BH Number Plate: ಕಾರಿಗೆ BH ನಂಬರ್ ಪ್ಲೇಟ್ ಹಾಕಿಸಿಕೊಂಡರೆ ಏನು ಲಾಭ…? ಯಾರು ಯಾರಿಗೆ ಸಿಗುತ್ತದೆ ಈ BH ನಂಬರ್.
ಇದೀಗ ವಾಹನಗಳಲ್ಲಿ ಅಳವಡಿಸಲಾದ BH Number Plate ಬಗ್ಗೆ ಮಾಹಿತಿ ತಿಳಿಯಿರಿ.
BH Number Plate Registration: ದೇಶದಲ್ಲಿ ಸಾಕಷ್ಟು ವಾಹನಗಳು ಬಳಕೆಯಲ್ಲಿವೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಇನ್ನು ಸಾರಿಗೆ ಇಲಾಖೆ ರಸ್ತೆ ಸಂಚಾರ ಮಾರ್ಗದಲ್ಲಿ ಅನೇಕ ನಿಯಮವನ್ನು ರೂಪಿಸುತ್ತದೆ. ಇನ್ನು ರಸ್ತೆಗಳಲ್ಲಿ ಓಡಾಡುವ ಪ್ರತಿ ವಾಹನವು ಕೂಡ ಸಾರಿಗೆ ಇಲಾಖೆಯ ನಿಯಮವನ್ನು ತಿಳಿದುಕೊಂಡಿರಬೇಕು.
ಇನ್ನು ವಾಹನಗಳಿಗೆ Number Plate ಅನ್ನು ಎಲ್ಲ ವಾಹನಗಳಲ್ಲಿ ನೋಡಬಹುದು. ವಾಹನಗಳಲ್ಲಿರುವ Number Plate ಗಳು ವಾಹನದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇನ್ನು ವಾಹನಗಳಲ್ಲಿ BH ನೋಂದಣಿ ಇರುವುದು ನಿಮಗೆ ತಿಳಿದಿರಬಹುದು. ಇದೀಗ ವಾಹನಗಳಲ್ಲಿ ಅಳವಡಿಸಲಾದ BH Number Plate ಗಳಿಂದ ಏನು ಲಾಭ? ಇದೆ ಎನ್ನುವುದು ಕೆಲವರ ಪ್ರಶ್ನೆಯಾಗಿರಬಹುದು.
ವಾಹನಗಳಲ್ಲಿನ BH ನಂಬರ್ ಪ್ಲೇಟ್
ಭಾರತ್ ಸರಣಿ ಸಂಖ್ಯೆಗಳ ನೋಂದಣಿಯು ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭವಾಗಿದೆ. ಈ BH ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶ ಏನೆಂದರೆ ಅಂತಹ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಸರಕು ರಹಿತ ವಾಹನದ ಮಾಲೀಕರು ಹೊಸ ನೋಂದಣಿ ಫಲಕಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಭಾರತ್ ಸರಣಿಯು ವಿಶೇಷ ರೀತಿಯ ನೋಂದಣಿಯಾಗಿದೆ. ಅಂತಹ ವಾಹನಗಳ ನಂಬರ್ ಪ್ಲೇಟ್ ಗಳು 21, 22, 23 ನಂತಹ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ.
ಈ ಸಂಖ್ಯೆಗಳು ವಾಹನವನ್ನು ಯಾವಾಗ ನೋಂದಾಯಿಸಲಾಗಿದೆ ಎಂಬುದನ್ನು ತೋರಿಸುತ್ತದೆ. ಇದರ ನಂತರ, ರಾಜ್ಯ ಕೋಡ್ ಬದಲಿಗೆ BH ಅನ್ನು ಅದರಲ್ಲಿ ಬರೆಯಲಾಗಿದೆ, ಇದು ಭಾರತದಾದ್ಯಂತ ಮಾನ್ಯವಾಗಿದೆ. ಭಾರತ್ ಸರಣಿಯ ಸಂಖ್ಯೆ 21 ಅನ್ನು 2021 ರಲ್ಲಿ ನೋಂದಾಯಿಸಲಾಗಿದೆ. ಅದೇ ಸಮಯದಲ್ಲಿ ಈ ವರ್ಷದ ಆಗಸ್ಟ್ ವೇಳೆಗೆ ಈ ಸಂಖ್ಯೆ 919 ಕ್ಕೆ ಏರಿಕೆಯಾಗಿದೆ ಎಂದು ಸಾರಿಕೆ ಇಲಾಖೆ ಮಾಹಿತಿ ನೀಡಿದೆ.
ಯಾರು ಯಾರಿಗೆ ಸಿಗಲಿದೆ ಈ BH ನಂಬರ್ ಪ್ಲೇಟ್..?
*BH ನೋಂದಣಿ ಫಲಕವನ್ನು ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತಿದೆ. ಬೇರೆ ರಾಜ್ಯಕ್ಕೆ ವರ್ಗಾವಣೆಯಾದ ಸರ್ಕಾರಿ ನೌಕರರು ಇದನ್ನು ಪಡೆಯಬಹುದು.
*ಹಾಗೆಯೆ ಖಾಸಗಿ ಕಂಪನಿಗಳ ಉದ್ಯೋಗಿಗಳು ಈ ಸರಣಿಯನ್ನು ತೆಗೆದುಕೊಳ್ಳಬಹುದು, ಅವರ ಕಚೇರಿಗಳು ಕನಿಷ್ಠ ನಾಲ್ಕು ರಾಜ್ಯಗಳಲ್ಲಿವೆ ಮತ್ತು ಅವರನ್ನು ಅಲ್ಲಿಗೆ ವರ್ಗಾಯಿಸಬಹುದು. ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.