ಮಾರುಕಟ್ಟೆ ಬಂತು 50 ಸಾವಿರಕ್ಕೂ ಕಡಿಮೆ ಬೆಲೆಯ, ಅತೀ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್, ದೀಪಾವಳಿ ಆಫರ್ ನೋಡಿ.

ಸದ್ಯದ ದಿನಗಳಲ್ಲಿ ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡುತ್ತಿದ್ದಾರೆ. ಇನ್ನು ದೇಶದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಲಭ್ಯವಿದ್ದು ಜನರು ಈ ವಾಹನಗಳಿಗೆ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ, ಜನರು ದೀಪಾವಳಿ ಸಮಯದಲ್ಲಿ ವಾಹನಗಳನ್ನ ಖರೀದಿ ಮಾಡುವ ಬಯಕೆ ಹೊಂದಿದ್ದಾರೆ ಮತ್ತು ಇದಕ್ಕೆ ಕಾರಣ ದೀಪಾವಳಿ ಸಮಯದಲ್ಲಿ ವಾಹನಗಳನ್ನ ಖರೀದಿ ಮಾಡಿದರೆ ನಮಗೆ ಒಳ್ಳೆಯ ಆಫರ್ ಗಳು ಸಿಗುತ್ತದೆ ಅನ್ನುವ ಕಾರಣಕ್ಕೆ.

ಇನ್ನು ಈಗ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು. ದೀಪಾವಳಿ ಹಬ್ಬದ ಸಲುವಾಗಿ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಈ ವಾಹನಗಳು ನಿಮಗೆ 50 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಸಿಗಲಿದೆ. ಹಾಗಾದರೆ ಮಾರುಕಟ್ಟೆಯಲ್ಲಿ 50 ಸಾವಿರ ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗಲಿರುವ ಆ ವಾಹನಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಎಲೆಕ್ಟ್ರಿಕ್ ವಾಹನಗ ಖರೀದಿ ಮಾಡುವ ಎಲ್ಲರಿಗೂ ತಲುಪಿಸಿ. ಹೌದು ಸ್ನೇಹಿತರೆ ಆಂಪಿಯರ್ V48 ಎಲೆಕ್ಟ್ರಿಕ್ ವಾಹನ ನಿಮಗೆ 50 ಸಾವಿರ ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗಲಿದೆ.

Best electric scooter

ಈ ಸ್ಕೂಟರಿನ ಎಕ್ಸ್ ಶೋರೂಂ ಬೆಲೆ 39,990 ರೂಪಾಯಿ ಆಗಿದೆ. ಇನ್ನು ಈ ಎಲೆಕ್ಟ್ರಿಕ್ ವಾಹನಕ್ಕೆ ಒಮ್ಮೆ ಚಾರ್ಜ್ ಹಾಕಿದರೆ ಬರೋಬ್ಬರಿ 60 ಕಿಲೋ ಮೀಟರ್ ಚಲಿಸುತ್ತದೆ ಮತ್ತು ಈ ವಾಹನಕ್ಕೆ ಒಮ್ಮೆ ಫುಲ್ ಚಾರ್ಜ್ ಹಾಕಲು ಎಂಟು ಘಂಟೆ ಸಮಯ ಬೇಕು. ಇನ್ನು ಈ ಸ್ಕೂಟರ್ ಗರಿಷ್ಠ 25Kmph ವೇಗದಲ್ಲಿ ಚಲಿಸಬಲ್ಲದು. ಇದು 48V ಬ್ಯಾಟರಿ ಮತ್ತು 250W ಮೋಟಾರ್ ಹೊಂದಿದೆ. ಇನ್ನು ಎರಡನೆಯದಾಗಿ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ LX (VRLA) ನಿಮಗೆ 46640 ರೂಪಾಯಿಗೆ ಸಿಗಲಿದೆ. ಈ ಸ್ಕೂಟರ್ 25Kmph ಗರಿಷ್ಠ ವೇಗವನ್ನು ಹೊಂದಿದೆ, ಇದನ್ನು ಒಂದೇ ಚಾರ್ಜ್‌ನಲ್ಲಿ 50Km ವರೆಗೆ ಚಲಾಯಿಸಬಹುದು. ಕಂಪನಿಯ ಪ್ರಕಾರ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ರಿಂದ 10 ಗಂಟೆಗಳು ತೆಗೆದುಕೊಳ್ಳುತ್ತದೆ. ಇದು 250W ಗಿಂತ ಕಡಿಮೆ ಶಕ್ತಿಯ ಮೋಟಾರ್ ಮತ್ತು 48V ಬ್ಯಾಟರಿಯನ್ನು ಹೊಂದಿದೆ.

ಇನ್ನು ಮೂರನೆಯದಾಗಿ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ LX (VRLA) ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 51,440 ರೂಪಾಯಿ ಆಗಿದೆ. ನೀವು ಇದನ್ನು ಬಿಳಿ, ನೀಲಿ ಮತ್ತು ಗ್ರೇ ಮೂರು ಬಣ್ಣಗಳಲ್ಲಿ ಖರೀದಿಸಬಹುದು. ನೀವು ಈ ಸ್ಕೂಟರ್ ಅನ್ನು 25Kmph ಗರಿಷ್ಠ ವೇಗದಲ್ಲಿ ಮಾತ್ರ ಓಡಿಸಬಹುದು. ಕಂಪನಿಯ ಪ್ರಕಾರ ಸ್ಕೂಟರ್(EV Scooters) ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 8 ರಿಂದ 10 ಗಂಟೆಗಳು ತೆಗೆದುಕೊಳ್ಳುತ್ತದೆ. ಇದು 250W ಗಿಂತ ಕಡಿಮೆ ಶಕ್ತಿಯ ಮೋಟಾರ್ ಮತ್ತು 48V ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group

Best electric scooter

Join Nadunudi News WhatsApp Group