BGauss C12i: ಒಮ್ಮೆ ಚಾರ್ಜ್ ಮಾಡಿದರೆ 130 Km ಮೈಲೇಜ್, ಬಂತು ಕಡಿಮೆ ಬೆಲೆಗೆ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್.

ಕಡಿಮೆ ಬೆಲೆ ಹೆಚ್ಚು ಮೈಲೇಜ್ ಕೊಡುವ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್.

BGauss C12i Electric Scooter: ಇತ್ತೀಚಿನ ದಿನಗಳಲ್ಲಿ ಎಲ್ಲಾ ಜನರು ಎಲೆಕ್ಟ್ರಿಕ್ ಸ್ಕೂಟರ್ ಮೊರೆ ಹೋಗುತ್ತಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಕಾರಣ ಮತ್ತು ದೇಶದಲ್ಲಿ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಖರೀದಿ ಮಾಡಲು ಬಯಸುತ್ತಿದ್ದಾರೆ.

ಸದ್ಯ ದೇಶದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಗಳು ಬಿಡುಗಡೆ ಆಗಿದ್ದು ಜನರು ಯಾವ ಸ್ಕೂಟರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗಿರುವುದನ್ನ ನಾವು ಗಮನಿಸಬಹುದು. ಇನ್ನು ಈಗ ದೇಶದಲ್ಲಿ ಇನ್ನೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಿದು ಜನರು ಇದರ ಬೆಲೆ ಮತ್ತು ಮೈಲೇಜ್ ಕಂಡು ಹೆಚ್ಚು ಬುಕಿಂಗ್ ಮಾಡಲು ಆರಂಭ ಮಾಡಿದ್ದಾರೆ.

BGauss C12i Scooter Mileage
Image Credit: Carbike360

ದೇಶದಲ್ಲಿ ಬಿಡುಗಡೆಯಾಯಿತು ಇನ್ನೊಂದು ಎಲೆಕ್ಟ್ರಿಕ್ ಬೈಕ್
ಹೌದು ಸಾಕಷ್ಟು ಪೈಪೋಟಿ ನಡುವೆ ಈಗ ದೇಶದಲ್ಲಿ BGauss C12i ಎಲೆಕ್ಟ್ರ್ಸಿ ಸ್ಕೂಟರ್ ಲಾಂಚ್ ಆಗಿದ್ದು ಜನರು ಸ್ಕೂಟರ್ ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹೌದು ಮೈಲೇಜ್ ಸ್ಕೂಟರ್ ಜೊತೆಗೆ ಕಡಿಮೆ ಬೆಲೆಗೆ ಸ್ಕೂಟರ್ ಖರೀದಿ ಮಾಡಲು ಬಯಸುವವರಿಗೆ ಈ ಸ್ಕೂಟರ್ ಬಹಳ ಉತ್ತಮವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಬಿಡುಗಡೆಯಾದ ಕಡಿಮೆ ಸಮಯದಲ್ಲಿ ಹೆಚ್ಚು ಬೇಡಿಕೆಯನ್ನ ಪಡೆದುಕೊಂಡಿರುವ ಈ ಸ್ಕೂಟರ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟವನ್ನ ಪಡೆದುಕೊಳ್ಳಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

BGauss C12i ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಈ ಎಲೆಕ್ಟ್ರಿಕ್ ಸ್ಕೂಟರ್ 110 ಕೆಜಿ ತೂಕವನ್ನ ಹೊಂದಿದ್ದು 2500 ವ್ಯಾಟ್ ಮೋಟಾರ್ ಹೊಂದಿದೆ ಎಂದು ಕಂಪನಿ ಪ್ರಸ್ತಾವನೆಯಲ್ಲಿ ತಿಳಿಸಿದೆ. ಅದೇ 155 MM ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕೂಡ ಸ್ಕೂಟರ್ ಹೊಂದಿರುವುದನ್ನ ನಾವು ಗಮನಿಸಬಹುದು. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಈ ಸ್ಕೂಟರ್ ನ ಆರಂಭಿಕ ಬೆಲೆ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ಮತ್ತು ಜನರು 13000 ರೂ ಡೌನ್ ಪೇಮೆಂಟ್ ಮಾಡುವುದರ ಮೂಲಕ ಬೈಕ್ ಖರೀದಿ ಮಾಡಬಹುದು.

BGauss C12i Electric Scooter Price
Image Credit: OLX

BGauss C12i ಸ್ಕೂಟರ್ ಮೈಲೇಜ್ ಮತ್ತು ವಿಶೇಷತೆ
BGauss C12i ಎಲೆಕ್ಟ್ರಿಕ್ ಸ್ಕೂಟರ್ ನೇ ಬೆಲೆ 1.5 ಲಕ್ಷ ರೂಪಾಯಿ ಆಗಿದ್ದು ಈ ಸ್ಕೂಟರ್ ಸುಮಾರು 130 ಕಿಲ್ ಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಸ್ಕೂಟರ್ ನ ಗರಿಷ್ಟ ವೇಗ ಘಂಟೆಗೆ 60 ಕಿಲೋ ಮೀಟರ್ ಆಗಿದೆ. ಇನ್ನು ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಲು ಸುಮರು 6 ಘಂಟೆ ಅವಧಿ ಬೇಕಾಗುತ್ತದೆ. ಕಡಿಮೆ ಡೌನ್ ಪೇಮೆಂಟ್ ಮಾಡುವುದರ ಮೂಲಕ ಜನರು ಈ ಸ್ಕೂಟರ್ ಖರೀದಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group