Best High Mileage Bikes 2026: ದೈನಂದಿನ ಜೀವನದಲ್ಲಿ ಯುವಕರು ಕೆಲಸಕ್ಕೆ ಹೋಗುವಾಗ, ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅಥವಾ ಸಣ್ಣಪುಟ್ಟ ತಿರುಗಾಟಗಳಿಗೆ ಬೈಕ್ ಅನ್ನು ಹೆಚ್ಚು ಹೆಚ್ಚು ಬಳಸುತ್ತಾರೆ. ಇದೀಗ ನಾವು ದೈನಂದಿನ ಪ್ರಯಾಣಿಕರಿಗೆ ಕಡಿಮೆ ಬೆಲೆಗೆ ಉತ್ತಮ ಕಾರ್ಯಕ್ಷಮತೆ ಹಾಗೂ ಇಂಧನ ದಕ್ಷತೆಯನ್ನು ನೀಡುವ ಬೈಕ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವುದರಿಂದ ಜನರು ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಸಲು ಬಯಸುತ್ತಾರೆ. ಇದೀಗ ನೀವು 2026 ರಲ್ಲಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಬೈಕ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
50 KMPL ಗಿಂತ ಹೆಚ್ಚಿನ ಮೈಲೇಜ್ ನೀಡುವ ಟಾಪ್ 5 ಬೈಕ್
Hero Splendor Plus
Hero Splendor Plus ನಲ್ಲಿ 97cc ಎಂಜಿನ್ ಇದ್ದು, 8 bhp ಪವರ್ ಮತ್ತು 70 ರಿಂದ 73 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಉತ್ತಮ ಮೈಲೇಜ್ ನೀಡುವ ಬೈಕ್ ಖರೀದಿಸಬೇಕು ಅಂದುಕೊಂಡವರಿಗೆ Hero Splendor Plus ಉತ್ತಮ ಆಯ್ಕೆ ಆಗಿದೆ. ಇನ್ನು Hero Splendor Plus ಲೈಟ್ ವೆಯಿಟ್ (112 kg) ಆಗಿದ್ದು, ಸಿಟಿ ಟ್ರಾಫಿಕ್ ನಲ್ಲಿ ಉತ್ತಮವಾಗಿದೆ. ಹಾಗೆ ಇದರಲ್ಲಿ Tubeless tires, adjustable suspension and combined braking system ಅನ್ನು ಅಳವಡಿಸಲಾಗಿದೆ. Hero Splendor Plus ಬೆಲೆ ಎಕ್ಸ್ ಶೋರೂಮ್ ಪ್ರಕಾರ 75,000 ರೂಪಾಯಿ ಆಗಿದೆ. ಇನ್ನು Hero Splendor Plus ನಲ್ಲಿ Side stand engine cut-off, hazard lights and integrated braking ಅಳವಡಿಸಲಾಗಿದೆ. 2025 ಮಾಡೆಲ್ ಗಳಲ್ಲಿ Front disc brake ಆಯ್ಕೆ ಲಭ್ಯವಾಗುತ್ತದೆ.
Bajaj Platina 110
Bajaj Platina 110 ನಲ್ಲಿ 115cc ಎಂಜಿನ್ ಇದ್ದು, ಸುಮಾರು 8.6 bhp ಪವರ್ ಮತ್ತು 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು Bajaj Platina 110 ನಲ್ಲಿ Long and quilted seat, ಉತ್ತಮ ಸಸ್ಪೆನ್ಶನ್ ಇದ್ದು, ರಫ್ ರೋಡ್ ಗಳಲ್ಲಿ ಹೆಚ್ಚು ಕಂಫರ್ಟ್ ನೀಡುತ್ತದೆ. ಹೈ ಗ್ರೌಂಡ್ ಕ್ಲಿಯರೆನ್ಸ್ ಮತ್ತು Tubeless tire ಗಳು ಬರುತ್ತದೆ. ಸೇಫ್ಟಿ ಗಾಗಿ Bajaj Platina 110 ನ ಕೆಲವು ವೆರಿಯಂಟ್ ಗಳು ABS ಹೊಂದಿವೆ, ಹಾಗೆ ಡಿಜಿಟಲ್ ಕ್ಲಸ್ಟರ್ ಮತ್ತು ಗೇರ್ ಇಂಡಿಕೇಟರ್, ಡ್ರಮ್ ಬ್ರೇಕ್ ಗಳು ಸ್ಟ್ಯಾಂಡರ್ಡ್. ಇನ್ನು Bajaj Platina 110 ಬೆಲೆ ಎಕ್ಸ್ ಶೋರೂಮ್ ಬೆಲೆ 70,000 ರೂಪಾಯಿಯಿಂದ ಆರಂಭವಾಗುತ್ತದೆ.
Honda Shine 125
ಪ್ರೀಮಿಯಂ ಫೀಲ್ ಮತ್ತು ವಿಶ್ವಾಸಾರ್ಹ ಬೈಕ್ ಬೇಕಾದವರಿಗೆ ಶೈನ್ 125 ಉತ್ತಮ ಆಯ್ಕೆ ಆಗಿದೆ. Honda Shine 125 ನಲ್ಲಿ 123.94cc ಎಂಜಿನ್ ಇದ್ದು, ಸುಮಾರು 10.7 PS ಪವರ್ ಮತ್ತು 11 Nm ಟಾರ್ಕ್ ಉತ್ಪದಿಸುತ್ತದೆ. Shine 125 ಒಂದು ಲೀಟರ್ ಗೆ 55 ರಿಂದ 65 ಕಿಲೋಮೀಟರ್ ಮೈಲೇಜ್ ನೀಡುತ್ತದೆ. Digital instrument cluster, gear indicator and USB-C charging port, telescopic front suspension, wider rear tyre and combi braking ಹೀಗೆ ಹಲವು ಪಿಚರ್ಸ್ ಗಳನ್ನೂ ಅಳವಡಿಸಲಾಗಿದೆ. ಇನ್ನು Honda Shine 125 ಬೆಲೆ ಎಕ್ಸ್ ಶೋರೂಮ್ ಬೆಲೆ 80,000 ರೂಪಾಯಿಯಿಂದ ಆರಂಭವಾಗುತ್ತದೆ.
TVS Radeon
ಕಡಿಮೆ ಬಜೆಟ್ ನಲ್ಲಿ ಸ್ಟೈಲ್, ಮೈಲೇಜ್ ಮತ್ತು ಸೌಕರ್ಯ ಬೇಕಾದವರಿಗೆ ರೇಡಿಯಾನ್ ಉತ್ತಮ ಆಯ್ಕೆ ಆಗಿದೆ. TVS Radeon ನಲ್ಲಿ 109.7cc ಎಂಜಿನ್ ಇದ್ದು, ಸುಮಾರು 8.08 PS ಪವರ್ ಮತ್ತು 8.7 Nm ಟಾರ್ಕ್ ಉತ್ಪದಿಸುತ್ತದೆ. TVS Radeon ಒಂದು ಲೀಟರ್ ಗೆ 65 ರಿಂದ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. Long seat, USB charging port, LED DRL, synchronized braking technology and 180 mm ground clearance ನೀಡುತ್ತದೆ. ಇನ್ನು TVS Radeon ಬೆಲೆ ಎಕ್ಸ್ ಶೋರೂಮ್ ಬೆಲೆ 70,000 ರೂಪಾಯಿಯಿಂದ ಆರಂಭವಾಗುತ್ತದೆ.
Hero HF Deluxe
Hero HF Deluxe ನಲ್ಲಿ 97.2cc ಎಂಜಿನ್ ಇದ್ದು, ಸುಮಾರು 8 PS ಪವರ್ ಮತ್ತು 8.05 Nm ಟಾರ್ಕ್ ಉತ್ಪದಿಸುತ್ತದೆ. Hero HF Deluxe ಒಂದು ಲೀಟರ್ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಉತ್ತಮ ಸಸ್ಪೆನ್ಶನ್ ಇದ್ದು ರಫ್ ರೋಡ್ ಗಳಲ್ಲಿ ಹೆಚ್ಚು ಕಂಫರ್ಟ್ ನೀಡುತ್ತದೆ. Long seat, tubeless tires (on some variants), integrated braking and 165 mm ground clearance ನೀಡುತ್ತದೆ. ಇನ್ನು Hero HF Deluxe ಬೆಲೆ ಎಕ್ಸ್ ಶೋರೂಮ್ ಬೆಲೆ 60,000 ರೂಪಾಯಿಯಿಂದ ಆರಂಭವಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

