Bhagyalakshmi Serial In Hindi: ಹಿಂದಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಭಾಗ್ಯ ಲಕ್ಷ್ಮಿ ಸೀರಿಯಲ್.

Bhagyalakshmi Serial In Hindi: ಕಲರ್ಸ್ ಕನ್ನಡ ಚಾನಲ್ (Colors Kannada Channel)ಅಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮಿ (Bhagya Lakshmi) ಧಾರಾವಾಹಿ ಇತ್ತೀಚಿಗೆ ಶುರು ಆದರೂ ಸಹ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ.

ಈ ಧಾರಾವಾಹಿ ಅಲ್ಲಿ ಬರುವ ಪ್ರತಿಯೊಬ್ಬರ ಪಾತ್ರವು ಸಹ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ಈ ಧಾರಾವಾಹಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ.

Kannada Bhagya Lakshmi serial to be aired in Hindi.
Image Credit: hindustantimes

ಭಾಗ್ಯ ಲಕ್ಷ್ಮಿ ಧಾರಾವಾಹಿ
ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಸಾರವಾಗುವ ಭಾಗ್ಯ ಲಕ್ಷ್ಮಿ ಧಾರಾವಾಹಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ನೋಡುತ್ತಾರೆ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಿರೂಪಕಿಯಾದ ಸುಷ್ಮಾ ಅವರು ನಟಿಸುತ್ತಿದ್ದಾರೆ.

ನಿರೂಪಕಿ ಆಗಿ ಜನರ ಮನ ಗೆದ್ದ ನಟಿ ಸುಷ್ಮಾ ಈಗ ಧಾರಾವಾಹಿ ಮೂಲಕ ನಟನೆಯಲ್ಲಿಯೂ ಜನರ ಮನ ಗೆಲ್ಲುತ್ತಿದ್ದಾರೆ. ಅಕ್ಕ ತಂಗಿಯ ಪ್ರೀತಿಯ ಆಧಾರಿತ ಭಾಗ್ಯ ಲಕ್ಷ್ಮಿ ಧಾರಾವಾಹಿ ಆಗಿದೆ.

Kannada serial Bhagyalakshmi will be dubbed in Hindi
Image Credit: voot

ಭಾಗ್ಯ ಲಕ್ಷ್ಮಿ ಧಾರಾವಾಹಿ ಹಿಂದಿಯಲ್ಲಿ
ಭಾಗ್ಯ ಲಕ್ಷ್ಮಿ ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಧಾರಾವಾಹಿ ಹಿಂದಿಯಲ್ಲಿ ಪ್ರಸಾರವಾಗಲಿದೆಯಂತೆ.

Join Nadunudi News WhatsApp Group

ಸದ್ಯದಲ್ಲಿ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಯಲ್ಲಿ ಬರಲಿದೆಯಂತೆ. ಅಕ್ಕ ತಂಗಿ ಕಥೆ ಆಧಾರಿತ ಈ ಧಾರಾವಾಹಿಯಲ್ಲಿ ತಂಗಿಗಾಗಿ ಏನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ತಂಗಿ ದಾಟಲ್ಲ. ತಂಗಿದೆ ಅಕ್ಕ ಶ್ರೀರಾಮನಂತ ಹುಡುಗನನ್ನು ಹುಡುಕಲುತ್ತಿದ್ದಾಳೆ.

Kannada serial Bhagyalakshmi will be telecast in Hindi language
Image Credit: voot

ಇದೆ ಕಥೆ ಆಧಾರಿತ ಈ ಧಾರಾವಾಹಿ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ನಟ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟನ ಪಾತ್ರ ಅಚ್ಚುಕಟ್ಟಾಗಿ ಮೂಡಿಬರುತ್ತಿದ್ದು ಜನರು ಮೆಚ್ಚಿಕೊಂಡಿದ್ದಾರೆ. ಇನ್ನು ದಿನಕಳೆಯುತ್ತಿದ್ದಂತೆ ಈ ಧಾರಾವಾಹಿ ಮತ್ತಷ್ಟು ಜನಪ್ರಿಯತೆ ಹೆಚ್ಚಿಸಿಕೊಳ್ಳಲಿದೆ.

Join Nadunudi News WhatsApp Group