Vehicle Insurance: ಕಾರ್ ಅಥವಾ ಬೈಕ್ ಇನ್ಶೂರೆನ್ಸ್ ಮಾಡಿಸುವಾಗ ಎಚ್ಚರ, ಈ ತಪ್ಪು ಮಾಡಿದರೆ ಯಾವುದೇ ಹಣ ಸಿಗಲ್ಲ.

ಕಾರ್ ವಿಮೆಯ ಪ್ರಕಾರ ಹಾಗೂ ಅದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

Best Car Insurance Policy: ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿಭಿನ್ನ ಮಾದರಿಯ Bike ಹಾಗೂ Car ಗಳು ಪರಿಚಯವಾಗುತ್ತಿದೆ. ಹೊಸ ಮಾದರಿಯ ವಾಹನಗಳು ಮಾರುಕಟ್ಟೆಗೆ ಬಂದ ತಕ್ಷಣ ಗ್ರಾಹಕರು ಖರೀದಿಸಲು ಬಯಸುತ್ತಾರೆ.

ಸಾಮಾನ್ಯವಾಗಿ ವಾಹನ ಖರೀದಿಯ ಸಮಯದಲ್ಲಿ ವಾಹನಗಳಿಗೆ ವಿಮಾ ಪಾಲಿಸಿಯನ್ನು ಕೂಡ ಮಾಡಿಸಿಕೊಳ್ಳುತ್ತಾರೆ. ವಾಹನಗಳು ಯಾವುದೇ ಅಪಘಾತದಲ್ಲಿ ಹಾಳಾದ ಸಂಧರ್ಭದಲ್ಲಿ ವಾಹನದ ವಿಮಾ ಪಾಲಿಸಿಯೂ ಸಹಾಯವಾಗುತ್ತದೆ.

Best Car Insurance Policy
Image Credit: Savedaughters

ಕಾರ್ ಗಳಿಗೆ ವಿಮಾ ಪಾಲಿಸಿ
ಯಾವುದೇ ರೀತಿಯ ರಸ್ತೆ ಅಪಘಾತ, ಬೆಂಕಿ ಅವಘಡ ಅಥವಾ ಇನ್ನಾವುದೇ ರೀತಿಯಲ್ಲಿ ಖರೀದಿಸಿದ ವಾಹನವು ಹಾಳಾದ ಸಂಧರ್ಭದಲ್ಲಿ ವಾಹನದ ವಿಮಾ ಪಾಲಿಸಿ ಅಗತ್ಯವಾಗುತ್ತದೆ. ವಾಹನಗಳು ಹಾಳಾದ ಸಮಯದಲ್ಲಿ ವಿಮಾ ಪಾಲಿಸಿಯ ಮೂಲಕ ಹಣವನ್ನು ಪಡೆಯಬಹುದು.

ಇನ್ನು ಕಾರ್ ಖರೀದಿಸಿದ ತಕ್ಷಣ ವಿಮೆಯನ್ನು ಮಾಡುವುದು ಉತ್ತಮ. ವಾಹನ ಖರೀದಿಗೆ ವಿಮೆಯ ವಿವಿಧ ಆಯ್ಕೆಗಳು ಲಭ್ಯವಿರುತ್ತದೆ. ನೀವು ಹೊಸ ಕಾರ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಕಾರ್ ವಿಮೆಯ ಪ್ರಕಾರ ಹಾಗೂ ಅದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

Third party car insurance policy
Image Credit: Telegraphindia

ಕಾರ್ ವಿಮಾ ಪಾಲಿಸಿ ಮಾಡುವ ಮುನ್ನ ಇದರ ಬಗ್ಗೆ ತಿಳಿಯಿರಿ
*Third Party Insurance Policy
ವಿಮಾ ಪಾಲಿಸಿಯ ವಿವಿಧ ಆಯ್ಕೆಯಲ್ಲಿ Third Party Insurance Policy ಕೂಡ ಒಂದಾಗಿದೆ. ಮೂರನೇ ವ್ಯಕ್ತಿಯ ವಿಮಾ ಪಾಲಿಸಿ ಅಡಿಯಲ್ಲಿ, ಮೂರನೇ ವ್ಯಕ್ತಿಯ ಅಂದರೆ ಮೂರನೇ ವ್ಯಕ್ತಿಯ ವ್ಯಕ್ತಿ ಅಥವಾ ಆಸ್ತಿಯನ್ನು ಒಳಗೊಂಡ ಅಪಘಾತದಿಂದ ಉಂಟಾಗುವ ಹೊಣೆಗಾರಿಕೆಯ ವಿರುದ್ಧ ರಕ್ಷಣೆ ಒದಗಿಸಲಾಗಿದೆ. ಕಾರನ್ನು ಓಡಿಸಲು ಈ ವಿಮೆಯನ್ನು ಹೊಂದಿರುವುದು ಅವಶ್ಯಕ. ಈ ವಿಮಾ ಪಾಲಿಸಿ ಇಲ್ಲದಿದ್ದರೆ ಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

*Comprehensive Insurance Policy
ಬೆಂಕಿ, ಕಳ್ಳತನ, ವಿಲ್ಫಾಟ್, ನೈಸರ್ಗಿಕ ವಿಕೋಪಗಳಂತಹ ಅನೇಕ ಕಾರಣಗಳಿಂದ ನಿಮ್ಮ ವಾಹನವು ನಾಶವಾದರೆ Comprehensive Insurance Policy ನಿಮಗೆ ಸಹಾಯವಾಗುತ್ತದೆ. ಸಮಗ್ರ ವಿಮೆಯನ್ನು ಪಡೆಯುವ ಮೂಲಕ ಸಂಪೂರ್ಣ ಕವರ್ ಅನ್ನು ಕೇವಲ ಒಂದು ಪ್ರೀಮಿಯಂ ಮೂಲಕ ಪಡೆಯಬಹುದು.

Best Car Insurance Policy
Image Credit: Rateweb

*Own Damage Insurance Policy
ನೀವು Own Damage Insurance Policy ಮಾಡಿದರೆ ಅಪಘಾತದ ಸಮಯದಲ್ಲಿ ಎದುರಿನ ವ್ಯಕ್ತಿಗೆ ಉಂಟಾದ ನಷ್ಟವನ್ನು ಈ ವಿಮೆ ಮೂಲಕ ಪಾವತಿಸಬಹುದು. ಇಅದ್ರ ವಾಹನದ ಸುರಕ್ಷತೆಗಾಗಿ ಮತ್ತೊಂದು ಪಾಲಿಸಿ ಆಯ್ಕೆಯನ್ನು ಮಾಡಬಹುದು. ಸ್ವಂತ ಹಾನಿ ವಿಮಾ ಪಾಲಿಸಿಯಿಂದ ನಿಮ್ಮ ವಾಹನಕ್ಕೆ ಹಾನಿಯಾದರೆ ನೀವು ಪರಿಹಾರವನ್ನು ಪಡೆಯಬಹುದು.

*Motor Insurance Add-On Covers
ನೀವು ಈ ಮೇಲಿನ ಯಾವುದೇ ವಿಮೆಯನ್ನು ಆಯ್ಕೆ ಮಾಡಿದರು ಅದರ ಜೊತೆ ಮೋಟಾರು ವಿಮೆ ಆಡ್-ಆನ್ ಕವರ್‌ ಗಳನ್ನೂ ಸಹ ಪಡೆಯಬಹುದು. ಈ ವಿಮಾ ಪಾಲಿಸಿಯೂ ಶೂನ್ಯ-ಸವಕಳಿ ಕವರ್, ಇನ್‌ ವಾಯ್ಸ್‌, ಎಂಜಿನ್ ರಕ್ಷಣೆಯ ಕವರ್, ಉಪಭೋಗ್ಯ ಕವರ್ ಮತ್ತು ರಸ್ತೆಬದಿಯ ಸಹಾಯ ಕವರ್ ಇತ್ಯಾದಿ ಸೌಲಭ್ಯವನ್ನು ಒಳಗೊಂಡಿದೆ.

Join Nadunudi News WhatsApp Group