Benling: ಬಂತು ಲೈಸೆನ್ಸ್ ಬೇಕಿರದ ಸ್ಕೂಟರ್, 75 Km ಮೈಲೇಜ್, ಬುಕ್ ಮಾಡಲು ಮುಗಿಬಿದ್ದ ಜನರು.
ಲೈಸೆನ್ಸ್ ಅಗತ್ಯವಿರದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳಲು ಮುಗಿಬಿದ್ದ ಜನರು.
Benling Falcon Electric Scooter: ಇದೀಗ ಮಾರುಕಟ್ಟೆಯಲ್ಲಿ ಬೆನ್ಲಿಂಗ್ (Benling) ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಇರುವ ಇನ್ನಿತರ ಎಲೆಕ್ಟ್ರಿಕ್ ವಾಹನಗಳಿಗೆ ಪೈಪೋಟಿ ನೀಡಲಿದೆ.
ಕಂಪನಿಯು ವಿವಿಧ ಪ್ರೀಮಿಯಂ ವೈಶಿಷ್ಟ್ಯಗಳನ್ನುಅಳವಡಿಸಿ ಗ್ರಾಹಕರಿಗೆ ಅನುಕೂಲವಾಗಲು ಬಜೆಟ್ ವಿಭಾಗದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ (Benling Falcon Electric Scooter)
ಇದೀಗ ಬೆನ್ಲಿಂಗ್ ಕಂಪನಿಯು ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿವಿಧ ರೀತಿಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಅಳವಡಿಸಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ.
ಈ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಮೋಟಾರ್ ಅನ್ನು ಕಂಪನಿಯು BLDC ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ವಾಹನ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದ್ದು ಗ್ರಾಹಕರಿಗೆ ಈ ಸ್ಕೂಟರ್ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ಈ ಸ್ಕೂಟರ್ ಓಡಿಸಲು ಲೈಸೆನ್ಸ್ ಅಗತ್ಯ ಇಲ್ಲ
ಈ ಸ್ಕೂಟರ್ ನ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಲಾಗಿದೆ. ಕಾಂಬಿ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 69,540 ರೂ. ಆಗಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 25 ಕಿಲೋ ಮೀಟರ್ ಗರಿಷ್ಠ ವ್ಯಾಪ್ತಿಯನ್ನು ಹೊಂದಿರುವ ಕಾರಣ ಈ ಸ್ಕೂಟರ್ ಓಡಿಸಲು ಯಾವುದೇ ಲೈಸೆನ್ಸ್ ಅಗತ್ಯ ಇರುವುದಿಲ್ಲ.
ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಡಿಜಿಟಲ್ ಟ್ರಿಪ್ ಮೀಟರ್, ರಿಮೋಟ್ ಸ್ಟಾರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಸ್ಪೀಡೋಮೀಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಆಂಟಿ ಥೆಫ್ಟ್ ಅಲಾರ್ಮ್, ಎಲ್‌ಇಡಿ ಲೈಟ್‌ಗಳು, ಸ್ಮಾರ್ಟ್ ಬ್ರೇಕ್‌ಡೌನ್ ನಿರ್ವಹಣೆ ಸ್ಥಿತಿ, ಸ್ಮಾರ್ಟ್ ಕಂಟ್ರೋಲ್, ಪಾಸ್ ಸ್ವಿಚ್ ಮತ್ತು ಮಲ್ಟಿ ರೈಡಿಂಗ್ ಮೋಡ್ ನಂತಹ ವಿವಿಧ ವೈಶಿಷ್ಟ್ಯಗಳಿವೆ.
ಒಂದೇ ಚಾರ್ಜ್ ನಲ್ಲಿ 75 ಕಿಲೋಮೀಟರ್ ಮೈಲೇಜ್ ನೀಡುವ ಸ್ಕೂಟರ್
ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 60V, 30Ah ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು 250W ಶಕ್ತಿಯೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ನಲ್ಲಿ ಸಾಮಾನ್ಯ ಚಾರ್ಜರ್ ನ ಮೂಲಕ ಕೇವಲ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. ಈ ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 70 ರಿಂದ 75 ಕಿಲೋ ಮೀಟರ್ ಮೈಲೇಜ್ ನೀಡಲಿದೆ.