School Schemes: ರಾಜ್ಯದಲ್ಲಿ ನಿಂತುಹೋಗಿದ್ದ ಬಹುದೊಡ್ಡ ಯೋಜನೆ ಮತ್ತೆ ಆರಂಭ, ಸಂತಸದಲ್ಲಿ ಶಾಲಾ ಮಕ್ಕಳು.
ನಿಂತುಹೋಗಿದ್ದ ಶಾಲಾ ಮಕ್ಕಳ ಬಹುದೊಡ್ಡ ಯೋಜನೆಯನ್ನ ಮತ್ತೆ ಆರಂಭಿಸಲು ಈಗ ಸರ್ಕಾರ ಮುಂದಾಗಿದೆ.
Bicycle Distribution: ಕರ್ನಾಟಕ ನೂತನ ಸರ್ಕಾರ ಈಗ ರಾಜ್ಯದಲ್ಲಿ ಹಲವು ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗುತ್ತಿದೆ ಎಂದು ಹೇಳಬಹುದು.
ಗೃಹಲಕ್ಷ್ಮಿ, ಭಾಗ್ಯ ಜ್ಯೋತಿ, ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಯನ್ನ ಜಾರಿಗೆ ತಂದಿರುವ ಸರ್ಕಾರ ಈಗ ನಿಂತುಹೋಗಿದ್ದ ಕೆಲವು ಯೋಜನೆಯನ್ನ ಪುನಃ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ. ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸಿಹಿ ಸುದ್ದಿಯನ್ನ ನೀಡಿರುವ ಸಿದ್ದರಾಮಯ್ಯ ಅವರು ಈಗ ದೊಡ್ಡ ಘೋಷಣೆಯನ್ನ ಮಾಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಆರಂಭವಾಗಲಿದೆ ಸೈಕಲ್ ವಿತರಣೆ
ರಾಜ್ಯದಲ್ಲಿ 2006-07 ರಲ್ಲಿ ಆರಂಭಗೊಂಡ ಉಚಿತ ಸೈಕಲ್ ವಿತರಣೆ ಯೋಜನೆ ಸ್ಥಗಿತದಿಂದಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಬಹಳ ತೊಂದರೆಯಾಗಿತ್ತು. ಸೈಕಲ್ ವಿತರಣೆ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದ 8 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ
ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸೈಕಲ್ ವಿತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 2006-07 ರಲ್ಲಿ ಆರಂಭಗೊಂಡ ಉಚಿತ ಸೈಕಲ್ ವಿತರಣೆ ಯೋಜನೆ ಪುನರ್ ಆರಂಭಿಸುವ ಬಗ್ಗೆ ಸಿಎಂ ಸುಳಿವು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೊಸ ನಿರ್ಧಾರ
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಲವು ವರ್ಷಗಳಿಂದ ಸೈಕಲ್ ವಿತರಣೆ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆ ಪುನಾರಂಭಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಹಾಗು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತಂದ ಉಚಿತ ಬೈಸಿಕಲ್ ವಿತರಣೆಯನ್ನು ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೆ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ.