ಕಾಶಿಯಲ್ಲಿ ಭಿಕ್ಷೆ ಬೇಡುತ್ತಿರುವ ಈ ಮಹಿಳೆ ಓದಿದ್ದು ಎಷ್ಟು ಗೊತ್ತಾ, ಇಂಗ್ಲಿಷ್ ಹೇಗೆ ಮಾತನಾಡುತ್ತಾಳೆ ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.
ಜೀವನ ಕೆಲವೊಮ್ಮೆ ನಮ್ಮನ್ನ ಪಾತಾಳಕ್ಕೆ ಕುಸಿಯುವಂತೆ ಮಾಡುತ್ತದೆ ಎಂದು ಹೇಳಬಹುದು. ನಾವು ಜೀವನದಲ್ಲಿ ಎಷ್ಟೇ ಓದಿದರೂ ನಮಗೆ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಸರಿಯಾದ ಕೆಲಸ ಸಿಗುತ್ತಿಲ್ಲ ಮತ್ತು ಅದೆಷ್ಟೋ ಜನರು ನಮ್ಮ ವಿದ್ಯೆಗೆ ಸರಿಯಾದ ಕೆಲಸಗಳು ಸಿಗದ ಕಾರಣ ದುಡುಕಿನ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಾವು ಹೇಳುತ್ತಿರುವ ಈ ಮಹಿಳೆ ಈ ಕಾಶಿಯಲ್ಲಿ ಭಿಕ್ಷೆಯನ್ನ ಬೇಡಿಕೊಂಡು ಕೆಲಸವನ್ನ ಮಾಡುತ್ತಿದ್ದಾಳೆ, ಆದರೆ ಈಕೆ ಮಾತನಾಡುವ ಇಂಗ್ಲಿಷ್ ಯಾವ ಸರ್ಕಾರೀ ನೌಕರ ಮತ್ತು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ಕೂಡ ಮಾಡುವುದಿಲ್ಲ ಎಂದು ಹೇಳಬಹುದು.
ಈ ಭಿಕ್ಷುಕಿ ಬನಾರಸ್ ನಲ್ಲಿ ಒಬ್ಬ ವಿದ್ಯಾರ್ಥಿಯ ಜೊತೆ ತನ್ನ ಕಷ್ಟವನ್ನ ಹೇಳಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭಿಕ್ಷುಕಿ ಹೇಳಿದ ಮಾತುಗಳನ್ನ ವಿಡಿಯೋ ಮಾಡಿದ ಈ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಅದನ್ನ ಶೇರ್ ಮಾಡಿದ್ದು ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಸ್ನೇಹಿತರೆ ಹಾಗಾದರೆ ಈ ಭಿಕ್ಷುಕಿ ಯಾರು ಮತ್ತು ಈಕೆ ಓದಿದ್ದೆಷ್ಟು ಮತ್ತು ಈಕೆ ಭಿಕ್ಷೆ ಬೇಡುತ್ತಿರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ನಾವು ತೋರಿಸುತ್ತಿರುವ ಈ ಭಿಕ್ಷುಕಿಯ ಹೆಸರು ಸ್ವಾತಿ ಮತ್ತು ಈ ಮಹಿಳೆ ಕಾಶಿಯಲ್ಲಿ ಭಿಕ್ಷೆಯನ್ನ ಬೇಡಿಕೊಂಡು ಜೀವನವನ್ನ ಮಾಡುತ್ತಿದ್ದಾಳೆ. ಈಕೆಗೆ ಮದುವೆಯಾಗಿದ್ದು ಹೆರಿಗೆಯ ನಂತರ ಈ ಮೇಲೆ ಪಾರ್ಶ್ವವಾಯುಗೆ ತುತ್ತಾಗಿದ್ದು ಈಕೆಯ ಬಲಭಾಗ ಕೆಲಸ ಮಾಡುವುದನ್ನ ಕಳೆದುಕೊಂಡಿದೆ ಎಂದು ಹೇಳಬಹುದು. ಜೀವನದಲ್ಲಿ ಬಹಳ ಕಷ್ಟಗಳನ್ನ ಕಂಡಿರುವ ಈ ಮಹಿಳೆ Bsc ಕಂಪ್ಯೂಟರ್ಸ್ ಓದಿದ್ದು ಯಾರಿಗೂ ಕಡಿಮೆ ಇಲ್ಲ ಅನ್ನುವ ಬಹಳ ಸ್ವಚ್ಛವಾಗಿ ಇಂಗ್ಲಿಷ್ ಮಾತನಾಡುತ್ತಾಳೆ.
ಈಕೆ ಇಂಗ್ಲಿಷ್ ಮಾತಾಡುವುದನ್ನ ಒಬ್ಬ ಬನಾರಸ್ ನ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಸದ್ಯ ಆ ವಿಡಿಯೋ ಅನ್ನು ನೀವು ಯು ಟ್ಯೂಬ್ ನಲ್ಲಿ ಕೂಡ ನೋಡಬಹುದಾಗಿದೆ. ವಿದ್ಯಾರ್ಥಿಯ ಜೊತೆ ಮಾತನಾಡಿದ ಸ್ವಾತಿ ಮೂರೂ ವರ್ಷಗಳಿಂದ ಕಾಶಿಯಲ್ಲಿ ಭಿಕ್ಷೆಯನ್ನ ಬೇಡಿಕೊಂಡು ಜೀವನವನ್ನ ಮಾಡುತ್ತಿದ್ದು ಮೂಲತಃ ಇವರು ದಕ್ಷಿಣ ಭಾರತದವರು ಆಗಿದ್ದಾರೆ. ಇನ್ನು ವಿದ್ಯಾರ್ಥಿ ಜೊತೆ ಮಾತನಾಡಿದ ಸ್ವಾತಿ ನನಗೆ ಒಂದೇ ಒಂದು ಉದ್ಯೋಗ ಸಿಕ್ಕರೆ ಭಿಕ್ಷೆ ಬೇಡುವುದನ್ನ ಬಿಟ್ಟು ಕೆಲಸವನ್ನ ಮಾಡಿಕೊಂಡು ನಮ್ಮ ಜೀವನವನ್ನ ನಡೆಸುತ್ತೇನೆ ಎಂದು ಹೇಳಿದ್ದಾಳೆ. ಸ್ನೇಹಿತರೆ ಈ ಭಿಕ್ಷುಕಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.