Water Crisis: ಮನೆಯಲ್ಲಿ ಬೈಕ್ ಮತ್ತು ಕಾರ್ ತೊಳೆದರೆ ಇನ್ಮುಂದೆ 5000 ರೂ ದಂಡ, ರಾಜ್ಯದಲ್ಲಿ ಹೊಸ ನಿಯಮ ಜಾರಿ

ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆಯುವಂತಿಲ್ಲ, 5000 ರೂ ದಂಡ

Bengaluru Water Crisis: ಪ್ರಸ್ತುತ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಬಳಕೆಗೆ ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎನ್ನಬಹುದು. ಇನ್ನು ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ನೀರಿನ ಅಗತ್ಯ ಹೆಚ್ಚಿರುತ್ತದೆ.

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ ಎನ್ನಬಹುದು. ನೀರನ್ನು ಮಿತವಾಗಿ ಬಳಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಆ ಜನತೆ ನೀರನ್ನು ಮಿತವಾಗಿ ಬಳಸಲು ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಬೇಕಾಬಿಟ್ಟಿ ನೀರನ್ನು ವ್ಯರ್ಥ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Bengaluru Water Crisis
Image Credit: News9live

ಬೆಂಗಳೂರಿನ ಜನತೆಗೆ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ
ನೀರನ್ನು ಪೋಲು ಮಾಡುವುದನ್ನು ತಡೆಯಲು ರಾಜ್ಯ ಸರಕಾರ ಬೆಂಗಳೂರಿನ ಜನತೆಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ವಾಹನವನ್ನು ತೊಳೆಯುವುದು ಸೇರಿದಂತೆ ಅನಗತ್ಯವಾಗಿ ನೀರನ್ನು ಬಳಕೆ ಮಾಡುವವರಿಗೆ 5,000 ರೂ ದಂಡ ವಿಧಿಸುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಕುರಿತು ಬೆಂಗಳೂರು ಜಲ ಮಂಡಳಿ ಆದೇಶ ಹೊರಡಿಸಿದ್ದು, ಬೆಂಗಳೂರು ನಗರದ ಖಾಯಂ ನಿವಾಸಿಗಳು ಹಾಗೂ ಬಂದು ಹೋಗುವವರು ಸೇರಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರು ಪೂರೈಕೆ ಅತ್ಯಗತ್ಯ. ಸದ್ಯ ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದೆ.

Rs 5000 Fine For Washing Cars In Drinking Water
Image Credit: Aninews

ಈ ತಪ್ಪು ಮಾಡಿದರೆ 5000 ದಂಡ
ಬೆಂಗಳೂರು ನಗರದಲ್ಲಿ ನೀರು ಪೋಲಾಗುವುದನ್ನು ತಡೆಯುವುದು ಅಗತ್ಯ ಎಂಬುದನ್ನು ಮನಗಂಡು ಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರದ ಜನರು ಬೇಕಾಬಿಟ್ಟಿ ನೀರು ಪೋಲು ಮಾಡಬಾರದು. ವಾಹನಗಳ ಸ್ವಚ್ಛತೆ, ತೋಟಗಾರಿಕೆ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಕಾರಂಜಿಗಳಿಗೆ ನೀರು ಬಳಸದಂತೆ ಖಡಕ್ ಸೂಚನೆ ನೀಡಿದೆ.

Join Nadunudi News WhatsApp Group

ಈ ನಿಯಮವನ್ನು ಉಲ್ಲಂಘಿಸಿದಲ್ಲಿ, ಜಲಮಂಡಳಿ ಕಾಯಿದೆ 1964 ರ ಸೆಕ್ಷನ್ 109 ರ ಪ್ರಕಾರ ನಿಯಮ ಉಲ್ಲಂಘಿಸುವವರ ವಿರುದ್ಧ ರೂ.5000 ದಂಡವನ್ನು ವಿಧಿಸಲಾಗುತ್ತದೆ. ಉಲ್ಲಂಘನೆ ಪುನರಾವರ್ತನೆಯಾದಲ್ಲಿ ರೂ. 5000 ದಂಡದ ಮೊತ್ತವನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ ರೂ. ದಿನಕ್ಕೆ ರೂ.500 ದಂಡವನ್ನು ವಿಧಿಸಲಾಗುತ್ತದೆ. ಬೆಂಗಳೂರಿನ ಜನತೆ ಅನಗತ್ಯವಾಗಿ ನೀರನ್ನು ಬಳಸುವ ಮುನ್ನ ಎಚ್ಚರ ವಹಿಸುವುದು ಉತ್ತಮ.

Join Nadunudi News WhatsApp Group