Gaming Phone: ಮೊಬೈಲ್ ನಲ್ಲಿ ಹೆಚ್ಚು ಗೇಮ್ ಆಡುವ ಜನತೆಗೆ ಅಗ್ಗದ ಬೆಲೆಯ ಮೊಬೈಲ್ ಬಿಡುಗಡೆ, ಇದು ಗೇಮಿಂಗ್ ಮೊಬೈಲ್.
ಮೊಬೈಲ್ ಬಳಸಿ ಹೆಚ್ಚು ಗೇಮ್ ಆಡುವ ಜನರಿಗಾಗಿ ಅಗ್ಗದ ಬೆಲೆಯ ಗೇಮಿಂಗ್ ಮೊಬೈಲ್ ಬಿಡುಗಡೆ.
Best Gaming Phones: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು (Smartphones) ಬಿಡುಗಡೆ ಆಗಿದೆ. ಗೇಮಿಂಗ್ ಸ್ಮಾರ್ಟ್ ಫೋನ್ ಗಳ ಬೆಲೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಕಡಿಮೆ ಬೆಲೆಗೆ ಅಂದರೆ 30 ಸಾವಿರಾ ರೂಪಾಯಿಗಿಂತ ಬೆಸ್ಟ್ ಗೇಮಿಂಗ್ ಸ್ಮಾರ್ಟ್ ಫೋನುಗಳು ಮಾರುಕಟ್ಟೆಯಲ್ಲಿದೆ.
ಬೆಸ್ಟ್ ಗೇಮಿಂಗ್ ಸ್ಮಾರ್ಟ್ ಫೋನ್
ಇತ್ತೀಚಿಗೆ ಭಾರತದಲ್ಲಿ ಅತ್ತ್ಯುತ್ತಮ ಸ್ಮಾರ್ಟ್ ಫೋನುಗಳು ಬಜೆಟ್ ಬೆಲೆಯಲ್ಲಿ ಮಾರಾಟ ಆಗುತ್ತಿವೆ. ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತ ದೇಶದಲ್ಲಿ ಬೆಲೆಯ ವಿಚಾರವು ಬಹಳ ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಗೇಮಿಂಗ್ ಗಾಗಿ ದೊಡ್ಡ ಗಾತ್ರದ RAM, ಸ್ಟೋರೆಜ್ ಹೊಂದಿರುವ ಫೋನ್ ಹೆಚ್ಚಿನ ಆಯ್ಕೆಯಾಗಿರುತ್ತದೆ. ಆದರೆ ಈಗ ಗೇಮಿಂಗ್ ಸ್ಮಾರ್ಟ್ಫೋನ್ ಗಳ ಬೆಲೆ ಹೆಚ್ಚು ಎಂಬ ಕಾಲ ಹೋಗಿದೆ. ಕಡಿಮೆ ಬೆಲೆಗೆ ಮುಖ್ಯವಾಗಿ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಗೇಮಿಂಗ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿವೆ.
ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್ ಫೋನ್
ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್ ಫೋನ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ ಫೋನ್ ಗೆ ಗೇಮಿಂಗ್ ಪ್ರಿಯರು ಫಿದಾ ಆಗಿದ್ದಾರೆ. ಇದು 6 .67 ಇಂಹಿನ ಅಮೊಲೊಡ್ ಫುಲ್ ಹೆಚ್ ಡಿ + ಡಿಸ್ ಪ್ಲೆ ಹೊಂದಿದ್ದು 120 hz ರಿಫ್ರೆಶ್ ರೇಟ್ ನಿಂದ ಕೂಡಿದೆ.
ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ನೀಡಲಾಗಿದೆ. 5000mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ಕೂಡ ಇದೆ. ಇದರ ಆರಂಭಿಕ ಬೆಲೆ 24,999 ರೂ. ಆಗಿದೆ.
ನಿಯೋ 6 ಸ್ಮಾರ್ಟ್ಫೋನ್
ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ ಕೂಡ ಅತ್ಯುತ್ತಮ ಗೇಮಿಂಗ್ ಫೋನಾಗಿದೆ. ಇದರ ಬೆಲೆ 27,999 ರೂಪಾಯಿ ಆಗಿದೆ. ಇದು 6.62 ಇಂಚಿನ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಸ್ನಾಪ್ಡ್ರಾಗನ್ 870 5G ಪ್ರೊಸೆಸರ್ ನೀಡಲಾಗಿದೆ. 4700mAh ಬ್ಯಾಟರಿ, 80W ಫಾಸ್ಟ್ ಚಾರ್ಜರ್ ಕೂಡ ಇದೆ. 64MP+8MP+2MP ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ.