Second Airport Bengalore: ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿರುವುದರಿಂದ ವಿಮಾನ ಸಂಚಾರದ ಬೇಡಿಕೆ ಭಾರೀ ಹೆಚ್ಚಳವಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನ ದಟ್ಟಣೆ ಉಂಟಾಗುತ್ತಿದೆ. ಜನ ದಟ್ಟಣೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಇದಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ 2 ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಹಾಗಾದರೆ ಬೆಂಗಳೂರಿನ ಯಾವ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡನೇ ವಿಮಾನ ನಿಲ್ದಾಣ ಏಕೆ ಬೇಕು?
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರ ಅಭಿಪ್ರಾಯದ ಪ್ರಕಾರ, ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ 2 ನೇ ಅತೀ ಹೆಚ್ಚು ಜನ ದಟ್ಟಣೆ ಇರುವ ವಿಮಾನ ನಿಲ್ದಾಣವಾಗಿದೆ. 2033 ರ ವೇಳೆಗೆ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನಿವಾರ್ಯವಾಗಲಿದೆ. ದೆಹಲಿ ಮತ್ತು ಮುಂಬೈ ನಂತೆ ಬೆಂಗಳೂರೂ ಎರಡು ವಿಮಾನ ನಿಲ್ದಾಣಗಳನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಈ ಯೋಜನೆಯಿಂದ ನಗರದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ಬರಲಿದೆ.
ಆಯ್ಕೆ ಮಾಡಿದ 3 ಸ್ಥಳಗಳು
* ಕನಕಪುರ ರಸ್ತೆಯಲ್ಲಿ ಚೂಡಹಳ್ಳಿ
* ಸೋಮನಹಳ್ಳಿ
* ನೆಲಮಂಗಲ-ಕುಣಿಗಲ್ ರಸ್ತೆಯ ಸಮೀಪದ ಪ್ರದೇಶ
ಈ ಮೂರು ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿ ಯಾವುದು ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯ ಕೂಡ ಸಲಹಾ ಸಂಸ್ಥೆ ನೀಡಲಿದೆ.
ವಿಮಾನ ನಿಲ್ದಾಣಕ್ಕೆ ಟೆಂಡರ್ ಪ್ರಕ್ರಿಯೆ
ಇದೀಗ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ತಾಂತ್ರಿಕ, ಆರ್ಥಿಕ ಮತ್ತು ಸ್ಥಳ ಸೂಕ್ತತೆಯ ವರದಿ ತಯಾರಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗೆ ಟೆಂಡರ್ ಕರೆದಿದೆ. ಆಯ್ಕೆಯಾದ ಸಂಸ್ಥೆಯು ಮೂರು ಸ್ಥಳಗಳ ಭೂಲಕ್ಷಣ, ಮಳೆ ಪ್ರಮಾಣ, ನೀರು, ವಿದ್ಯುತ್, ತ್ಯಾಜ್ಯ ನಿರ್ವಹಣೆ, ಜನಸಂಖ್ಯೆ, ಮಾಲಿನ್ಯ ಮತ್ತು ಶಬ್ದ ಮಟ್ಟವನ್ನು ಪರಿಶೀಲಿಸಬೇಕು. ನಂತರ ಯೋಜನೆಯ ವೆಚ್ಚ, ಅಗತ್ಯ ಭೂಮಿ, ರಕ್ಷಣಾ ಸಚಿವಾಲಯ ಮತ್ತು DGCA ಅನುಮತಿಗಳು, ಸಂಪರ್ಕ ಸಾಧ್ಯತೆಗಳು ಮತ್ತು ಆರ್ಥಿಕ ಲಾಭಗಳು ವರದಿಯಲ್ಲಿ ಇರಬೇಕು. ಟೆಂಡರ್ ಗೆ ಅರ್ಜಿ ಸಲ್ಲಿಸಲು ಜನವರಿ 12 2026 ಕೊನೆಯ ದಿನಾಂಕವಾಗಿದೆ. ವಾರ್ಷಿಕ 250 ಕೋಟಿ ಮೊತ್ತದ ಕೆಲಸಗಳ ಅನುಭವ ಹೊಂದಿರುವ ಸಂಸ್ಥೆಗಳು ಮಾತ್ರ ಭಾಗವಹಿಸಬೇಕು. ಆಯ್ಕೆಯಾದ ಸಂಸ್ಥೆಯು 5 ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಬೇಕು. ಸಲ್ಲಿಸಿದ ವರದಿಯ ಆಧಾರದ ಮೇಲೆ ಸ್ಥಳ ಅಂತಿಮಗೊಳಿಸಿ, ಭೂ ಸ್ವಾಧೀನ ಮತ್ತು ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಎರಡನೆಯ ವಿಮಾನ ನಿಲ್ದಾಣದಿಂದ ಆಗುವ ಪ್ರಯೋಜನ
* ಬೆಂಗಳೂರಿನಲ್ಲಿ ವಿಮಾನ ಸಂಚಾರ ಸೌಲಭ್ಯ ಹೆಚ್ಚಾಗಲಿದೆ
* ಕೈಗಾರಿಕೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಆಗಲಿದೆ
* ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಸುಗಮವಾಗಲಿದೆ.
* ರಿಯಲ್ ಎಸ್ಟೇಟ್ ಮತ್ತು ಪ್ರಾದೇಶಿಕ ಬೆಳವಣಿಗೆ
* ಪ್ರವಾಸೋದ್ಯಮ ಮತ್ತು ಹೂಡಿಕೆ ಆಕರ್ಷಣೆ
* ಉದ್ಯೋಗ ಸೃಷ್ಟಿ – ಈ ಯೋಜನೆಯಿಂದ ನೇರವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

