Mileage Cars: ಮೈಲೇಜ್ ನಲ್ಲಿ ದಾಖಲೆ ನಿರ್ಮಾಣ ಮಾಡಲು ಬಂತು ಬಜೆಟ್ ಬೆಲೆಯ ಮಾರುತಿ ಕಾರ್ಸ್, ಕಾತುರದಲ್ಲಿ ಜನರು.
ಕಡಿಮೆ ಬಜೆಟ್ ನಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳ ಬಗ್ಗೆ ಮಾಹಿತಿ ತಿಳಿಯಿರಿ.
Best Mileage Cars In India: ಸಾಮಾನ್ಯವಾಗಿ ವಾಹನ ಖರೀದಿಸುವವರು ಹೆಚ್ಚಾಗಿ ಮೈಲೇಜ್ (Mileage) ನ ಬಗ್ಗೆ ಗಮನಹರಿಸುತ್ತಾರೆ. ಕಡಿಮೆ ಬಜೆಟ್ ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಲಗ್ಗೆ ಇಡುತ್ತಲೇ ಇರುತ್ತವೆ. ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ.
ಇನ್ನು ಮಾರುತಿ, ಹ್ಯುಂಡೈ ಸೇರಿದಂತೆ ಇನ್ನಿತರ ಕಾರ್ ಗಳು ಮಾರುಕಟ್ಟ್ಟೆಯಲ್ಲಿ ಪೈಪೋಟಿ ನಡೆಸುತ್ತಲೇ ಇರುತ್ತವೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಾಕಷ್ಟು ಮಾದರಿಯ ಕಾರ್ ಗಳಿಗೆ. ನೀವು ಕಾರ್ ಖರೀದಿಯ ಬಗ್ಗೆ ಯೋಜನೆ ಹೂಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ.
ಮೈಲೇಜ್ ನಲ್ಲಿ ದಾಖಲೆ ನಿರ್ಮಾಣ ಮಾಡಲು ಬಂತು ಬಜೆಟ್ ಬೆಲೆಯ ಹೊಸ ಸ್ವಿಫ್ಟ್
*ಮಾರುತಿ ಸುಜುಕಿ ಸೆಲೆರಿಯೊ
ಮಾರುತಿ ಸೆಲೆರಿಯೊ ಸಿ ಎನ್ ಜಿ ದೇಶದಲ್ಲಿ ಅತ್ತ್ಯುತ್ತಮ ಮೈಲೇಜ್ ನೀಡುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮಾರುತಿ ಸೆಲೆರಿಯೊ CNG ನ ಬೆಲೆಯೂ ಮಾರುತಿ ಆಲ್ಟೊ K10 CNG ಮಾದರಿಯ ಕಾರ್ ನ ಬೆಲೆಗೆ ಸಮವಾಗಿದೆ. ಇನ್ನು ಮಾರುತಿ ಸೆಲೆರಿಯೊ CNG ಮಾದರಿಯ ಕಾರ್ 35 .6km ಮೈಲೇಜ್ ನೀಡಲಿದೆ.
*ಮಾರುತಿ ವ್ಯಾಗನಾರ್ CNG
ಮಾರುತಿ ಕಂಪನಿಯ ವ್ಯಾಗನಾರ್ CNG ಮಾದರಿಯ ಕಾರ್ ಕೂಡ ಗ್ರಾಹಕರಿಗೆ 34 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.
*ಮಾರುತಿ ಎಸ್ ಪ್ರೆಸ್ಸೋ
ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರ್ ನ ಆರಂಭಿಕ ಬೆಲೆ ರೂ. 4 .26 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಈ ಕಾರುಗಳಲ್ಲಿ CNG ಆಯ್ಕೆ ನೀಡಲಾಗಿದೆ. ಮಾರುತಿ ಎಸ್ ಪ್ರೆಸ್ಸೋ ಪ್ರತಿ ಕಿಲೋ ಗ್ರಾಂ ಗೆ 32 .73 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.
*ಮಾರುತಿ ಸುಜುಕಿ ಸ್ವಿಫ್ಟ್
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷದಿಂದ 9.03 ಲಕ್ಷ ಆಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನಿಮಗೆ 22.56 ರಿಂದ 30.9 km/kg ಮೈಲೇಜ್ ನೀಡುತ್ತದೆ.
*ಮಾರುತಿ ಸುಜುಕಿ ಬಲೆನೊ
ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರಿನಲ್ಲಿ CNG ಆಯ್ಕೆಯನ್ನು ಸಹ ಪಡೆಯಬಹುದು, ಇದು 76 Bhp ನಲ್ಲಿ ರೇಟ್ ಮಾಡಲ್ಪಟ್ಟಿದೆ, ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೆ ಮಾತ್ರ ಸಂಯೋಜಿತವಾಗಿದೆ. ಈ ಕಾರ್ ನಲ್ಲಿ ಪ್ರತಿ ಕೆಜಿಗೆ 30.90 ಕಿಲೋಮೀಟರ್ ಮೈಲೇಜ್ ಪಡೆಯಬಹುದಾಗಿದೆ.