Ads By Google

Best Car: ಇಲ್ಲಿದೆ ದೇಶದ 3 ಅತೀ ಅಗ್ಗದ ಕಾರುಗಳು, ಬೆಲೆ ಕಡಿಮೆ ಮತ್ತು ಅತ್ಯಧಿಕ ಮೈಲೇಜ್.

Top 3 best Cars In India

Image Credit: rushlane

Ads By Google

Top 3 best Cars In India: ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಹೊಸ ಮಾದರಿಯ ವಿಭಿನ್ನ ಶೈಲಿಯ ಕಾರ್ ಗಳು ಲಗ್ಗೆ ಇಡುತ್ತವೆ. ಇನ್ನು ಸಾಮಾನ್ಯವಾಗಿ ಕಾರ್ ಖರೀದಿಸುವ ಆಸೆಯನ್ನು ಎಲ್ಲರು ಹೊಂದಿರುತ್ತಾರೆ. ಇತ್ತೀಚಿಗೆ ಸಾಕಷ್ಟು ದುಬಾರಿ ಬೆಲೆಯ ಕಾರ್ ಗಳು ಮಾರುಕಟ್ಟೆಗೆ ಬಂದಿವೆ.

ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರೂ ಅತೀ ಅಗ್ಗದ ಕಾರುಗಳು
ಇನ್ನು ವಾಹನಗಳನ್ನು ಖರೀದಿಸುವಾಗ ಗ್ರಾಹಕರು ಶಕ್ತಿಶಾಲಿಯಾಗಿರುವ ಕಾರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಕಾರ್ ನ ಎಂಜಿನ್ ನ ಸಾಮರ್ಥ್ಯದ ಬಗ್ಗೆ ಗ್ರಾಹಕರು ಹೆಚ್ಚಿನ ಗಮನ ಹರಿಸುತ್ತಾರೆ.

Image Credit: Carwale

ಕೆಲವು ಸಣ್ಣ ಕಾರುಗಳು ಸಹ ಅತ್ಯಂತ ಬಲಿಷ್ಠ ಎಂಜಿನ್ ಗಳನ್ನೂ ಹೊಂದಿದ್ದು ಹೆಚ್ಚಿನ ಮೈಲೇಜ್ ನೀಡುತ್ತದೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

*ಮಾರುತಿ ಆಲ್ಟೋ K10 ಕಾರ್
ಮಾರುತಿ ಆಲ್ಟೋ K10 ಕಾರ್ ದೇಶಿಯ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಗೆ ಖರೀದಿಗೆ ಲಭ್ಯವಿದೆ. ಈ ಕಾರು ಸಣ್ಣದಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು ಸುಮಾರು 4 ಮೀಟರ್ ಉದ್ದವನ್ನು ಹೊಂದಿದೆ. ಸಣ್ಣ ಗಾತ್ರವನ್ನು ಹೊಂದಿರುವ ಈ ಮಾರುತಿ ಆಲ್ಟೋ K10 ಕಾರ್ ನ್ನು ತಿರುವುಗಳಲ್ಲಿ ಬಹಳ ಸುಲಭವಾಗಿ ಓಡಿಸಬಹುದಾಗಿದೆ. ಈ ಕಾರ್ 850 ಕೆಜಿ ತೂಕವನ್ನು ಹೊಂದಿದೆ.

Image Credit: Rushlane

* ಟಾಟಾ ಟಿಯಾಗೋ ಕಾರ್
ಇನ್ನು ಸಣ್ಣ ಕಾರುಗಳಲ್ಲಿ ಟಾಟಾ ಟಿಯಾಗೋ ಕಾರ್ ಕೂಡ ಒಂದಾಗಿದೆ. ಈ ಕಾರ್ ಮಾರುತಿ ಆಲ್ಟೋ ಕಾರ್ ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದೆ. ಈ ಕಾರ್ ಬಲಿಷ್ಠ ಎಂಜಿನ್ ಅನ್ನು ಹೊಂದಿದ್ದು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಒದಗಿಸುತ್ತದೆ. ಈ ಕಾರ್ 86PS ನ ಗರಿಷ್ಟ ಶಕ್ತಿಯನ್ನು ಹೊಂದಿದ್ದು 113Nm ನ ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Image Credit: Rushlane

*ಟಾಟಾ ನೆಕ್ಸಾನ್ ಕಾರ್
ಟಾಟಾ ನೆಕ್ಸಾನ್ ಕಾರ್ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಎರಡು ಆಯ್ಕೆಯನ್ನು ನೀಡಲಿದೆ. ಈ ಕಾರ್ ನಲ್ಲಿ ಎರಡು ಎಂಜಿನ್ ಅಳವಡಿಸಲಾಗಿದ್ದು, 115PS ನ ಗರಿಷ್ಟ ಶಕ್ತಿಯನ್ನು ಮತ್ತು 170Nm ನಿಂದ 260Nm ನ ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ನಲ್ಲಿ ವಿವಿಧ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿಬಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in