Business Idea: 20 ಸಾವಿರದಲ್ಲಿ ಈ ಬಿಸಿನೆಸ್ ಆರಂಭ ಮಾಡಿದರೆ ಕೆಲವೇ ತಿಂಗಳಲ್ಲಿ ಆಗಬಹುದು ಲಕ್ಷಾಧಿಪತಿ, ಬೆಸ್ಟ್ ಬಿಸಿನೆಸ್ ಐಡಿಯಾ.
ಕಡಿಮೆ ಬಂಡವಾಳದಲ್ಲಿ ಈ ಬಿಸಿನೆಸ್ ಆರಂಭ ಮಾಡಿದರೆ ಬರಲಿದೆ ಉತ್ತಮ ಲಾಭ.
Best Business Ideas: ಹಣ ಸಂಪಾದನೆ ಮಾಡುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ, ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಹಣವನ್ನ ಸಂಪಾದನೆ ಮಾಡಬೇಕು ಮತ್ತು ಜೀವನದಲ್ಲಿ ಯಶಸ್ಸನ್ನ ಸಾಧಿಸಬೇಕು ಅನ್ನುವ ಬಯಕೆ ಎಲ್ಲಾ ಮಾನವನಲ್ಲಿ ಇದೆ ಎಂದು ಹೇಳಬಹುದು. ಇನ್ನು ಹಣವನ್ನ ಸಂಪಾದನೆ ಮಾಡುವ ಉದ್ದೇಶದಿಂದ ಸಾಕಷ್ಟು ಜನರು ವ್ಯವಹಾರಗಳನ್ನ (Business) ಮಾಡಲು ಆರಂಭ ಮಾಡುತ್ತಾರೆ.
ಕೆಲವರು ಮಾಡುವ ವ್ಯವಹಾರ ಅವರ ಕೈ ಹಿಡಿದರೆ ಇನ್ನೂ ಕೆಲವರು ಮಾಡುವ ವ್ಯವಹಾರ ಅವರನ್ನ ಕೈ ಹಿಡಿಯಲ್ಲ ಎಂದು ಹೇಳಬಹುದು. ಇನ್ನು ಸ್ವಂತ ವ್ಯವಹಾರ ಆರಂಭ ಮಾಡುವ ಮುನ್ನ ಕೆಲವು ಕೆಲವು ಸೂಕ್ತ ಉಪಾಯವನ್ನ ಮಾಡಿ ನಾವು ಮಾಡುವ ವ್ಯವಹಾರದ ಲಾಭ ನಷ್ಟ ತಿಳಿದುಕೊಂಡು ವ್ಯವಹಾರ ಮಾಡಿದರೆ ಖಂಡಿತ ಯಶಸ್ಸನ್ನ ಸಾಧಿಸಬಹುದು.
ಸ್ವಂತ ವ್ಯವಹಾರ ಮಾಡಲು ಬಂಡವಾಳ ಅವಶ್ಯಕ
ಹೌದು ಯಾವುದೇ ವ್ಯವಹಾರ ಆರಂಭ ಮಾಡಬೇಕು ಅಂದರೆ ಬಂಡವಾಳ ಬೇಕೇ ಬೇಕು ಎಂದು ಹೇಳಬಹುದು. ಹೌದು ಬಂಡವಾಳ ಇಲ್ಲದೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಿಲ್ಲ. ಕೆಲವು ವ್ಯವಹಾರ ಮಾಡಲು ಕಡಿಮೆ ಬಂಡವಾಳ ಬೇಕಾದರೆ ಇನ್ನೂ ಕೆಲವು ವ್ಯವಹಾರ ಆರಂಭ ಮಾಡಲು ಸ್ವಲ್ಪ ದೊಡ್ಡ ಮಟ್ಟದ ಬಂಡವಾಳ ಬೇಕಾಗುತ್ತದೆ ಎಂದು ಹೇಳಬಹುದು. ಇನ್ನು ವ್ಯವಹಾರ ಮಾಡುವ ಮುನ್ನ ನಾವು ತಿಳಿದುಕೊಳ್ಳಬೇಕಾದ ವಿಷಯ ಏನು ಅಂದರೆ, ವ್ಯವಹಾರ ನಾವು ಮಾಡುವ ಬಂಡವಾಳದ ಮೇಲೆ ಸೀಮಿತ ಆಗಿರುವುದಿಲ್ಲ ಮತ್ತು ಯಾವ ವ್ಯವಹಾರ ಮಾಡುತ್ತೇವೆ ಅನ್ನುವುದರ ಮೇಲೆ ಸೀಮಿತವಾಗಿರುತ್ತದೆ.
20 ಸಾವಿರದಲ್ಲಿ ಮಾಡಬಹುದು ಈ ಬಿಸಿನೆಸ್
*ಕೈಯಿಂದ ಮಾಡಿದ ಮೇಣದ ಬತ್ತಿ ವ್ಯವಹಾರ
ಸುಮಾರು 20,000 ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ವ್ಯವಹಾರ ಆರಂಭ ಮಾಡಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು. ಮೇಣದ ಬತ್ತಿಯನ್ನು ವಿವಿಧ ಧಾರ್ಮಿಕ ಆಚರಣೆ ಮತ್ತು ಹಲವು ಕೆಲಸಗಳಿಗೆ ಬಳಸುವ ಕಾರಣ ಈ ವ್ಯವಹಾರ ಸೀಸನ್ ಸಮಯದಲ್ಲಿ ಬಹಳ ಉತ್ತಮ ಲಾಭ ತಂದುಕೊಡುತ್ತದೆ.
*ಉಪ್ಪಿನಕಾಯಿ ವ್ಯಾಪಾರ
ಉಪ್ಪಿನಕಾಯಿ ವ್ಯವಹಾರವನ್ನ ಕಡಿಮೆ ಬಂಡವಾಳದ ಮೂಲಕ ಆರಂಭ ಮಾಡಬಹುದು. ಭಾರತದಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯ ಜನರು ಉಪ್ಪಿನಕಾಯಿ ತಿನ್ನುತ್ತಾರೆ ಮತ್ತು ಎಲ್ಲಾ ಮದುವೆ ಮತ್ತು ಇತರೆ ಸಮಾರಂಭಗಳಿಗೆ ಉಪ್ಪಿನಕಾಯಿ ಬೇಕೇ ಬೇಕು ಎಂದು ಹೇಳಬಹುದು. ವರ್ಷವಿಡೀ ಇದರ ಬೇಡಿಕೆ ಕಡಿಮೆ ಆಗದ ಕಾರಣ ಈ ಉಪ್ಪಿನಕಾಯಿ ವ್ಯವಹಾರವನ್ನ ಕಡಿಮೆ ಖರ್ಚಿನಲ್ಲಿ ಆರಂಭ ಮಾಡಿದರೆ ಉತ್ತಮ ಲಾಭ ಗಳಿಸಬಹುದು.
*ವಿಷಯಗಳ ಬರವಣಿಗೆ
ವಿಷಯ ಬರವಣಿಗೆ ವ್ಯವಹಾರ ಒಂದು ಉತ್ತಮ ಆಯ್ಕೆ ಆಗಿದೆ ಎಂದು ಹೇಳಬಹುದು. ಬರವಣಿಗೆ ಒಂದು ಕಲೆ ಆಗಿದ್ದು ಇದರ ಮೂಲಕ ಹಣವನ್ನ ಗಳಿಸಬಹುದು. ಯಾವುದೇ ದೊಡ್ಡ ಬಂಡವಾಳ ಇಲ್ಲದೆ ಈ ವ್ಯವಹಾರವನ್ನ ಆರಂಭ ಮಾಡಬಹುದು. ಕಂಟೆಂಟ್ ರೈಟರ್ ಕೆಲಸವನ್ನ ಆರಂಭ ಮಾಡಿದರೆ ಆರಂಭದಲ್ಲಿ ಯಾವುದೇ ಲಾಭ ಬರದೇ ಇದ್ದರೂ ಕೂಡ ಮುಂದೊಂದು ದಿನ ಈ ವ್ಯವಹಾರ ನಿಮ್ಮ ಕೈ ಹಿಡಿಯುವುದರಲ್ಲಿ ಎರಡು ಮಾತಿಲ್ಲ.
*ಮಗುವಿನ ಆರೈಕೆ ವ್ಯವಹಾರ
ತಂದೆ ಮತ್ತು ತಾಯಿಗೆ ಕೆಲಸದ ಕಾರಣ ಮಗುವನ್ನ ನೋಡಿಕೊಳ್ಳಲು ಸದ್ಯ ಆಗುವುದಿಲ್ಲ ಮತ್ತು ಅಂತಹ ಸಮಯದಲ್ಲಿ ಮಗುವನ್ನ ಆರೈಕೆ ಮಾಡಲು ಜನರನ್ನ ಹುಡುಕುತ್ತಾರೆ. ಮಗುವಿನ ಆರೈಕೆ ಮಾಡುವ ವ್ಯವಹಾರವನ್ನ ಮಾಡಿದರೆ ನಿಮಗೆ ಉತ್ತಮವಾದ ಲಾಭ ಬರುತ್ತದೆ ಎಂದು ಹೇಳಬಹುದು. ಯಾವುದೇ ಹೂಡಿಕೆ ಅಥವಾ ಬಂಡವಾಳದ ಅಗತ್ಯ ಇಲ್ಲದೆ ಈ ಕೆಲಸವನ್ನ ಆರಂಭ ಮಾಡಬಹುದು.
*ಮೊಬೈಲ್ ರಿಪೇರಿ
ನಿಮಗೆ ರಿಪೇರಿ ಮಾಡುವ ಕೌಶಲ್ಯ ಜ್ಞಾನ ಇದ್ದರೆ ನೀವು ಮೊಬೈಲ್ ರಿಪೇರಿ ಮಾಡುವ ವ್ಯವಹಾರವನ್ನ ಆರಂಭ ಮಾಡಬಹುದು. 20 ಸಾವಿರಕ್ಕೂ ಕಡಿಮೆ ವೆಚ್ಚದಲ್ಲಿ ಈ ವ್ಯವಹಾರವನ್ನ ಆರಂಭ ಮಾಡಿ ದೊಡ್ಡ ಮಟ್ಟದ ಲಾಭವನ್ನ ಗಳಿಸಿಕೊಳ್ಳಬಹುದು. ದೇಶದಲ್ಲಿ ಬಹುತೇಕ ಎಲ್ಲಾ ಜನರು ಸ್ಮಾರ್ಟ್ ಫೋನ್ ಬಳಸುವ ಕಾರಣ ಈ ವ್ಯವಹಾರ ಆರಂಭ ಮಾಡಿದರೆ ತುಂಬಾ ದೊಡ್ಡ ಮಟ್ಟದ ಲಾಭವನ್ನ ಗಳಿಸಿಕೊಳ್ಳಬಹುದು.