Sridevi Bhyrappa Father: ದೊಡ್ಮನೆಯ ಎಷ್ಟು ಸಾಲವನ್ನ ಶ್ರೀದೇವಿ ತೀರಿಸಿದ್ದಾರೆ ಗೊತ್ತಾ…? ಶ್ರೀದೇವಿ ತಂದೆ ಹೇಳಿದ ಮಾತು

ಯುವ ಶ್ರೀದೇವಿ ಡೈವೋರ್ಸ್ ಬಗ್ಗೆ ಬೈರಪ್ಪ ಮಾತು

Bhyrappa About Sridevi And Yuva Rajkumar Divorce: ಸದ್ಯ ಚಂದನವನದಲ್ಲಿ ಡೈವೋರ್ಸ್ ವಿಚಾರ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಡೈವೋರ್ಸ್ ಬೆನ್ನಲ್ಲೇ ದೊಡ್ಮನೆಯ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಜೋಡಿ ಕೂಡ ವಿಚ್ಛೇದನವನ್ನ ಪಡೆದುಕೊಂಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಶ್ರೀದೇವಿ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ಈ ದಂಪತಿಗಳ ನಡುವೆ ವಿಚ್ಛೇದನ ಪಡೆಯುವಂತಹ ಘಟನೆ ಏನಾಗಿರಬಹುದು..? ಸದ್ಯ ಈ ಬಗ್ಗೆ ಶ್ರೀದೇವಿ ಅವರ ತಂದೆ ಮಾಧ್ಯಮದವರ ಮುಂದೆ ಮಾತನಾಡಿದ್ದಾರೆ.

Sridevi And Yuva Rajkumar Divorce
Image Credit: Times Now News

ದೊಡ್ಮನೆಯ ಸಾಲವನ್ನ ತೀರಿಸಿದ ಶ್ರೀದೇವಿ
ನನ್ನ ಮಗಳಿಗೆ ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದವರು ತುಂಬ ಟಾರ್ಚರ್‌ ಕೊಟ್ಟಿದ್ದಾರೆ, ಕೀಳಾಗಿ ನೋಡಿದ್ದಾರೆ. ಬೇಕಾಬಿಟ್ಟಿಯಾಗಿ ಆಕೆಯನ್ನು ಇರಿಸಿಕೊಂಡಿದ್ದಾರೆ. ಮಗಳ ಜತೆಗೆ ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇಷ್ಟಾದರೂ ರಾಜ್‌ಕುಮಾರ್‌ ಅಕಾಡೆಮಿ ಮಾಡಿದ್ದೇ ನನ್ನ ಮಗಳು. ನನ್ನ ಮಗಳಿಂದ ಅವರಿಗೆ ಕೋಟ್ಯಂತರ ರೂಪಾಯಿ ಲಾಭ ಆಗಿದೆ. ಕೋಟ್ಯಂತರ ರೂಪಾಯಿ ಸಾಲ ತೀರಿಸಿದ್ದೇ ಅವಳು. ಯುವ ಅವರ ತಂದೆ ಸಾಲ ಆಗಿದ್ದೇಕೆ ಹೊಟೇಲ್‌ ಮಾರುವ ನಿರ್ಧಾರಕ್ಕೆ ಬಂದಿದ್ದರು. ಅದನ್ನ ಮಾರಬೇಡಿ ಅಂತ ಮೂರು ಕೋಟಿ ಸಾಲ ತೀರಿಸಿದ್ದು ನನ್ನ ಮಗಳು. ಸಾಲ ತೀರಿಸಿದ ಮೇಲೆ ಮತ್ತೆ ಸಾಲ ಮಾಡಲು ಶುರು ಮಾಡಿದ್ದಾರೆ.

ಯುವ ಶ್ರೀದೇವಿ ಡೈವೋರ್ಸ್ ಬಗ್ಗೆ ಬೈರಪ್ಪ ಮಾತು
ನವೆಂಬರ್‌ನಲ್ಲಿ ನಾನು ನನ್ನ ಹೆಂಡತಿ ಅವರ ಮನೆಗೆ ಹೋದಾಗ ನನ್ನ ಮಗಳ ಜತೆಗೆ ಮಾತನಾಡಲು ಯುವ ತಂದೆ ಅವಕಾಶವೇ ಕೊಡಲಿಲ್ಲ. ಯುವ ಸಿನಿಮಾ ಶುರುವಾದ ಮೇಲೆ ಸಮಸ್ಯೆ ಶುರುವಾಯ್ತು. ಅರ್ಧ ಸಿನಿಮಾ ಆಗೋವರೆಗೂ ಎಲ್ಲವೂ ಸರಿಯಾಗಿತ್ತು. ನನ್ನ ಮಗಳೂ ಯುವ ಜತೆಗೆ ಸೆಟ್‌ಗೆ ಹೋಗಿ ಬರುತ್ತಿದ್ದಳು. ಅವಳು ಯಾವಾಗ ಅಮೆರಿಕಕ್ಕೆ ಹೋಗಿ ಆರು ತಿಂಗಳು ಎಜುಕೇಶನ್‌ ಮುಗಿಸಿಕೊಂಡು ಬಂದಳೋ ಆಗಿನಿಂದ ಈ ಸಮಸ್ಯೆ ಶುರು ಆಗಿದೆ ಎಂದು ಶ್ರೀದೇವಿ ತಂದೆ ಬೈರಪ್ಪ ಹೇಳಿಕೆ ನೀಡಿದ್ದಾರೆ.

Bhyrappa About Sridevi And Yuva Rajkumar Divorce
Image Credit: Hosakannada

ಅಪ್ಪು ಇದ್ದಿದ್ರೆ ಇಷ್ಟೆಲ್ಲ ಆಗ್ತಾನೆ ಇರ್ಲಿಲ್ಲ
ಯುವ ರಾಜಕುಮಾರ್ ಈ ರೀತಿಯಾಗಲು ಅವರ ಅಪ್ಪ ಅಮ್ಮನೇ ಕಾರಣ. ಈ ಮೊದಲು ಅಶ್ವಿನಿ ಪುನೀತ್ ರಾಜಕುಮಾರ್ ಬೈದು ಬುದ್ದಿ ಹೇಳುತ್ತಿದ್ರು ಆದರೆ ಅವರ ಮಾತು ಕೇಳಿಲ್ಲ. ಪುನೀತ್ ಇದ್ದಿದ್ರೆ ಇಷ್ಟೆಲ್ಲ ಆಗ್ತಾನೆ ಇರ್ಲಿಲ್ಲ ಅಂತ ಶ್ರೀದೇವಿ ತಂದೆ ಭೈರಪ್ಪ ಮಾಧ್ಯಮಗಳ ಜತೆ ಹೇಳಿಕೊಂಡಿದ್ದಾರೆ.

Join Nadunudi News WhatsApp Group

Sridevi And Yuva Rajkumar Divorce Update
Image Credit: Oneindia

Join Nadunudi News WhatsApp Group