BCCI Prize: BCCI ಕೊಟ್ಟ 125 ಕೋಟಿಯಲ್ಲಿ ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ ಗೊತ್ತಾ…?

BCCI ಘೋಷಿಸಿದ 125 ಕೋಟಿ ಬಹುಮಾನ ಮೊತ್ತದಲ್ಲಿ ಯಾರ ಪಾಲು ಎಷ್ಟಿದೆ ಗೊತ್ತಾ...?

BCCI Prize Money: ಭಾರತ ಕ್ರಿಕೆಟ್ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ರೋಹಿತ್ ಪಡೆ ರೋಚಕ ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಚಾಂಪಿಯನ್ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾ ಐಸಿಸಿಯಿಂದ ಭರ್ಜರಿ ಮೊತ್ತವನ್ನು ಬಹುಮಾನವಾಗಿ ಪಡೆದುಕೊಂಡಿದೆ.

ಇನ್ನು 9ನೇ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ BCCI ದಾಖಲೆಯ 125 ಕೋಟಿ ಬಹುಮಾನ ಮೊತ್ತ ಘೋಷಿಸಿದೆ. ಸದ್ಯ ಈ ಬಹುಮಾನ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಈ ಮೊತ್ತದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಎಷ್ಟು ಮೊತ್ತವನ್ನು ನೀಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

BCCI Prize Money
Image Credit: Live Mint

ಟೀಮ್ ಇಂಡಿಯಾ ಆಟಗಾರರಿಗೆ 125 ಕೋಟಿ ಬಹುಮಾನ ಮೊತ್ತ ಘೋಷಿಸಿದ BCCI
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಗೆ ತೆರಳಿದ್ದ ಭಾರತ ತಂಡದಲ್ಲಿ 42 ಸದಸ್ಯರಿದ್ದರು. ಇದರಲ್ಲಿ 15 ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಮೀಸಲು ಆಟಗಾರರು ಸೇರಿದ್ದಾರೆ. ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನ ಮೊತ್ತ ಕೇವಲ ಆಟಗಾರರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಅದು ತಂಡದ ಎಲ್ಲಾ 42 ಸದಸ್ಯರಿಗೆ ಸೇರಿತ್ತು. ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಸೇರಿಕೊಂಡಿರುವುದು ವಿಶೇಷ. ಈ ಮೊತ್ತವನ್ನು ಎಲ್ಲರಿಗೂ ಸಮಾನವಾಗಿ ವಿತರಿಸಲಾಗುವುದಿಲ್ಲ. ಈ ಹಂಚಿಕೆಯನ್ನು ಅವರ ಸ್ಥಾನಮಾನ ಮತ್ತು ಪ್ರದರ್ಶನಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ.

125 ಕೋಟಿ ಬಹುಮಾನ ಮೊತ್ತದಲ್ಲಿ ಯಾರ ಪಾಲು ಎಷ್ಟಿದೆ ಗೊತ್ತಾ…?
ಭಾರತ ತಂಡದ ಎಲ್ಲ 15 ಆಟಗಾರರು ತಲಾ 5 ಕೋಟಿ ಪಡೆಯಲಿದ್ದಾರೆ. ಇದರಲ್ಲಿ ಮೈದಾನ ಪ್ರವೇಶಿಸದ ಆಟಗಾರರಿಗೂ ಸಿಗಲಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತ್ಯೇಕವಾಗಿ 5 ಕೋಟಿ ರೂ. ಲಭ್ಯವಾಗಲಿದೆ. ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮೊಹಾಬ್ರಿ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ತಲಾ 2.5 ಕೋಟಿ ರೂ. ಸಿಗಲಿದೆ.

ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ತಲಾ 1 ಕೋಟಿ ರೂ. ಲಭ್ಯವಾಗಲಿದೆ. ಫಿಸಿಯೋಥೆರಪಿಸ್ಟ್, ಆಟಗಾರರ ಸಾಮರ್ಥ್ಯ ಮತ್ತು ಸ್ಥಿರ ಆರೋಗ್ಯ ಉಸ್ತುವಾರಿ, ಫಿಟ್ನೆಸ್ ತಜ್ಞರು ಸೇರಿದಂತೆ ಸಹಾಯಕ ಸಿಬ್ಬಂದಿಗೆ ತಲಾ 2 ಕೋಟಿ ರೂ. ಹಾಗೂ ಮೀಸಲು ಆಟಗಾರರಾದ ಶುಭಮನ್ ಗಿಲ್, ರಿಂಕು ಸಿಂಗ್, ಅವೇಶ್ ಖಾನ್, ಖಲೀಲ್ ಅಹ್ಮದ್ ತಲಾ 1 ಕೋಟಿ ರೂ. ಬಹುಮಾನದ ಮೊತ್ತ ಸಿಗಲಿದೆ. ಪ್ರತಿಯೊಬ್ಬರಿಗೂ ಬಾಕಿ ಇರುವ ಮೊತ್ತವನ್ನು ವಿತರಿಸಿ ಬಿಲ್ ಕಳುಹಿಸುವಂತೆ ಬಿಸಿಸಿಐ ಸೂಚಿಸಿದೆ. ಬಿಲ್ ಆಧರಿಸಿ ಅವರ ಖಾತೆಗೆ ಹಣ ಜಮಾ ಆಗಲಿದೆ.

Join Nadunudi News WhatsApp Group

T20 World Champions India
Image Credit: Espncricinfo

Join Nadunudi News WhatsApp Group