Alia Bhatt: ಗುಟ್ಟಾಗಿ ಇನ್ನೊಂದು ಮದುವೆಯಾದ ನಟಿ ಆಲಿಯಾ ಭಟ್, ವಿಷಯ ಬಹಿರಂಗಪಡಿಸಿದ ಕರಣ್ ಜೋಹರ್.
ಆಲಿಯಾ ಭಟ್ ನ ಎರಡನೇ ಮದುವೆ ಬಗ್ಗೆ ಅಚ್ಚರಿ ಮಾಹಿತಿ ನೀಡಿದ ಕರಣ್ ಜೋಹರ್.
Alia Bhatt Second Marriage: ಬಾಲಿವುಡ್ ನಲ್ಲಿ ಆಲಿಯಾ ಭಟ್ (Alia Bhat) ಹಾಗೂ ರಣವೀರ್ ಕಪೂರ್ (Ranbir Kapoor) ಕ್ಯೂಟ್ ಕಪಲ್ ಆಗಿದ್ದಾರೆ. ಆಲಿಯಾ ಹಾಗೂ ರಣಬೀರ್ ಲವ್ ಸ್ಟೋರಿ ಎಲ್ಲರಿಗು ತಿಳಿದಿರುವುದೇ. ಇನ್ನು ಆಲಿಯಾ ಭಟ್ ಹಾಗೂ ರಣಬೀರ್ ತಮ್ಮ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಆಲಿಯಾ ಭಟ್ ತಮ್ಮ ಮಗುವಿನ ಲಾಲನೆ ಪಾಲನೆ ಜೊತೆಗೆ ಸಿನಿಮಾದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಇನ್ನು ಆಲಿಯಾ ಹಾಗೂ ರಣಬೀರ್ ತಮ್ಮ ಪ್ರೀತಿಯ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಹಾಗೂ ರಣಬೀರ್ ಲವ್ ಸ್ಟೋರಿ ಹೈಲೈಟ್ ಆಗುತ್ತಲೇ ಇರುತ್ತದೆ. ಇನ್ನು ಆಲಿಯಾ ಹಾಗೂ ರಣಬೀರ್ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರ ಮದುವೆಯ ಸಮಯದಲ್ಲಿ ಬಾಲಿವುಡ್ ನಲ್ಲಿ ಬರಿ ಇವರದ್ದೇ ಸುದ್ದಿ ಹರಿದಾಡುತ್ತಿದೆ. ಇದೀಗ ಆಲಿಯಾ ಭಟ್ ಮದುವೆಯ ವಿಚಾರವಾಗಿ ಬಿಗ್ ಅಪ್ಡೇಟ್ ಲಭಿಸಿದೆ. ಯಾರಿಗೂ ತಿಳಿದಿರದ ಆಲಿಯಾ ಮದುವೆಯ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದೆ.
ಆಲಿಯಾ ಭಟ್ ಮದುವೆಯ ಬಗ್ಗೆ ಬಿಗ್ ಅಪ್ಡೇಟ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ಎರಡು ಮದುವೆಯಾಗಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದವರು ಅಚ್ಚರಿ ಪಡುತ್ತಿದ್ದಾರೆ. ಇದೀಗ ಆಲಿಯಾ ಭಟ್ ಎರಡು ಮದುವೆಯ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ (Karan Johar) ಆಲಿಯಾ ಭಟ್ ಅವರ ರಿಯಲ್ ಹಾಗೂ ರೀಲ್ ಮದುವೆಯ ಬಗೆ ಅಚ್ಚರಿಯ ಮಾಹಿತಿ ನೀಡಿದ್ದಾರೆ.
ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಕುದ್ಮಯಿ ಹಾಡಿನ ಬಗ್ಗೆ ಕರಣ್ ಜೋಹರ್ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಕುದ್ಮಯಿ ಹಾಡಿನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ವಿವಾಹ ಸಮಾರಂಭ ನಡೆಯುತ್ತದೆ. ಚಿತ್ರದ ಕ್ರೆಡಿಟ್ ಗಳ ಸಮಯದಲ್ಲಿ ಈ ಹಾಡು ಕಾಣಿಸುತ್ತದೆ. ಹಾಡನ್ನು ಬಿಡುಗಡೆ ಮಾಡುವ ಮುನ್ನ ಕರಣ್ ಹಾಡಿನ ತಯಾರಿಕೆಯ ಹಿಂದಿರುವ ಒಂದು ಆಶ್ಚಯಕರ ಕಥೆಯನ್ನು ವಿವರಿಸಿದ್ದಾರೆ.
ಎರಡು ಮದುವೆಯಾದ ನಟಿ ಆಲಿಯಾ ಭಟ್
ಆಲಿಯಾ ಭಟ್ ಹಾಗು ರಣವೀರ್ ಕಪೂರ್ ಮದುವೆಯ ನಾಲ್ಕು ದಿನದ ಬಳಿಕ ಕುದ್ಮಯಿ ಹಾಡಿನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ರಾಣಿಯ ಕೈಯಲ್ಲಿರುವ ಮೆಹಂದಿಯು ಆಲಿಯಾ ಅವರ ಮದುವೆಯ ನಿಜವಾದ ಮೆಹಂದಿ ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು. ಚಿತ್ರೀಕರಣಕ್ಕಾಗಿ ಅವರು ಮೆಹಂದಿಯ ಬಣ್ಣವನ್ನು ಕಪ್ಪಾಗಿಸಿದ್ದಾರೆ ಎಂದಿದ್ದಾರೆ. ಈ ಮೂಲಕ ಮೇಕಿಂಗ್ ಸಮಯದಲ್ಲಿ ಆಲಿಯಾ ಒಂದು ವಾರದಲ್ಲಿ ಎರಡು ಬಾರಿ ವಿವಾಹವಾದರು ಎಂದಿದ್ದಾರೆ.