Best Banks For Home Loan: ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ಸ್ವಂತ ಮನೆ ಇರಬೇಕು ಎಂದು ಸಾಲ ಮಾಡಿ ಆದರೂ ಮನೆಯನ್ನು ಕಟ್ಟುತ್ತಾರೆ. ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬ್ಯಾಂಕ್ ಗೃಹ ಸಾಲವನ್ನು ನೀಡುತ್ತದೆ. ಸರ್ಕಾರೀ ಬ್ಯಾಂಕ್ ಹಾಗೆ ಖಾಸಗಿ ಬ್ಯಾಂಕ್ ಗಳು ಗೃಹ ಸಾಲವನ್ನು ನೀಡುತ್ತವೆ. ನೀವು ಯಾವ ಬ್ಯಾಂಕ್ ಕಡಿಮೆ ಬಡ್ಡಿಯೊಂದಿಗೆ ಗೃಹ ಸಾಲವನ್ನು ನೀಡುತ್ತಿದೆ ಎಂದು ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿ. ಇದೀಗ ನಾವು ಸರ್ಕಾರೀ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರ ಎಷ್ಟಿದೆ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಸರ್ಕಾರೀ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರ
ಸರ್ಕಾರೀ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರ 7.35% ನಿಂದ ಪ್ರಾರಂಭವಾಗುತ್ತದೆ.
ಇದು RBI ನ ಮಾರ್ಗಸೂಚಿಯ ಮೇಲೆ ನಿರ್ಧರಿಸಲಾಗುತ್ತದೆ. ಮತ್ತು ಇದು ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್ ಹಾಗೆ ಉದ್ಯೋಗದ ಆಧಾರದ ಮೇಲು ಕೂಡ ಬದಲಾಗುತ್ತದೆ. ಇದೀಗ ನಾವು ಕೆಲವು ಮುಖ್ಯ ಸರ್ಕಾರೀ ಬ್ಯಾಂಕ್ ಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಗೃಹ ಸಾಲದ ಬಡ್ಡಿದರ
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 7.35% ನಿಂದ ಪ್ರಾರಂಭವಾಗುತ್ತದೆ. ವೃತ್ತಿಪರರಿಗೆ ವಿಶೇಷ ರಿಯಾಯಿತಿಯನ್ನ ನೀಡಲಾಗುತ್ತದೆ.
* ಬ್ಯಾಂಕ್ ಆಫ್ ಇಂಡಿಯಾ – 7.35% ನಿಂದ ಪ್ರಾರಂಭವಾಗುತ್ತದೆ. ತ್ವರಿತ ಅನುಮೋದನೆ ಮತ್ತು ಸರಳ ಪ್ರಕ್ರಿಯೆ
* ಬ್ಯಾಂಕ್ ಆಫ್ ಮಹಾರಾಷ್ಟ್ರ – 7.35% ನಿಂದ ಪ್ರಾರಂಭವಾಗುತ್ತದೆ. ಇದು ಮಧ್ಯಮ ವರ್ಗಕ್ಕೆ ಸೂಕ್ತವಾಗಿದೆ. ಮತ್ತು ಕಡಿಮೆ ಪ್ರೊಸೆಸಿಂಗ್ ಪೀ ಇರುತ್ತದೆ.
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 7.35% ನಿಂದ ಪ್ರಾರಂಭವಾಗುತ್ತದೆ. ಡಿಜಿಟಲ್ ಸೌಲಭ್ಯದೊಂದಿಗೆ ವ್ಯಾಪಕ ಸೌಲಭ್ಯಗಳಿವೆ.
* ಇಂಡಿಯನ್ ಓವರ್ಸಿಸ್ ಬ್ಯಾಂಕ್ – 7.35% ನಿಂದ ಪ್ರಾರಂಭವಾಗುತ್ತದೆ. NRI ಗಳಿಗೆ ಉತ್ತಮ ಆಯ್ಕೆ ಆಗಿದೆ. ದೀರ್ಘ ಕಾಲದ ಸಾಲಕ್ಕೆ ಸೂಕ್ತವಾಗಿದೆ.
ಇತರ ಸರ್ಕಾರೀ ಬ್ಯಾಂಕ್ ಗಳು ನೀಡುವ ಗೃಹ ಸಾಲದ ಬಡ್ಡಿದರ
* ಕೆನರಾ ಬ್ಯಾಂಕ್ – 7.40% ನಿಂದ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಶಾಖೆಯನ್ನು ಹೊಂದಿದೆ.
* ಯುಕೋ ಬ್ಯಾಂಕ್ – 7.40% ನಿಂದ ಪ್ರಾರಂಭವಾಗುತ್ತದೆ. ಕಡಿಮೆ ಸಮಯದಲ್ಲಿ ತ್ವರಿತ ಸೇವೆ ಪಡೆದುಕೊಳ್ಳಬಹುದು.
* ಬ್ಯಾಂಕ್ ಆಫ್ ಬರೋಡ – 7.45% ನಿಂದ ಪ್ರಾರಂಭವಾಗುತ್ತದೆ. ದೀರ್ಘಕಾಲದ ಸಾಲಕ್ಕೆ ಉತ್ತಮವಾಗಿದೆ.
* ಪಂಜಾಬ್ ನ್ಯಾಷನಲ್ ಬ್ಯಾಂಕ್ – 7.50% ನಿಂದ ಪ್ರಾರಂಭವಾಗುತ್ತದೆ. ಡಿಜಿಟಲ್ ಅರ್ಜಿ
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – 7.50% ನಿಂದ ಪ್ರಾರಂಭವಾಗುತ್ತದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದೆ.
ಬ್ಯಾಂಕ್ ಗಳ ಬಡ್ಡಿದರವನ್ನು ಹೇಗೆ ನಿರ್ಧರಿಸಲಾಗುತ್ತದೆ..?
ಬಡ್ಡಿದರವನ್ನು (RLLR) Repo Linked Lending Rate ಅಥವಾ (MCLR) Marginal Cost Of Funds Based Lending Rate ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 730 ಕ್ಕಿಂತ ಹೆಚ್ಚಾಗಿದ್ದರೆ, ಕಡಿಮೆ ಬಡ್ಡಿದರದೊಂದಿಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರೀ ಅಥವಾ PSU ಉದ್ಯೋಗಿಗಳಿಗೆ ಹೆಚ್ಚು ರಿಯಾಯಿತಿ ಇರುತ್ತದೆ. ಹೆಚ್ಚಿನ ಬ್ಯಾಂಕ್ ಗಳಲ್ಲಿ ಪ್ರೊಸೆಸಿಂಗ್ ಪೀ 0.25% ರಿಂದ 1% ವರೆಗೆ ಇರುತ್ತದೆ.
ಸಲಹೆ
ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಉತ್ತಮವಾಗಿರಿಸಿಕೊಳ್ಳಿ. ಹಾಗೆ ಅಗತ್ಯ ದಾಖಲೆ (ಆಧಾರ್ ಕಾರ್ಡ್, ಪಾನ್ ಕಾರ್ಡ್ , ಆದಾಯ ಪ್ರಮಾಣ ಪತ್ರ) ಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ. ಸರಿಯಾದ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

