Ads By Google

Drone Prathap: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಬಿಗ್ ಬಾಸ್ ಡ್ರೋನ್ ಪ್ರತಾಪ್ ಆಸ್ತಿ ಮೌಲ್ಯ, ಈತನ ಆಸ್ತಿ ಎಷ್ಟು ಗೊತ್ತಾ…?

Drone Prathap

Image Source: India Today

Ads By Google

Bigg Boss Drone Prathap Net Worth: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ರ (Bigg Boss Season 10) ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ (Drone Prathap) ಒಬ್ಬ ಉತ್ತಮ ಆಟಗಾರನಾಗಿದ್ದು, ಅನೇಕ ಅಭಿಮಾನಿಗಳನ್ನು ಹೊಂದಿ ತುಂಬ ಚೆನ್ನಾಗಿ ಗೇಂ ಆಡುತ್ತಿದ್ದಾರೆ. ಬಿಗ್‌ಬಾಸ್‌ ಮನೆ ಸೇರಿದ ದಿನದಿಂದ ಪ್ರತಿದಿನ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಮತ್ತು ಆಸ್ತಿ, ಶಿಕ್ಷಣ ಸೇರಿದಂತೆ ಅವರ ಕುರಿತು ಗೂಗಲ್‌ನಲ್ಲಿ ಸರ್ಚ್‌ ಹೆಚ್ಚಾಗುತ್ತಿದೆ.

ಇತ್ತೀಚಿಗೆ ‘Ticket To Finale’ ಟಾಸ್ಕ್‌ ನಲ್ಲಿ ಡ್ರೋನ್ ಪ್ರತಾಪ್‌ ಗೆ ಅನ್ಯಾಯವಾಗಿದೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೆ ಪ್ರತಾಪ್‌ ಗೆ ಬಿಗ್ ಬಾಸ್‌ ಮೋಸ ಮಾಡಿದೆ ಅಂತ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಲ್ಲದೆ ನಿನ್ನೆ ಸುದೀಪ್ ಅವರು ಪಂಚಾಯಿತಿ ಮಾಡಿ ಈ ಕುರಿತು ಸ್ಪಷ್ಟತೆ ನೀಡಿದರು.

Image Credit: Studybizz

ಡ್ರೋನ್ ಪ್ರತಾಪ್ ಅವರ ಬಿಗ್ ಬಾಸ್ ಜರ್ನಿ

ಡ್ರೋನ್ ಪ್ರತಾಪ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೂ ಮೊದಲು ಪ್ರತಾಪ್ ಅವರು ಡ್ರೋನ್ ವಿಚಾರವಾಗಿ ಸುದ್ದಿಯಲ್ಲಿದ್ದು, ಬಿಗ್ ಮನೆಗೆ ಬಂದ ಮೇಲೂ ಕೂಡ ಸ್ಪರ್ಧಿಗಳಿಂದ ಅವಮಾನಕ್ಕೆ ಒಳಗಾದರು. ನಂತರ ಕಿಚ್ಚನ ಮಾತಿಗೆ ತಲೆದೂಗಿ ಹೇಗೆ ಆಟ ಆಡಬೇಕೆಂದು ತಿಳಿದು ತನ್ನ ಉತ್ತಮ ಆಟವನ್ನು ಪ್ರದರ್ಶಿಸಿದರು. ಆದರೆ ಬಿಗ್ ಮನೆಯಲ್ಲಿ ಮೊನ್ನೆ ನಡೆದ ʼಟಿಕೆಟ್‌ ಟು ಫಿನಾಲೆʼ ಟಾಸ್ಕ್‌ ನಲ್ಲಿ ಡ್ರೋನ್ ಪ್ರತಾಪ್‌ ಗೆ ಅನ್ಯಾಯವಾಗಿದೆ ಅಂತ ಅಭಿಮಾನಿಗಳು ಕಿಡಿಕಾರಿದ್ದರು.

Image Credit: Instagram

ಡ್ರೋನ್‌ ಪ್ರತಾಪ್ ಅವರ ವಯಕ್ತಿಕ ಜೀವನ

ಡ್ರೋನ್ ಪ್ರತಾಪ್ ಅವರು ಜನವರಿ 10, 1998 ರಂದು ಮಂಡ್ಯದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಡ್ರೋನ್ ಪ್ರತಾಪ್ ಭಾರತೀಯ ಯುವ ವಿಜ್ಞಾನಿ, ಎಂಜಿನಿಯರ್ ಮತ್ತು ಉದ್ಯಮಿ ಅಂತ ಹೇಳಲಾಗುತ್ತದೆ. ಅವರು ವಿದ್ಯುತ್ ತ್ಯಾಜ್ಯದಿಂದ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾಗಿ ತಿಳಿದು ಬಂದಿದೆ. 2023 ರ ಹೊತ್ತಿಗೆ, ಡ್ರೋನ್ ಪ್ರತಾಪ್ ಅವರ ನಿವ್ವಳ ಮೌಲ್ಯವು $1 ಮಿಲಿಯನ್ ಡಾಲರ್‌ ಆಗಿದೆ ಎಂದು ವರದಿಯಾಗಿದೆ. ಆದರೆ ಇದು ಅಧಿಕೃತವಲ್ಲ ಮತ್ತು ಇದು ಸುಳ್ಳಾಗಿದೆ. ಡ್ರೋನ್ ಪ್ರತಥಾಪಿ ಅವರ ಒಟ್ಟು ಆಸ್ತಿಯ ಬಗ್ಗೆ ಎಲ್ಲಿಯೂ ಸರಿಯಾದ ವಿವರ ಇಲ್ಲ ಮತ್ತು ಕೆಲವು ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಈಗ ಸಧ್ಯ ಬಿಗ್‌ಬಾಸ್‌ ಕನ್ನಡ 10 ರಲ್ಲಿ ಭಾಗವಹಿಸಿದ್ದಾರೆ ಹಾಗು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in