Namma Metro Blue And Link Line: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾಕಷ್ಟು ಜನರು ಪ್ರಯಾಣ ಮಾಡುತ್ತಾರೆ. ಪ್ರತಿನಿತ್ಯ ಕೆಲಸಕ್ಕೆ ಹೋಗುವವರು ಮತ್ತು ದೂರದ ಸ್ಥಳಗಳಿಗೆ ಹೋಗುವವರು ಮೆಟ್ರೋ ಟ್ರೈನ್ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಾಕಷ್ಟು ಇರುವ ಕಾರಣ ಜನರು ಹೆಚ್ಚು ಹೆಚ್ಚು ಮೆಟ್ರೋ ಪ್ರಯಾಣವನ್ನು ಬಯಸುತ್ತಾರೆ. ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಂದ ಬೇಸತ್ತಿರುವ ಪ್ರಯಾಣಿಕರಿಗೆ ಒಂದೊಳ್ಳೆಯ ಸಿಹಿ ಸುದ್ದಿ. 2026 ರಲ್ಲಿ ನಮ್ಮ ಮೆಟ್ರೋದ ಪಿಂಕ್ ಮತ್ತು ಬ್ಲೂ ಲೈನ್ ಗಳ ಹೊಸ ವಿಭಾಗಗಳು ಹಂತ ಹಂತವಾಗಿ ತೆರೆಯಲಿದೆ ಎಂದು BMRCL ಮಾಹಿತಿ ನೀಡಿದೆ. ಹಾಗಾದರೆ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಯಾವಾಗ ತೆರೆಯಲಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಪಿಂಕ್ ಮತ್ತು ಬ್ಲೂ ಲೈನ್ ಶೀಘ್ರದಲ್ಲೇ ಆರಂಭ
ಇದೀಗ ಮೆಟ್ರೋ ಪ್ರಯಾಣಿಕರಿಗಾಗಿ BMRCL ಒಂದು ಗುಡ್ ನ್ಯೂಸ್ ನೀಡಿದೆ. ಮಾರ್ಚ್ ನಿಂದ ಸೆಪ್ಟೆಂಬರ್ 2026 ರ ವೇಳೆಗೆ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಗಳ ಹೊಸ ವಿಭಾಗಗಳು ಆರಂಭವಾಗಲಿದೆ. ಈಗಾಗಲೇ ಈಗಾಗಲೇ ಹಸಿರು, ನೇರಳೆ ಮತ್ತು ಹಳದಿ ಲೈನ್ ಗಳು ಸಂಚಾರದಲ್ಲಿವೆ. 2026 ರಲ್ಲಿ ಈ ಹೊಸ ಲೈನ್ ಗಳು ಸೇರ್ಪಡೆಯಾದರೆ ನಗರದ ಸಂಚಾರ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ. IT ಕಾರಿಡಾರ್, ವಾಣಿಜ್ಯ ಕೇಂದ್ರಗಳು ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಸುಲಭವಾಗಲಿದೆ. ಈ ವಿಸ್ತರಣೆಗಳಿಂದ ಬೆಂಗಳೂರು ಮೆಟ್ರೋ ಜಾಲ ಗಣನೀಯವಾಗಿ ಬೆಳೆಯಲಿದೆ. ಪ್ರಯಾಣ ಸಮಯ ಕಡಿಮೆಯಾಗಿ, ಸಾರ್ವಜನಿಕ ಸಂಚಾರ ಹೆಚ್ಚಾಗಲಿದೆ.
ಪಿಂಕ್ ಲೈನ್
ಪಿಂಕ್ ಲೈನ್ ಕಲೇನಾ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 21.25 ಕಿಲೋಮೀಟರ್ ಉದ್ದವಿದೆ. ಇದರಲ್ಲಿ, ಮೊದಲು ಕಲೇನಾ ಅಗ್ರಹಾರದಿಂದ ತಾವರೆಕೆರೆ ವಿಭಾಗವು ಮೊದಲು ಉದ್ಘಾಟನೆಗೊಳ್ಳಲಿದೆ. ಇದು 7.5 ಕಿಲೋಮೀಟರ್ ಉದ್ದದ 6 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. 2026 ರ ಮೇ ತಿಂಗಳಲ್ಲಿ ಆರಂಭ ಮಾಡುವ ಗುರಿಯನ್ನು ಹೊಂದಿದೆ. ನಂತರ ತಾವರೆಕೆರೆಯಿಂದ ನಾಗವಾರ ವರೆಗೆ 13.8 ಕಿಲೋಮೀಟರ್ ಅಂಡರ್ ಗ್ರೌಂಡ್ ವಿಭಾಗ ಡಿಸೆಂಬರ್ 2026 ಕ್ಕೆ ಪೂರ್ಣವಾಗಲಿದೆ. ಇದರಲ್ಲಿ 12 ನಿಲ್ದಾಣಗಳು ಸೇರಿವೆ. ಹಾಗೆ ಈ ಲೈನ್ ಗಳು ಡ್ರೈವರ್ ಲೆಸ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಬ್ಲೂ ಲೈನ್
ಮೆಟ್ರೋ ಬ್ಲೂ ಲೈನ್ ಎಂದರೆ ವಿವಿಧ ನಗರಗಳ ಮೆಟ್ರೋ ವ್ಯವಸ್ಥೆಗಳಲ್ಲಿರುವ ನೀಲಿ ಬಣ್ಣದ ಮಾರ್ಗವಾಗಿದ್ದು, ಬೆಂಗಳೂರಿನಲ್ಲಿ ಇದು 2026 ರ ಅಂತ್ಯದೊಳಗೆ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ದೊಡ್ಡ ಯೋಜನೆಯಾಗಿದೆ. ಬ್ಲೂ ಲೈನ್ ಒಟ್ಟು 58 ಕಿಲೋಮೀಟರ್ ಗೂ ಹೆಚ್ಚು ಉದ್ದವಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ KR Puram ವರೆಗೆ ಮೊದಲ ಹಂತವು ಸುಮಾರು 19.75 ಕಿಮೀ ಆಗಿದೆ. ಈ ಭಾಗವು 13 ನಿಲ್ದಾಣಗಳೊಂದಿಗೆ ಬಾಹ್ಯ ರಿಂಗ್ ರೋಡ್ ನ ದಟ್ಟ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇದು ಡಿಸೆಂಬರ್ 2026 ರಲ್ಲಿ ಆರಂಭವಾಗುವ ಸಾಧ್ಯತೆಯಿದೆ. ನಂತರ ಹೆಬ್ಬಾಳದಿಂದ ವಿಮಾನ ನಿಲ್ದಾಣ ವರೆಗೆ ವಿಸ್ತರಣೆಯಾಗಿ 2027 ರಲ್ಲಿ ಪೂರ್ಣಗೊಳ್ಳಲಿದೆ. ಈ ಲೈನ್ IT ಕಂಪನಿಗಳು ಹಾಗೆ ವಿಮಾನ ಪ್ರಯಾಣಿಕರಿಗೆ ಉತ್ತಮವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

