Home Loan: ಗೃಹಸಾಲ ಪಡೆಯಲು ಯಾವ ಬ್ಯಾಂಕ್ ಸೂಕ್ತ, ಈ 5 ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ.
ಈ ಐದು ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ಪಡೆದುಕೊಳ್ಳಬಹುದು.
Best 5 bank For Home Loan: ಬ್ಯಾಂಕ್ ಗಳು ಗ್ರಾಹಕರಿಗೆ ಗೃಹ ಸಾಲವನ್ನು ನೀಡುತ್ತದೆ. ಈ ಗೃಹ ಸಾಲದ ಮೂಲಕ ಸಾಕಷ್ಟು ಜನರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಳ್ಳಬಹುದು. ಇನ್ನು ಧೀರ್ಘಾವದಿಯ ಗೃಹ ಸಾಲದ (Home Loan) ಮರುಪಾವತಿಯು ಸಾಲಗಾರರ ಹಣಕಾಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಗೃಹ ಸಾಲವನ್ನು ಪಡೆಯುವಾಗ ದೀರ್ಘವದಿಯ ಸಾಲವನ್ನು ಪಡೆಯಬಾರದು. ಬದಲಾಗಿ ಕಡಿಮೆ ವರ್ಷದ ಅವಧಿಯ ಆಯ್ಕೆಯನ್ನು ಆರಿಸಬೇಕು. ಕಡಿಮೆ ಅವಧಿಯ ಸಾಲವನ್ನು ಪಡೆದರೆ ಬಡ್ಡಿದರ ಕಡಿಮೆ ಆಗುತ್ತದೆ. ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರವನ್ನು ತಿಳಿದುಕೊಳ್ಳಬೇಕು.
ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ಇನ್ನು ಈ ಐದು ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡಲಿದೆ.
ಈ ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ
*ಹೆಚ್ ಡಿಎಫ್ ಸಿ ಬ್ಯಾಂಕ್
ದೇಶದ ಪ್ರಸ್ತಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಹೆಚ್ ಡಿಎಫ್ ಸಿ ಗ್ರಹಕ್ರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಹೆಚ್ ಡಿಎಫ್ ಸಿ ಬ್ಯಾಂಕ್ ನ ಬಡ್ಡಿದರವು 8.45 % ದಿಂದ 9.85 % ವರೆಗೆ ಪ್ರಾರಂಭವಾಗಲಿದೆ.
*ಇಂಡಸ್ ಇಂಡ್ ಬ್ಯಾಂಕ್
ಇಂಡಸ್ ಇಂಡ್ ಬ್ಯಾಂಕ್ ತನ್ನ ಗ್ರಾಹಕರಿಗೆ 8.5% ರಿಂದ 9.75% ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ.
*ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ 8.5% ರಿಂದ 9.9% ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಗೃಹ ಸಾಲದ ಬಡ್ಡಿದರವು 8.6 % ದಿಂದ 9.45 % ರವರೆಗೆ ಪ್ರಾರಂಭವಾಗಲಿದೆ.
*ಬ್ಯಾಂಕ್ ಆಫ್ ಮಹಾರಾಷ್ಟ್ರ
ಗೃಹ ಸಾಲದ ಬಡ್ಡಿದರವು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 8.6 % ದಿಂದ 10.3% ರವರೆಗೆ ತಲುಪಿದೆ.