BCCI: ವಿಶ್ವಕಪ್ ವಿನ್ ಆದ ಟೀಮ್ ಇಂಡಿಯಾಗೆ BCCI ಯಿಂದ ಸಿಗುವ ಬಹುಮಾನ ಎಷ್ಟು ಗೊತ್ತಾ…?

ಕಪ್ ಗೆದ್ದ ಟೀಮ್ ಇಂಡಿಯಾಗೆ ಭರ್ಜರಿ ಬಹುಮಾನ ಘೋಷಣೆ ಮಾಡಿದ BCCI

BCCI Announced T20 World Cup 2024 Winning Prize Money: ಭಾರತ ಕ್ರಿಕೆಟ್ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ರೋಹಿತ್ ಪಡೆ ರೋಚಕ ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಚಾಂಪಿಯನ್ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾ ಐಸಿಸಿಯಿಂದ ಭರ್ಜರಿ ಮೊತ್ತವನ್ನು ಬಹುಮಾನವಾಗಿ ಪಡೆದುಕೊಂಡಿದೆ.

ಇದೀಗ ವಿಶ್ವ ಕ್ರಿಕೆಟ್ ನ ಬಿಗ್ ಬಾಸ್ ಎನಿಸಿಕೊಂಡಿರುವ ಬಿಸಿಸಿಐ ತನ್ನ ಚಾಂಪಿಯನ್ ತಂಡಕ್ಕೆ ಭರ್ಜರಿ ಬಹುಮಾನ ಘೋಷಿಸಿದ್ದು, ಇಡೀ ವಿಶ್ವವೇ ತಲ್ಲಣಿಸುವಂತೆ ಮಾಡಿದೆ. ವಿಶ್ವಕಪ್ ವಿನ್ ಆದ ಟೀಮ್ ಇಂಡಿಯಾಗೆ BCCI ಯಿಂದ ಸಿಗುವ ಬಹುಮಾನ ಎಷ್ಟು ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

BCCI Announced T20 World Cup 2024 Winning Prize Money
Image Credit: Mumbaitak

ವಿಶ್ವಕಪ್ ವಿನ್ ಆದ ಟೀಮ್ ಇಂಡಿಯಾಗೆ BCCI ಯಿಂದ ಸಿಗುವ ಬಹುಮಾನ ಎಷ್ಟು ಗೊತ್ತಾ…?
ಇನ್ನು 9ನೇ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ದಾಖಲೆಯ 125 ಕೋಟಿ ಬಹುಮಾನ ಮೊತ್ತ ಘೋಷಣೆಯಾಗಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ಚಾಂಪಿಯನ್ ಭಾರತ ತಂಡ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿರುವುದು ಸಂತಸ ತಂದಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿತು. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಅಭಿನಂದನೆಗಳು ಎಂದು ಜಯ್ ಶಾ ಬರೆದಿದ್ದಾರೆ.

ವಾಸ್ತವವಾಗಿ, ಬಿಸಿಸಿಐ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾಗೆ ದಾಖಲೆಯ ಮೊತ್ತವನ್ನು ಬಹುಮಾನವಾಗಿ ಘೋಷಿಸುವ ಮೂಲಕ ಇಡೀ ವಿಶ್ವ ಕ್ರಿಕೆಟ್ ಅನ್ನು ಅಚ್ಚರಿಗೊಳಿಸಿದೆ. ಈ ಹಿಂದೆ ಯಾವುದೇ ಚಾಂಪಿಯನ್ ತಂಡ ಇಷ್ಟು ದೊಡ್ಡ ಬಹುಮಾನ ಪಡೆದಿರಲಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಭವಿಷ್ಯದಲ್ಲಿ ಸಿಗುವ ಸಾಧ್ಯತೆ ಇಲ್ಲ. ಟಿ20 ವಿಶ್ವಕಪ್‌ ಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ಮತ್ತು ತಂಡದ ಸಹಾಯಕ ಸಿಬ್ಬಂದಿಗೆ ಒಟ್ಟು 125 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ.

Team India Winning Prize Money Details
Image Credit: Times Now News

Join Nadunudi News WhatsApp Group

Join Nadunudi News WhatsApp Group