ಬಿಗ್ ಬಾಸ್ ಕನ್ನಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಅತೀ ದೊಡ್ಡ ರಿಯಾಲಿಟಿ ಶೋ ನಲ್ಲಿ ಬಿಗ್ ಬಾಸ್ ಶೋ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ಹೆಚ್ಚಾಗಿ ನೋಡುವ ರಿಯಾಲಿಟಿ ಶೋ ನಲ್ಲಿ ಕನ್ನಡ ಬಿಗ್ ಬಾಸ್ ಶೋ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಬಾರಿ ಬಿಗ್ ಬಾಸ್ ಬಹಳ ರೋಚಕ ಹಂತವನ್ನ ತಲುಪುವ ಸಮಯದಲ್ಲೇ ಲಾಕ್ ಡೌನ್ ಜಾರಿಯಾದ ಕಾರಣ ಬಿಗ್ ಬಾಸ್ ಶೋ ಅನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಹೇಳಬಹುದು. ಇನ್ನು ಅಭಿಮಾನಿಗಳು ಈ ಬಾರಿ ಇವರು ವಿನ್ ಆಗುತ್ತಾರೆ ಅವರು ವಿನ್ ಆಗುತ್ತಾರೆ ಎಂದು ಮಾತನಾಡಿಕೊಳ್ಳುವ ಸಮಯದಲ್ಲೇ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು ಎಂದು ಹೇಳಬಹುದು. ಇನ್ನು ರಾಜ್ಯದಲ್ಲಿ ಈಗ ಲಾಕ್ ಡೌನ್ ಸಡಿಲ ಆಗುತ್ತಿದ್ದು ಬಿಗ್ ಬಾಸ್ ಶೋ ಮತ್ತೆ ಆರಂಭ ಆಗಲಿದೆ ಅನ್ನುವ ಸುದ್ದಿ ಈಗ ಹೊರಬಂದಿದೆ ಎಂದು ಹೇಳಬಹುದು.
ಇನ್ನು ಬಂದಿರುವ ಮಾಹಿತಿಯ ಪ್ರಕಾರ ಕೆಲವು ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಬಿಗ್ ಬಾಸ್ ಶೋ ಯಾವಾಗ ಆರಂಭ ಆಗಲಿದೆ ಮತ್ತು ಯಾವ ಯಾವ ಸ್ಪರ್ಧಿಗಳು ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅರ್ಧದಲ್ಲೇ ನಿಂತಿದ್ದ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗಲಿದೆ. ಬಿಗ್ ಬಾಸ್ ಪ್ರಸಾರವಾಗುವ ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತವಾಗಿ ಮಾಹಿತಿಯನ್ನು ನೀಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಮತ್ತೆ ಅದೇ 12 ಜನರೊಂದಿಗೆ ಬಿಗ್ ಬಾಸ್ ಮತ್ತೆ ಆರಂಭ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದೊಂಥರಾ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನ್ನಿಂಗ್ಸ್ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಮೊದಲ ರನ್ ಓಡಬೇಕು.
ಮೊದಲ ವಿಕೆಟ್ ಉರುಳಿಸಬೇಕು, ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನ್ನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ ಮತ್ತೆ ಪ್ರಾರಂಭವಾಗುತ್ತಾ ಎಂದು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್ ಬಾಸ್ ಮತ್ತೆ ಪ್ರಾರಂಭವಾಗುತ್ತದೆ ಎನ್ನುವ ಸುದ್ದಿ ಸಖತ್ ಖುಷಿಯನ್ನು ತಂದಿದೆ. ಇನ್ನು ಬಿಗ್ ಬಾಸ್ ನಲ್ಲಿ ಏನೆಲ್ಲಾ ಬದಲಾವಣೆಗಳು ಇರಲಿವೆ, ಯಾರೆಲ್ಲಾ ಮನೆಯಲ್ಲಿ ಹೊಸ ಆಟವನ್ನೂ ಶುರು ಮಾಡಲಿದ್ದಾರೆ. ಏನೆಲ್ಲಾ ಹೊಸ ಮಸಾಲೆಯನ್ನು ಬಿಗ್ ಬಾಸ್ ತೆರೆಮೆಲೆ ತರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.