BGauss Ev: ಬೇಡಿಕೆ ಕಳೆದುಕೊಳ್ಳುವ ಭೀತಿಯಲ್ಲಿ ಓಲಾ, 135 Km ಮೈಲೇಜ್ ಕೊಡುವ ಇನ್ನೊಂದು ಅಗ್ಗದ ಸ್ಕೂಟರ್ ಬಿಡುಗಡೆ.

BGauss ನೂತನ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.

BGauss C12i  Max Electric Scooter: ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಪರಿಚಯವಾಗುತ್ತಿದೆ. ಗ್ರಾಹಕರಿಗೆ ಯಾವ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸ ಬೇಕು ಎನ್ನುವ ಗೊಂದಲ ಏರ್ಪಡುವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯವಿದೆ. ಇನ್ನು ದೇಶದಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲಗಳ ಬೆಲೆಯ ಏರಿಕೆ ಒಂದು ವಿಧದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆಯನ್ನು ಹೆಚ್ಚು ಮಾಡಿದೆ ಎಂದರೆ ತಪ್ಪಾಗಲಾರದು.

BGauss launches a new electric scooter with a new design
Image Credit: Other sources

BGauss ನೂತನ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ವಿಭಿನ್ನ ಜನಪ್ರಿಯ ಕಂಪನಿಗಳು ಸೇರಿದಂತೆ ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ರೂಪಾಂತರವನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚಿಸುತ್ತಿದೆ. ಇನ್ನು ಇದೀಗ ಮಾರುಕಟ್ಟೆಯಲ್ಲಿ BGauss ನೂತನ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನ ವೈಶಿಷ್ಟ್ಯಗಳಿರುವ ಈ ನೂತನ ಸ್ಕೂಟರ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುದರಲ್ಲಿ ಯಾವುದೇ ಸಂದೇಹವಿಲ್ಲ.

BGauss C12i ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್
BGauss ಕಂಪನಿಯು ಆಕರ್ಷಕ ನೋಟದೊಂದಿಗೆ BGauss C12i ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲಿದೆ. ಕಂಪನಿಯು ಈ ಎಲೆಕ್ಟ್ರಿಕ್ ಮಾದರಿಯಲ್ಲಿ 3.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಜೊತೆಗೆ 2500 ವ್ಯಾಟ್ ಶಕ್ತಿಯೊಂದಿಗೆ ವಿದ್ಯುತ್ ಮೋಟರ್ ಅನ್ನು ಒದಗಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ ಕೇವಲ 4 ಗಂಟೆ 15 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದ ವರೆಗೆ ಚಾರ್ಜ್ ಮಾಡಿಕೊಳ್ಳಲು ಸಹಾಯವಾಗುತ್ತದೆ.

BGauss C12i  Max Electric Scooter
Image Credit: Carbike360

ಒಂದೇ ಚಾರ್ಜ್ ನಲ್ಲಿ 135 Km ಮೈಲೇಜ್ ಕೊಡುವ ಸ್ಕೂಟರ್
ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ನೀವು ಈ ಸ್ಕೂಟರ್ ಅನ್ನು 135 ಕಿಮೀ ವ್ಯಾಪ್ತಿಯವರೆಗೆ ಓಡಿಸಬಹುದು. ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಈ ಸ್ಕೂಟರ್ ಅನ್ನು ಚಲಾಯಿಸಬಹುದು. ವಾಹನ ಸವಾರರ ಸುರಕ್ಷತೆಗಾಗಿ ಕಂಪನಿಯು ತನ್ನ ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ ಗಳ ಸಂಯೋಜನೆಯನ್ನು ನೀಡಿದೆ. ನೂತನ ಸುಧಾರಿತ ವೈಶಿಷ್ಟ್ಯಗಳಿರುವ ಈ ಬೈಕ್ ಹೆಚ್ಚಿನ ಮೈಲೇಜ್ ಬೈಕ್ ಗೆ ಹೆಸರುವಾಸಿಯಾಗಿದೆ.

BGauss C12i ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಕಾಂಬಿ ಬ್ರೇಕಿಂಗ್ ಸಿಸ್ಟಮ್ ಅನ್ನು ಆಧರಿಸಿದೆ. ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಡಬಲ್ ಹೈಡ್ರಾಲಿಕ್ ಸ್ಪ್ರಿಂಗ್ ಆಧಾರಿತ 4 ಬಾರಿ ಹೊಂದಾಣಿಕೆ ಮಾಡಬಹುದಾದ Shakabjar ಹೊಂದಿರುವ ಈ ಸ್ಕೂಟರ್ ಗೆ ಮಾರುಕಟ್ಟೆಯಲ್ಲಿ 1.26 ರೂಪಾಯಿ ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಮಾದರಿ ಖರೀದಿಗೆ ಉತ್ತಮ ಆಯ್ಕೆಯಾಗಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group