Long Term SIP: ಮಕ್ಕಳ ಹೆಸರಿನಲ್ಲಿ 10,000 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 2 ಕೋಟಿ ರೂ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ.
SIP ನಲ್ಲಿ ಮಾಸಿಕ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದು.
Benefits Of Systematic Investment Plan: ಮಕ್ಕಳ ಭವಿಷ್ಯದ ಚಿಂತೆ ಯಾರಿಗಿರುದಿಲ್ಲ ಹೇಳಿ..? ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರ ವಿದ್ಯಾಭ್ಯಾಸದಿಂದ ಹಿಡಿದು ಮದುವೆ ತನಕ ಆಗುವ ಖರ್ಚಿನ ಬಗ್ಗೆ ಚಿಂತೆ ಇರುವುದು ಸಹಜ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಹೂಡಿಕೆ ಮಾಡುದು ಉತ್ತಮ.
ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಸ್ಥಿರತೆ ಕಂಡುಕೊಳ್ಳಲು ಸಹಾಯವಾಗುತ್ತದೆ. ಸದ್ಯ ಮಕ್ಕಳಿಗಾಗಿ SIP Investment ಉತ್ತಮ ಆಯ್ಕೆ ಎನ್ನಬಹುದು. SIP ನಲ್ಲಿ ಮಾಸಿಕ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದು.
ಮಕ್ಕಳ ಹೆಸರಿನಲ್ಲಿ 10 ಸಾವಿರ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 2 ಕೋಟಿ
ನೀವು ಹೊಸದಾಗಿ ಮದುವೆಯಾಗಿದ್ದಾರೆ ಮಗುವಿನ ಜನನದಿಂದಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡುದು ಉತ್ತಮ. ಏಕೆಂದರೆ ನಿಮ್ಮ ಮಗುವಿಗೆ 21 ವರ್ಷ ತುಂಬುದರೊಳಗೆ 2 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ನೀವು ಪಡೆದುಕೊಳ್ಳಬಹುದು. ನೀವು ನಿಮ್ಮ ಮಗುವಿಗೆ 21 ವರ್ಷ ತುಂಬುದರೊಳಗೆ 2 ಕೋಟಿಗಿಂತ ಹೆಚ್ಚಿನ ಹಣ ಪಡೆಯಲು ಬಯಸಿದರೆ ನೀವು Systematic Investment Plan ನಲ್ಲಿ ಪ್ರತಿ ತಿಂಗಳು 10,000 ರೂ. ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರೊಂದಿಗೆ 21 ವರ್ಷಗಳಲ್ಲಿ ಮಗುವಿನ ಹೆಸರಿನಲ್ಲಿ 25 .20 ಲಕ್ಷ ರೂ. ಹೂಡಿಕೆ ಆಗುತ್ತದೆ.
ನೀವು SIP ನಲ್ಲಿ 16 ಪ್ರತಿಶತದಷ್ಟು ಲಾಭವನ್ನು ಪಡೆದರೆ ನಂತರ 21 ವರ್ಷಗಳು ಪೂರ್ಣಗೊಂಡ ನಂತರ ನೀವು 2.06 ಕೋಟಿ ರೂಪಾಯಿ ಗಳಿಸುವ ಅವಕಾಶ ಇರುತ್ತದೆ. ಮಗುವಿನ ಹೆಸರಿನಲ್ಲಿ ಠೇವಣಿ ಇಡುವ 25.20 ಲಕ್ಷ ರೂಪಾಯಿಗಳು 21 ವರ್ಷಗಳಲ್ಲಿ 1.81 ಕೋಟಿ ರೂಪಾಯಿ ಆಗುತ್ತದೆ. ಮಗುವಿಗೆ 21 ವರ್ಷ ತುಂಬಿದ ನಂತರ ಈ ಮೊತ್ತವನ್ನು ಮಗುವಿನ ಶಿಕ್ಷಣ, ಮದುವೆ ಅಥವಾ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು.
16 % ಬದಲಿಗೆ 12 % ಬಡ್ಡಿಯನ್ನು ಪಡೆದಾಗ
ಒಂದು ವೇಳೆ ನೀವು SIP ನ ಹೂಡಿಕೆಯಲ್ಲಿ 16 % ಬದಲಿಗೆ 12 % ಬಡ್ಡಿಯನ್ನು ಪಡೆದರೆ ಆಗ ನೀವು 25.20 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ 88.66 ಲಕ್ಷ ರೂಪಾಯಿ ಆದಾಯವನ್ನು ಪಡೆಯಬಹುದು. ಈ ಬಡ್ಡಿದರದ ಹೂಡಿಕೆಯಲ್ಲಿ ಕೂಡ ಒಟ್ಟು 1.13 ಕೋಟಿ ರೂಪಾಯಿ ಲಾಭವನ್ನು ಪಡೆಯಬಹುದು.