Bengaluru Vehicle Parking Problems: ದೇಶದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, 2013-14 ರಲ್ಲಿ 1.63 ಕೋಟಿಯಿಂದ 2023 ರ ಅಕ್ಟೋಬರ್ ಗೆ ವಾಹನಗಳ ಸಂಖ್ಯೆ 3 ಕೋಟಿಗೂ ಅಧಿಕ ತಲುಪಿದೆ. ಈ ಹೆಚ್ಚಳದಿಂದ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ಮತ್ತು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ದಿನಗಳು ಉರುಳಿದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ ಮತ್ತು ಇದರಿಂದ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ದಿನಗಟ್ಟಲೆ ಟ್ರಾಫಿಕ್ ನಲ್ಲಿ ಕಳೆಯುವ ಸ್ಥಿತಿ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ BBMP ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೇಯ್ಡ್ ಪಾರ್ಕಿಂಗ್ ಯೋಜನೆ
2026 ರಲ್ಲಿ ಬೆಂಗಳೂರಿನಲ್ಲಿ ಸುಮಾರು 1.23 ಕೋಟಿ ವಾಹನಗಳಿವೆ. ಅದರಲ್ಲಿ 70% ದ್ವಿಚಕ್ರ ವಾಹನಗಳೇ ಇವೆ. ಹೆಚ್ಚಾಗುತ್ತಿರುವ ಈ ವಾಹನಗಳಿಂದ ಅನಧಿಕೃತ ಪಾರ್ಕಿಂಗ್ ಹೆಚ್ಚಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. BBMP ರಸ್ತೆಗಳಲ್ಲಿ ಪಾರ್ಕಿಂಗ್ ನಿಯಂತ್ರಣಕ್ಕಾಗಿ ಪೇಯ್ಡ್ ಪಾರ್ಕಿಂಗ್ ಯೋಜನೆಯನ್ನು ಕೆಲವು ರಸ್ತೆಗಳಲ್ಲಿ ಜಾರಿಗೊಳಿಸುತ್ತಿದೆ. ಪೇಯ್ಡ್ ಪಾರ್ಕಿಂಗ್ ಎಂದರೆ ವಾಹನಗಳನ್ನು ನಿಲ್ಲಿಸಲು ಶುಲ್ಕ ವಿಧಿಸುವ ವ್ಯವಸ್ಥೆಯಾಗಿದೆ. ಆದರೆ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುದು ಮತ್ತು ಸರ್ಕಾರೀ ಸಾರಿಗೆಗಳನ್ನು ಉತ್ತೇಜಿಸುದು ಇದರ ಮುಖ್ಯ ಉದ್ದೇಶ.
ಪೇಯ್ಡ್ ಪಾರ್ಕಿಂಗ್ ಶುಲ್ಕ
ಬೆಂಗಳೂರಿನ ಕೇಂದ್ರೀಯ ವ್ಯಾಪಾರ ಪ್ರದೇಶದ (CBD) ಕೆಲವು ರಸ್ತೆಗಳಲ್ಲಿ ಮಾತ್ರ ಪೇಯ್ಡ್ ಪಾರ್ಕಿಂಗ್ ಇದೆ. ಉದಾ – M.G. ರೋಡ್ ನಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂಪಾಯಿ, ದಿನಕ್ಕೆ 75 ರೂಪಾಯಿ, ಇನ್ನು ತಿಂಗಳಿಗೆ 1500 ರೂಪಾಯಿ, ಹಾಗೆ ನಾಲ್ಕು ಚಕ್ರಕ್ಕೆ 30 ರೂಪಾಯಿ, ದಿನಕ್ಕೆ 150 ರೂಪಾಯಿ, ಇನ್ನು ತಿಂಗಳಿಗೆ 3000 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಇದು ವಾಹನದ ಗಾತ್ರ ಮತ್ತು ಸ್ಥಳದ ಆಧಾರದಲ್ಲಿ ಬದಲಾವಣೆ ಆಗುತ್ತದೆ. ಇದನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸುತ್ತವೆ. 2025 ರಲ್ಲಿ BBMP 14 ರಸ್ತೆಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಶುಲ್ಕ ಸಂಗ್ರಹಕ್ಕೆ ಯೋಜನೆ ರೂಪಿಸಿದೆ, ವಾರ್ಷಿಕ 7 ಕೋಟಿ ಆದಾಯ ನಿರೀಕ್ಷೆ ಇದಿತ್ತು. ಆದರೆ ಇದು ಇನ್ನೂ ಸೀಮಿತವಾಗಿಯೇ ಇದೆ. ಹಲವು ರಸ್ತೆಗಳಲ್ಲಿ ಉಚಿತ ಪಾರ್ಕಿಂಗ್ ಮುಂದುವರಿದಿದೆ, ಆದರೆ ನೋ ಪಾರ್ಕಿಂಗ್ ಝೋನ್ ಗಳನ್ನು ಹೆಚ್ಚಿಸಲಾಗುತ್ತಿದೆ.
ಪೇಯ್ಡ್ ಪಾರ್ಕಿಂಗ್ ಯೋಜನೆಯ ಉದ್ದೇಶ
- ಸ್ಥಳೀಯ ಸರ್ಕಾರಗಳು ಆದಾಯ ಹೆಚ್ಚಿಸಲು ಪಾರ್ಕಿಂಗ್ ಶುಲ್ಕ ವಿಧಿಸುತ್ತವೆ.
- ಪಾರ್ಕಿಂಗ್ ಸ್ಥಳ ಹುಡುಕುವಲ್ಲಿ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡುತ್ತದೆ.
- ವಾಹನವನ್ನು ಎಳೆದೊಯ್ಯುವ ಸಾಧ್ಯತೆ ಇರುವುದಿಲ್ಲ.
- ಹೈ-ಟೆಕ್ ವ್ಯವಸ್ಥೆಗಳು ಪಾರ್ಕಿಂಗ್ ಸ್ಥಳಗಳನ್ನು ತೋರಿಸಿ, ಆನ್ಲೈನ್ ಮೂಲಕ ಬುಕ್ ಮಾಡಲು ಅವಕಾಶ ನೀಡುತ್ತವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

