Best Budget Cars Under 10 Lakhs: ದೇಶದಲ್ಲಿ ಬಹಳಷ್ಟು ಜನರು ಹೊಸ ವರ್ಷಕ್ಕೆ ಅನೇಕ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಕಾರ್ ಖರೀದಿ ಮಾಡುವುದು, ಮನೆ ಖರೀದಿ ಮಾಡುದು, ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡುವುದು, ಹೀಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹಾಗೆ ಕಂಪನಿಗಳು ಸಹ ಜನರಿಗೆ ಹೊಸ ವರ್ಷಕ್ಕೆ ಅನೇಕ ಆಫರ್ ಗಳನ್ನೂ ಬಿಡುಗಡೆ ಮಾಡುತ್ತದೆ. ಜೀವನದಲ್ಲಿ ಒಮ್ಮೆ ಆದರೂ ಕಾರ್ ಖರೀದಿ ಮಾಡಬೇಕು ಅನ್ನುದು ಎಲ್ಲರ ಕನಸಾಗಿರುತ್ತದೆ. ಇದೀಗ 2026 ರಲ್ಲಿ ಬಜೆಟ್ ಬೆಲೆಗೆ ಒಂದೊಳ್ಳೆ ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಈ ಮಾಹಿತಿ ಉಪಯುಕ್ತವಾಗಲಿದೆ. ನಾವು ನಿಮಗೆ 10 ಲಕ್ಷದೊಳಗೆ ಖರೀದಿ ಮಾಡಬಹುದಾದಂತ 7 ಕಾರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.
10 ಲಕ್ಷದೊಳಗೆ ಲಭ್ಯವಿರುವ 7 ಕಾರ್ ಗಳ ಬಗ್ಗೆ ಮಾಹಿತಿ
Maruti Suzuki Swift
Maruti Suzuki Swift ಭಾರತದಲ್ಲಿ ಯುವಜನರ ನೆಚ್ಚಿನ ಕಾರ್ ಆಗಿದೆ. Swift ಒಂದು ಲೀಟರ್ ಗೆ 24.8 ರಿಂದ 25.75 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹಾಗೆ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS with EBD, ESP, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳನ್ನ ಅಳವಡಿಸಲಾಗಿದೆ. ಒಳಭಾಗದಲ್ಲಿ 9 ಇಂಚು Touchscreen infotainment ಹಾಗೆ ಇನ್ನಿತರ ವೈಶಿಷ್ಟಗಳನ್ನ ಅಳವಡಿಸಲಾಗಿದೆ. Maruti Suzuki Swift ಬೆಲೆ ಎಕ್ಸ್ ಶೋರೂಮ್ ಪ್ರಕಾರ 6.49 ಲಕ್ಷದಿಂದ 9.65 ಲಕ್ಷ ಆಗಿದೆ. ಇದರಲ್ಲಿ LXi, VXi, ZXi ಮತ್ತು ZXi+ ವೆರಿಯಂಟ್ ಗಳು ಲಭ್ಯವಾಗಿದೆ.
Tata Punch
Tata Punch ಭಾರತದ ಜನಪ್ರಿಯ ಮೈಕ್ರೋ SUV ಆಗಿದೆ. ಈ SUV ಒಂದು ಲೀಟರ್ ಗೆ 20.09 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ ಗಳು, ಹೈಯರ್ ವೇರಿಯಂಟ್ ಗಳಲ್ಲಿ 6 ಏರ್ ಬ್ಯಾಗ್ ಗಳನ್ನೂ ಅಳವಡಿಸಲಾಗಿದೆ. ಒಳಭಾಗದಲ್ಲಿ 7 ಅಥವಾ 10.25 ಇಂಚು Touchscreen infotainment ಹಾಗೆ ಹೈಯರ್ ವೆರಿಯಂಟ್ ನಲ್ಲಿ ಸನ್ ರೂಫ್, ಹಾಗೆ ಇನ್ನಿತರ ವೈಶಿಷ್ಟಗಳನ್ನ ಅಳವಡಿಸಲಾಗಿದೆ. Tata Punch ಮೈಕ್ರೋ SUV ಬೆಲೆ 6 ಲಕ್ಷದಿಂದ 10 ಲಕ್ಷ ಆಗಿದೆ. ಇದರಲ್ಲಿ Pure, Adventure, Accomplished ಮತ್ತು Creative ವೇರಿಯಂಟ್ ಗಳು ಲಭ್ಯವಾಗಿದೆ.
Hyundai Exter
Hyundai Exter ಭಾರತದ ಜನಪ್ರಿಯ ಮೈಕ್ರೋ SUV ಆಗಿದೆ. ಈ SUV ಒಂದು ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹಾಗೆ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS with EBD, ESC, VSM, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳನ್ನ ಅಳವಡಿಸಲಾಗಿದೆ. ವೈರ್ ಲೆಸ್ ಚಾರ್ಜಿಂಗ್, ಸನ್ ರೂಫ್ ಸೇರಿದಂತೆ ಹಲವಾರು ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. Hyundai Exter ಎಕ್ಸ್ ಶೋರೂಮ್ ಬೆಲೆ 6 ಲಕ್ಷದಿಂದ 10.5 ಲಕ್ಷ ಆಗಿದೆ. ಇದರಲ್ಲಿ EX, S, SX ಮತ್ತು SX(O) ವೇರಿಯಂಟ್ ಗಳು ಲಭ್ಯ, ಹಾಗೆ Knight Edition ಕೂಡ ಲಭ್ಯವಿದೆ.
Maruti Suzuki Fronx
ಮಾರುತಿ ಸುಜುಕಿ ಫ್ರಾಂಕ್ಸ್ ಭಾರತದಲ್ಲಿ ಯುವಜನರ ನೆಚ್ಚಿನ ಕಾರ್ ಆಗಿದೆ. Fronx SUV ಒಂದು ಲೀಟರ್ ಗೆ 20 ರಿಂದ 22 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಸುರಕ್ಷತೆಗಾಗಿ ಹೈಯರ್ 6 ಏರ್ ಬ್ಯಾಗ್ ಗಳು, ABS with EBD, ESP, ಹಿಲ್-ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಅನ್ನು ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ, ವೈರ್ ಲೆಸ್ ಚಾರ್ಜರ್ ಮತ್ತು ಆಟೋ AC, ಹಾಗೆ 9 ಇಂಚು Touchscreen infotainment ಅನ್ನು ಕೂಡ ನೀಡಲಾಗಿದೆ. Maruti Suzuki Fronx ಎಕ್ಸ್ ಶೋರೂಮ್ ಬೆಲೆ 7.5 ಲಕ್ಷದಿಂದ 13 ಲಕ್ಷ ಆಗಿದೆ. ಇದರಲ್ಲಿ Sigma, Delta, Zeta, Alpha ವೇರಿಯಂಟ್ ಗಳು ಲಭ್ಯವಿದೆ.
Renault Triber
Renault Triber ಭಾರತದ ಅತ್ಯಂತ ಕಡಿಮೆ ಬೆಳೆಯ 7 ಸಿಟರ್ SUV ಆಗಿದೆ. Renault Triber ಒಂದು ಲೀಟರ್ ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಸುರಕ್ಷತೆಗಾಗಿ ಎಲ್ಲ ವೇರಿಯಂಟ್ ಗಳಲ್ಲಿ 6 ಏರ್ ಬ್ಯಾಗ್ ಗಳು, ABS with EBD, ESP, ಹಿಲ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು TPMS ಅನ್ನು ಅಳವಡಿಸಲಾಗಿದೆ. Renault Triber ಎಕ್ಸ್ ಶೋರೂಮ್ ಬೆಲೆ 5.76 ಲಕ್ಷದಿಂದ 8.60 ಲಕ್ಷ ಆಗಿದೆ. ಇದರಲ್ಲಿ Authentic, Evolution, Techno ಮತ್ತು Emotion ವೇರಿಯಂಟ್ ಗಳು ಲಭ್ಯ. ಕುಟುಂಬ ಪ್ರಯಾಣಕ್ಕೆ ಉತ್ತಮ ಆಯ್ಕೆ ಆಗಿದೆ.
Tata Tiago
ಭಾರತದಲ್ಲಿ ಟಾಟಾ ಟಿಯಾಗೋ ಬಜೆಟ್ ಬೆಲೆಗೆ ಉತ್ತಮವಾದ ಕಾರ್ ಆಗಿದೆ. ಟಾಟಾ ಟಿಯಾಗೋ ಒಂದು ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ ಗಳು, ABS with EBD, ESP, ಟೈರ್ ಪ್ರೆಶರ್ ಮಾನಿಟರಿಂಗ್ ಮತ್ತು ISOFIX ಅನ್ನು ಅಳವಡಿಸಲಾಗಿದೆ. ಇನ್ನು ಈ ಕಾರಿನ ಎಕ್ಸ್ ಶೋರೂಮ್ ಬೆಲೆ 4.57 ಲಕ್ಷದಿಂದ 7.82 ಲಕ್ಷ ಆಗಿದೆ. ಇದರಲ್ಲಿ XE, XM, XT, XZ, XZ+ ವೇರಿಯಂಟ್ ಗಳು ಲಭ್ಯ. CNG ಆಯ್ಕೆ XT ವೇರಿಯಂಟ್ ನಿಂದ ಆರಂಭವಾಗುತ್ತದೆ.
Maruti WagonR Electric
Maruti WagonR Electric 2026 ಕ್ಕೆ ಭಾರತಕ್ಕೆ ಕಾಲಿಡಲಿದ್ದು, 200 ರಿಂದ 300 ಕಿಲೋಮೀಟರ್ ರೇಂಜ್ ನೀಡಲಿದೆ. ಟಚ್ ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲ್, ಏರ್ ಬ್ಯಾಗ್ ಹೀಗೆ ಅನೇಕ ಪಿಚರ್ ಗಳನ್ನ ಪಡೆದುಕೊಂಡಿದೆ. ಈ ಕಾರಿನ ಅಂದಾಜು ಬೆಲೆ 8.5 ಲಕ್ಷದಿಂದ ಆರಂಭವಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

