Best Cars: ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 1000 Km ಚಲಿಸುತ್ತೆ ಈ 5 ಕಾರುಗಳು, ದೇಶದಲ್ಲಿ ದಾಖಲೆಯ ಮಾರಾಟ.
ಫುಲ್ ಟ್ಯಾಂಕ್ ನಲ್ಲಿ 1000 ಕ್ಕಿಂತ ಹೆಚ್ಚು ಕಿಲೋಮೀಟರ್ ಚಲಿಸುವ ಕಾರ್ ದಾಖಲೆ ಬುಕಿಂಗ್ ಕಾಣುತ್ತಿದೆ.
Best Mileage Cars: ಇತ್ತೀಚಿನ ದಿನಗಳಲ್ಲಿ ಹಲವು ಕಾರ್ ಕಂಪನಿಗಳು ಹಲವು ಬಗೆಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಜನರು ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಒಳಗಾಗುತ್ತಾರೆ.
ಹೊಸ ಕಾರು ಖರೀದಿಸುವವರಿಗೆ ಮೈಲೇಜ್ ಮುಖ್ಯವಾದ ವಿಚಾರವಾಗಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿ ವಾಹನಗಳು ಹೆಚ್ಚಿನ ಇಂಧನ ದಕ್ಷತೆ ಹೊಂದಿರುತ್ತವೆ. ಇದೀಗ ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 1000 ಕಿಲೋಮೀಟರು ಚಲಿಸುವ 5 ಕಾರ್ ಗಳ ಬಗ್ಗೆ ಮಾಹಿತಿ ತಿಳಿಯಿರಿ.
ಫುಲ್ ಟ್ಯಾಂಕ್ ನಲ್ಲಿ 1000 ಕ್ಕಿಂತ ಹೆಚ್ಚು ಕಿಲೋಮೀಟರ್ ಚಲಿಸುವ ಕಾರ್
*Toyota Hyryder
ಟೊಯೋಟಾ ಹೈರೈಡರ್ 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ. Toyota Hyryder 27 .93 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್ ನಲ್ಲಿ 1257 ಕಿಲೋಮೀಟರ್ ವರೆಗೆ ಸಂಚರಿಸಬಹುದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟೊಯೋಟಾ ಹೈರೈಡರ್ ಬೆಲೆ ಎಕ್ಸ್ ಶೋರೂಮ್ ಪ್ರಕಾರ 10 .86 ಲಕ್ಷದಿಂದ 19 .99 ಲಕ್ಷದ ವರೆಗೆ ಇರುತ್ತದೆ.
Toyota Hyryder ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. Toyota Hyryder 1 .5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1 .5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹಾಗೆ 5 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಸಿಗುತ್ತದೆ.
*Maruti Suzuki Grand Vitara
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹೈಬ್ರಿಡ್ ಎಂಜಿನ್ ಪಡೆದುಕೊಂಡು 27 .93 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 1257 ಕಿಲೋಮೀಟರ್ ತನಕ ಕ್ರಮಿಬಹುದು. ಭಾರತೀಯ ಮಾರುಕಟ್ಟೆಯಲ್ಲಿ Maruti Suzuki Grand Vitara 10.70 ಲಕ್ಷದಿಂದ 19 .95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.
*Maruti Suzuki Invicto
ಟೊಯೊಟಾ ಇನ್ನೋವಾ ಹೈಕ್ರಾಸ್ ರೀ ಬ್ಯಾಡ್ಜ್ ಆವೃತ್ತಿಯಾದ Maruti Suzuki Invicto MPV 2 .0 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. Maruti Suzuki Invicto 23 .24 ಕಿಲೋಮೀಟರ್ ಮೈಲೇಜ್ ನೀಡುತ್ತದೆ. Invicto 52 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಫುಲ್ ಟ್ಯಾಂಕ್ ಮಾಡಿದರೆ 1208 ಕಿಲೋಮೀಟರ್ ವರೆಗೆ ಸಂಚರಿಸಬಹುದಾಗಿದೆ. ಇದರ ಬೆಲೆ ಎಕ್ಸ್ ಶೋರೂಮ್ ಪ್ರಕಾರ 24 .79 ಲಕ್ಷದಿಂದ 28 .42 ಲಕ್ಷದ ವರೆಗೆ ಇರುತ್ತದೆ.
*Toyota Innova Hycross
Toyota Innova Hycross MPV 21 .1 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಕಾರನ್ನು ಫುಲ್ ಟ್ಯಾಂಕ್ ಮಾಡಿದರೆ 1097 ಕಿಲೋಮೀಟರ್ ವರೆಗೆ ಕ್ರಮಿಸಬಹುದು. Toyota Innova Hycross MPV ಬೆಲೆ ಎಕ್ಸ್ ಶೂರೋಮ್ ಪ್ರಕಾರ 18.82 ಲಕ್ಷದಿಂದ 30.26 ಲಕ್ಷಕ್ಕೆ ಖರೀದಿ ಮಾಡಬಹುದು.
*Honda City e:HEV
Honda City e:HEV ಪೆಟ್ರೋಲ್ ಎಂಜಿನ್ ನಲ್ಲಿ 27.13 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 40 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ. ಫುಲ್ ಟ್ಯಾಂಕ್ ಮಾಡಿದರೆ 1085 ಕಿಲೋಮೀಟರ್ ಕ್ರಮಿಸುತ್ತದೆ. Honda City e:HEV ಬೆಲೆ ಎಕ್ಸ್ ಶೂರೋಮ್ ಪ್ರಕಾರ 18.89 ಲಕ್ಷದಿಂದ 20.39 ಲಕ್ಷದ ವರೆಗೆ ಇರುತ್ತದೆ.