Ads By Google

Best Keypad Phone: ಒಮ್ಮೆ ಚಾರ್ಜ್ ಮಾಡಿದರೆ 2 ದಿನ ಬ್ಯಾಟರಿ ಬ್ಯಾಕ್ ಅಪ್, ದೇಶದಲ್ಲಿ ಭರ್ಜರಿ ಸೇಲ್ ಆಗುತ್ತಿದೆ ಈ ಕೀಪ್ಯಾಡ್ ಮೊಬೈಲ್

best keypad mobiles

Image Credit: Original Source

Ads By Google

Best Keypad Phone: ದೇಶದಲ್ಲಿ ಹಲವು ರೀತಿಯ ವಿಶೇಶತೆ ಹೊಂದಿರುವ ಸ್ಮಾರ್ಟ್ ಫೋನ್ ಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಸ್ಮಾರ್ಟ್ ಫೋನ್ ಎಷ್ಟೇ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತಿದ್ದರು, ಕೀಪ್ಯಾಡ್‌ ಫೋನ್‌ ಗಳು ಇನ್ನು ಸಹ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿರುವುದು ಬಹಳ ಮುಖ್ಯ ಸಂಗತಿ ಆಗಿದೆ. ಹೌದು ಇಂದಿಗೂ ಕೂಡ ಲಕ್ಷಾಂತರ ಜನರು ಕೀಪ್ಯಾಡ್‌ ಫೋನ್‌ ಗಳನ್ನೂ ಬಳಸುತ್ತಿದ್ದಾರೆ.

ನೆಟ್ವರ್ಕ್ ಸಮಸ್ಯೆ ಇರುವ ಸ್ಥಳಗಳಲ್ಲಿ, ಗ್ರಾಮೀಣ ಪ್ರದೇಶ ಗಳಲ್ಲಿ, ವಿದ್ಯುತ್ ಸಮಸ್ಯೆ ಇರುವ ಕಡೆ ಹಾಗು ಸ್ಮಾರ್ಟ್ ಫೋನ್ ಉಪಯೋಗಿಸಲು ಬಾರದ ಹಿರಿಯರಿಗೆ ಈ ಕೀಪ್ಯಾಡ್‌ ಫೋನ್‌ ಬಹಳ ಪ್ರಯೋಜನಕಾರಿ ಆಗಿದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಬಿಡುಗಡೆ ಆಗುತ್ತಿರುವ ಕೀಪ್ಯಾಡ್‌ ಫೋನ್‌ ಗಳು ಸ್ಮಾರ್ಟ್ ಫೋನ್ ಗಳಷ್ಟೇ ಫೀಚರ್ಸ್ ಗಳನ್ನೂ ಹೊಂದಿರುತ್ತದೆ.

Image Credit: Original Source

Micromax X413 Keypad Phone

ಮೈಕ್ರೋಮ್ಯಾಕ್ಸ್ X413 ಫೋನ್ 32 MB RAM ಹಾಗೂ 32 MB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 1.77 ಇಂಚಿನ ಡಿಸ್‌ಪ್ಲೇ ಹೊಂದಿದೆ. ಉಳಿದಂತೆ ಈ ಫೋನ್‌ನಲ್ಲಿ 0.3MP ರಿಯರ್‌ ಕ್ಯಾಮೆರಾ, 800 mAh ಸಾಮರ್ಥ್ಯದ ಬ್ಯಾಟರಿ ಇದ್ದು, 44% ರಿಯಾಯಿತಿಯೊಂದಿಗೆ 826 ರೂ. ಗಳಿಗೆ ಖರೀದಿ ಮಾಡಬಹುದು.

Image Credit: Thehindu

Jio Prima 4G Phone

ಈ ಫೋನ್‌ 2.4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 500 MB RAM ಹಾಗೂ 4 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರೊಂದಿಗೆ 0.3MP ರಿಯರ್ ಕ್ಯಾಮೆರಾ ಹಾಗೂ 1800 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಮೂಲಕ ಫೀಚರ್ ಫೋನ್‌ಗಳ ವಿಭಾಗದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ ಎಂದು ಕರೆಸಿಕೊಂಡಿದೆ. ಈ ಫೋನ್‌ ಅನ್ನು 27% ರಿಯಾಯಿತಿಯೊಂದಿಗೆ ನೀವು 2,897 ರೂ. ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.

Image Credit: Original Source

Samsung Guru FM Plus SM-B110E D

ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ ಆಗಿದೆ. ಇದು 1.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 800 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ ಉತ್ತಮ ಬ್ಯಾಕಪ್‌ ನೀಡಲಿದೆ. ಈ ಫೋನ್‌ 2,099 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 1,949 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

Image Credit: News 18

Nokia 105 Keypad Phone

ಈ Nokia 105 ಫೋನ್ ಸಿಂಗಲ್ ಸಿಮ್, ವೈರ್‌ಲೆಸ್ ಎಫ್‌ ಎಮ್‌ ರೇಡಿಯೊದೊಂದಿಗೆ ಕಾಣಿಸಿಕೊಂಡಿದ್ದು, 32 MB RAM ಹಾಗೂ 32 MB ROM ಸ್ಟೋರೇಜ್‌ ಆಯ್ಕೆಯೊಂದಿಗೆ 1.77 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 1000 mAh ಸಾಮರ್ಥ್ಯದ ಬ್ಯಾಟರಿ, SC6531E ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 24% ರಿಯಾಯಿತಿಯೊಂದಿಗೆ ನೀವು ಇದನ್ನು 1,209 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Image Credit: Original Source

Lava A1 Josh BOL Phone

Lava A1 Josh BOL ಫೋನ್ 1.77 ಇಂಚಿನ ಕ್ವಾರ್ಟರ್ QVGA ಡಿಸ್‌ಪ್ಲೇ ಹೊಂದಿದ್ದು, 4 MB RAM ಹಾಗೂ 4 MB ಇಂಟರ್ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 32 GB ವರೆಗೆ ಎಸ್‌ಡಿಕಾರ್ಡ್‌ ಮೂಲಕ ಸ್ಟೋರೇಜ್‌ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇದೆ. ಜೊತೆಗೆ ಈ ಫೋನ್ 1000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ದೀರ್ಘ ಬ್ಯಾಕಪ್‌ ನೀಡಲಿದೆ. ಈ ಫೋನ್‌ ಅನ್ನು ನೀವು 25% ರಿಯಾಯಿತಿಯೊಂದಿಗೆ 1,039 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

Image Credit: Telecombyte

Jio B1 Keypad Phone

ಈ ಫೋನ್‌ ಯುಪಿಐ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, 2.4 ಇಂಚಿನ VGA ಡಿಸ್‌ಪ್ಲೇ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 50 MB RAM ಹಾಗೂ 50 MB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 128 GB ಸ್ಟೋರೇಜ್‌ ವರೆಗೆ ವಿಸ್ತರಣೆಗೆ ಅವಕಾಶ ನೀಡುತ್ತದೆ. ಹಾಗೆಯೇ 0.3MP ರಿಯರ್‌ ಕ್ಯಾಮೆರಾ ಮತ್ತು 2000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ. ಈ ಫೋನ್‌ ಅನ್ನು ನೀವು 44% ರಿಯಾಯಿತಿಯೊಂದಿಗೆ 1,440 ರೂ. ಜಿಯೋ ಪ್ರೈಮಾ 4Gಗಳ ದರದಲ್ಲಿ ಖರೀದಿ ಮಾಡಬಹುದು.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in