ ಸೇರಲಿದ್ದಾರಾ ನಟ ರಿಷಬ್ ಶೆಟ್ಟಿ
ಕಿಚ್ಚ ಸುದೀಪ್ ಅವರು ಈಗಾಗಲೇ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಇದೀಗ ನಟ ರಿಷಬ್ ಶೆಟ್ಟಿ ಕೂಡ ಬಿಜೆಪಿ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಈ ಸುದ್ದಿಗಳಿಗೆ ನಟ ರಿಷಬ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಬೇಕು. ರಿಷಬ್ ಶೆಟ್ಟಿ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಹಲವಾರು ಭಾರಿ ಚರ್ಚೆ ಆಗಿತ್ತು.

ಚರ್ಚೆಗೆ ಪೂರಕ ಎನ್ನುವಂತೆ ರಿಷಬ್ ಶೆಟ್ಟಿ ನರೇಂದ್ರ ಮೋದಿ ಜೊತೆ ಮತ್ತು ಸಿಎಂ ಬೊಮ್ಮಾಯಿ ಅವರ ಜೊತೆ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕೊಲ್ಲೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಕಾಣಿಸಿಕೊಂಡಿರುವುದು ಜನರ ಚರ್ಚೆಗೆ ಕಾರಣವಾಗಿದೆ.

ರಿಷಬ್ ಶೆಟ್ಟಿ ಬಿಜೆಪಿ ಸೇರ್ಪಡೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ
ಇಂದು ಕೊಲ್ಲೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಿಷಬ್ ಶೆಟ್ಟಿ ಅವರು ಜೊತೆಯಾಗಿರುವ ಫೋಟೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರಿಬ್ಬರು ಜೊತೆಯಾಗಿ ಇರುವುದನ್ನು ನೋಡಿದ ಜನರು ರಿಷಬ್ ಶೆಟ್ಟಿ ಬಿಜೆಪಿಗೆ ಬರುತ್ತಾರಾ ಎಂದು ಕೇಳುತ್ತಿದ್ದಾರೆ. ಇದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ.

Image Credit: hindustantimes

ಕೊಲ್ಲೂರಿನಲ್ಲಿ ರಿಷಬ್ ಅವರು ಸಿಕ್ಕಿದ್ದು ಆಕಸ್ಮಿಕ ಎಂದ ಸಿಎಂ
ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ ರಿಷಬ್ ಶೆಟ್ಟಿ ಅವರು ಕೊಲ್ಲೂರಿನಲ್ಲಿ ಸಿಕ್ಕಿದ್ದು ಆಕಸ್ಮಿಕವಾಗಿ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ಅವರು ದೇವಸ್ಥಾನದಲ್ಲಿ ಇದ್ದಿದ್ದರು. ಹಾಗಾಗಿ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇದು ಯಾವುದು ಪೂರ್ವ ನಿರ್ಧರಿತ ಆಗಿರಲಿಲ್ಲ ಎಂದಿದ್ದಾರೆ.

ನಮ್ಮ ಸಿದ್ಧಾಂತಕ್ಕೂ ಅವರ ಸಿದ್ದಂತಕ್ಕೂ ಬಹಳ ವ್ಯತ್ಯಾಸ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ.

ರಿಶಬ್ ಶೆಟ್ಟಿ ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ಆಶ್ಚರ್ಯ ಆಯಿತು. ಬಿಜೆಪಿ ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದವರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಏನೆಂದು ಮೂಕಾಂಬಿಕೆ ಆಶೀರ್ವಾದ ಕೊಡುತ್ತಾಳೆ ನೋಡೋಣ ಎಂದಿದ್ದಾರೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in