NCAP: ಎಲ್ಲಾ ಕಾರುಗಳಿಗೆ ಇನ್ನುಮುಂದೆ ಈ ಪರೀಕ್ಷೆ ಕಡ್ಡಾಯ, ದೇಶದಲ್ಲಿ ಜಾರಿಗೆ ಬಂತು ಹೊಸ ನಿಯಮ.
ದೇಶಾದ್ಯಂತ ಅಕ್ಟೊಬರ್ 1 ರಿಂದ ಭಾರತ್ ಏನ್ ಸಿ ಏ ಪಿ ಜಾರಿಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
Bharat NCAP Test: ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಗ್ರಾಹಕರಿಗೆ ಅನುಗುಣವಾಗಿವೆ ರೀತಿಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯವರೆಗೂ ಕಾರುಗಳು ಬಿಡುಗಡೆಯಾಗಿವೆ. ಇದೀಗ ಹೊಸ ಕಾರು ಖರೀದಿಸುವವರಿಗೆ ಸುರಕ್ಷತೆಯು ಹೆಚ್ಚಿನ ಆದ್ಯತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅಕ್ಟೊಬರ್ 1 ರಿಂದ ಹೊಸ ನಿಯಮ ಜಾರಿ
ಅಕ್ಟೋಬರ್ 1 ರಿಂದ ಭಾರತ್ ಏನ್ ಸಿ ಏ ಪಿ ಭಾರತ್ ನ್ಯೂ ಕಾರ್ ಅಸೆಸ್ ಮೆಂಟ್ ಅಡಿ ದೇಶದಲ್ಲಿ ದೊರೆಯುವ ಕಾರುಗಳಿಗೆ ಸೇಫ್ಟಿ ರೇಟಿಂಗ್ ನೀಡಲಿದೆ. ಭಾರತ್ ಏನ್ ಸಿ ಏ ಪಿ ಜಾರಿಯಿಂದ ನೂತನ ಕಾರು ಕೊಂಡುಕೊಳ್ಳುವವರಿಗೆ ಅವುಗಳ ಸುರಕ್ಷತಾ ವಿಚಾರದಲ್ಲಿ ಹೆಚ್ಚಿನ ತಿಳುವಳಿಕೆ ಮೂಡುತ್ತದೆ.
ಸೇಫ್ಟಿ ವಿಚಾರವಾಗಿ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಭಾರತ್ ಏನ್ ಸಿಎಪಿ ಮಾನದಂಡಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ವಯಸ್ಕ ಹಾಗು ಮಕ್ಕಳ ರಕ್ಷಣೆ ಪಾದಚಾರಿ ಸ್ನೇಹಿ ವಿನ್ಯಾಸ ಹಾಗು ಕಾರಿನ ಸುರಕ್ಷತಾ ವೈಶಿಷ್ಟ್ಯಗಳು ಪ್ರಮುಖವಾಗಿದೆ.
ಭಾರತ್ ಏನ್ ಸಿ ಏ ಪಿ ಟೆಸ್ಟ್
ಭಾರತ್ ಏನ್ ಸಿ ಏ ಪಿ ಟೆಸ್ಟ್ ಪೆಟ್ರೋಕಾಲ್ ಗಳು, ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ಪೆಟ್ರೋ ಕಾಲ್ ಗಳಿಗೆ ಹೋಲಿಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗ್ಲೋಬಲ್ ಏನ್ ಸಿ ಪಿಸಿಯಂತೆಯೇ 1 -5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ತಿಳಿಸಿದೆ. ವಾಹನ ತಯಾರಕ ಕಂಪನಿಗಳಿಗೆ ಕಾರುಗಳನ್ನು ಸ್ವಯಂ ಪ್ರೇರಿತವಾಗಿ ಭಾರತ್ ಏನ್ ಸಿ ಏ ಪಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರ ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ್ 1 ರಿಂದ ದೇಶಾದ್ಯಂತ ಜಾರಿಗೊಳಿಸಲು ಹೊರಟಿರುವ ಭಾರತ್ ಏನ್ ಸಿ ಎಪಿಗೆ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೋಟಾ ಸ್ಕೊಡಾ, ಕಿಯಾ ಮತ್ತು ಮಹಿಂದ್ರಾ ಕಂಪನಿಗಳು ಸ್ವಾಗತಿಸಿವೆ.
ಸದ್ಯ ದೇಶದಲ್ಲಿ ಖರೀದಿಗೆ ದೊರೆಯುವ ಕಾರುಗಳು ಗ್ಲೋಬಲ್ ಏನ್ ಸಿಎಪಿ ಟೆಸ್ಟ್ ಗೆ ಒಳಗಾಗುತ್ತವೆ. ಈ ಬಗ್ಗೆ ಮಹಿಂದ್ರಾ ಆಟೋಮೋಟಿವ್ ಟೆಕ್ನಲಾಜಿಯ ವೆಲುಸಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಭಾರತ್ ಏನ್ ಸಿ ಏ ಪಿ ಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.